Thursday, April 16, 2026
Homeರಾಜ್ಯಹೊಸದಾಗಿ ರಚನೆಯಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಟ : ಬಿಜೆಪಿ ಮೇಲುಗೈ

ಹೊಸದಾಗಿ ರಚನೆಯಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಟ : ಬಿಜೆಪಿ ಮೇಲುಗೈ

Urban Local Body Election Results Announced: BJP Wins

ಬೆಂಗಳೂರು, ಜ.6- ಹೊಸದಾಗಿ ರಚನೆಯಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಗಳು ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯ ಸ್ಥಾನಗಳಿಗೆ ನಡೆಸ ಉಪಚುನಾವಣೆಗಳ ಫಲಿತಾಂಶವನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಈ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ.

ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 76 ವಾರ್ಡ್‌ಗಳ ಪೈಕಿ ಪ್ರತಿಪಕ್ಷ ಬಿಜೆಪಿ 47ರಲ್ಲಿ , ಆಡಳಿತಾರೂಢ ಕಾಂಗ್ರೆಸ್‌‍ 23ರಲ್ಲಿ, ಜೆಡಿಎಸ್‌‍ ಒಂದರಲ್ಲಿ, ಎಸ್‌‍ಡಿಪಿಐ ಮೂರರಲ್ಲಿ ಹಾಗೂ ಇಬ್ಬರು ಪಕ್ಷೇತರರು ಚುನಾಯಿತರಾಗಿದ್ದಾರೆ.

ಆಯೋಗವು ವೇಳಾಪಟ್ಟಿಯಂತೆ ಚುನಾವಣೆ ನಡೆಸಿ, ಡಿ.24 ರಂದು ಮತ ಎಣಿಕೆ ಕಾರ್ಯವು ಮುಕ್ತಾಯಗೊಂಡಿದೆ. ನಗರ ಸ್ಥಳೀಯ ಸಂಸ್ಥೆವಾರು ಫಲಿತಾಂಶದ ಅಂಕಿ ಅಂಶಗಳ ಅನುಬಂಧಗಳನ್ನು ರಾಜ್ಯ ಚುನಾವಣಾ ಆಯೋಗದ ವೆಬ್‌ಸೈಟ್‌ (https:/karsec.gov.in)ನಲ್ಲಿ ಪ್ರಕಟಿಸಿದೆ.

ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಪಕ್ಷವಾರು ಫಲಿತಾಂಶದ ವಿವಿರ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಒಟ್ಟು ವಾರ್ಡುಗಳು 19ಗಳಲ್ಲಿ ಕಾಂಗ್ರೆಸ್‌‍ -3, ಬಿಜೆಪಿ-14, ಜೆಡಿಎಸ್‌‍-1, ಪಕ್ಷೇತರರು-1 ಅಭ್ಯರ್ಥಿ ಚುನಾಯಿತರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಪಟ್ಟಣ ಪಂಚಾಯತಿಯ ಒಟ್ಟು 19ವಾರ್ಡುಗಳಲ್ಲಿ ಕಾಂಗ್ರೆಸ್‌‍ -4, ಬಿಜೆಪಿ-11, ಎಸ್‌‍ಡಿಪಿಐ-3, ಪಕ್ಷೇತರರು-1 ಅಭ್ಯರ್ಥಿ ಅಯ್ಕೆಯಾಗಿದ್ಧಾರೆ.ಕಿನ್ನಿಗೋಳಿ ಪಟ್ಟಣ ಪಂಚಾಯತಿಯ ಒಟ್ಟು 18 ವಾರ್ಡುಗಳಲ್ಲಿ ಕಾಂಗ್ರೆಸ್‌‍ -8, ಬಿಜೆಪಿ-10 ಹಾಗೂ ಉತ್ತರ ಕನ್ನಡ ಜಿಲ್ಲೆಯ ಮಂಕಿ ಪಟ್ಟಣ ಪಂಚಾಯತಿಯ ಒಟ್ಟು 20 ವಾರ್ಡುಗಳಲ್ಲಿ ಕಾಂಗ್ರೆಸ್‌‍ -8, ಬಿಜೆಪಿ-12 ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ.

ದೊಡ್ಡಬಳ್ಳಾಪುರ ನಗರಸಭೆಯ ವಾರ್ಡ್‌ ಸಂಖ್ಯೆ 21 ಹಾಗೂ ರಾಯಚೂರು ಜಿಲ್ಲೆ ತುರವಿಹಾಳ ಪಟ್ಟಣ ಪಂಚಾಯತಿ ವಾರ್ಡ್‌ ಸಂಖ್ಯೆ 4 ಕ್ಕೆ ನಡೆದ ಉಪಚುನಾವಣೆಗಳಲ್ಲಿ ನಡೆದ ಎರಡೂ ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

RELATED ARTICLES

Latest News