ಬೆಂಗಳೂರು, ಜ.5- ಬಾಲಿವುಡ್ ಅಲ್ಲದೆ ಇಡೀ ವಿಶ್ವದೆಲ್ಲೆಡೆ ದಾಖಲೆ ಮೇಲೆ ದಾಖಲೆ ಸೃಷ್ಟಿಸಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಧುರಂಧರ್ ಸಿನಿಮಾವು ಬಾಕ್ಸಾಫೀಸ್ ಕೊಳ್ಳೆ ಹೊಡೆದು ನಿರ್ಮಾಪಕರಿಗೆ ಜಾಕ್‌ಪಾಟ್ ತಂದುಕೊಟ್ಟಿದೆ.
ಆದಿತ್ಯರಾವ್ ನಿರ್ದೇಶನದ ಧುರಂಧರ್ ಸಿನಿಮಾವು ಬಿಡುಗಡೆಗೊಂಡ ದಿನದಿಂದಲೂ ಪ್ರೇಕ್ಷಕರ ಹೃದಯ ಗೆದ್ದು ಬಾಕ್ಸಾಫೀಸ್ ಸುಲ್ತಾನನಾಗಿದ್ದು ಒಂದು ತಿಂಗಳ ಅಂತರದಲ್ಲಿ 1200 ಕೋಟಿ ರೂ. ಗೂ ಹೆಚ್ಚು ಮೊತ್ತದ ಗಳಿಕೆ ಕಂಡು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾದ ದಾಖಲೆ ಹಿಂದಿಕ್ಕಿದೆ.
ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಗಳಿಸಿರುವವರ ಸಿನಿಮಾಗಳ ಸಾಲಿನಲ್ಲಿ ರಣವೀರ್ ಸಿಂಗ್, ಅಕ್ಷಯ್ ಖನ್ನಾ ಹಾಗೂ ಸಂಜಯ್‌ದತ್ ಅಭಿನಯದ ಧುರಿಂಧರ್ ಸಿನಿಮಾವು ಅನಿಮಲ್, ಶಾರುಖ್‌ಖಾನ್ ಅಭಿನಯದ ಪಠಾಣ್, ಜವಾನ್ ಚಿತ್ರಗಳನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿದೆ.
ಪುಷ್ಪ , ಆರ್‌ಆರ್ ಆರ್ ದಾಖಲೆ ಯತ್ತ ಚಿತ್ತ:
ಟಾಲಿವುಡ್ ನ ಮಹೋನ್ನತ ಸಿನಿಮಾಗಳಾದ ಆರ್ ಆರ್ ಆರ್ ಹಾಗೂ ಪುಷ್ಪ 2 ಸಿನಿಮಾಗಳು ಗಳಿಕೆಯಲ್ಲಿ ಧುರಂಧರ್ ಚಿತ್ರಕ್ಕಿಂತ ಮುಂದಿದ್ದು, ಇನ್ನೊಂದೆರಡು ವಾರಗಳಲ್ಲಿ ಅದರ ಗಳಿಕೆಯನ್ನು ಹಿಂದಿಕ್ಕುವುದು ನಿಶ್ಚಿತವಾಗಿದೆ.
ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಚಿತ್ರಗಳು:
ಸರಿಸುಮಾರು 200 ರಿಂದ 300 ಕೋಟಿ ರೂ.ಗಳಲ್ಲಿ ನಿರ್ಮಿಸಿದ್ದ ಧುರಿಂದರ್ ಸಿನಿಮಾವು ಒಂದೇ ತಿಂಗಳಿನಲ್ಲಿ 1217 ಕೋಟಿ ರೂ. ವಹಿವಾಟು ನಡೆಸಿದೆ.
- ದಂಗಲ್- 2000 ಕೋಟಿ
- ಬಾಹುಬಲಿ 2- 1800 ಕೋಟಿ
- ಪುಷ್ಪ 2- 1600 ಕೋಟಿ
- ಆರ್ ಆರ್ ಆರ್-1300 ಕೋಟಿ
- ಧುರಂದರ್- 1217 ಕೋಟಿ
- ಕೆಜಿಫ್2- 1200 ಕೋಟಿ.
