Homeಮನರಂಜನೆತಮಿಳು ಬಿಗ್‌ಬಾಸ್‌‍ ಗೆದ್ದ ದಿವ್ಯಾಗಣೇಶ್‌

ತಮಿಳು ಬಿಗ್‌ಬಾಸ್‌‍ ಗೆದ್ದ ದಿವ್ಯಾಗಣೇಶ್‌

Divya Ganesh scripts history as second wildcard to win Bigg Boss Tamil trophy

ಚೆನ್ನೈ, ಜ.19- ಕಲರ್ಸ್‌ ಕನ್ನಡದಲ್ಲಿ ಬಹು ನಿರೀಕ್ಷೆ ಮೂಡಿಸಿದ್ದ ಬಿಗ್‌ಬಾಸ್‌‍ 12 ವಿಜೇತರಾಗಿ ಗಿಲ್ಲಿನಟ ವಿಜೇತರಾಗಿದ್ದರೆ, ಇತ್ತ ನಿನ್ನೆ ಮುಕ್ತಾಯಗೊಂಡ ತಮಿಳು 9 ಆವೃತ್ತಿಯ ಬಿಗ್‌ಬಾಸ್‌‍ ನಲ್ಲಿ ನಟಿ ದಿವ್ಯಾ ಗಣೇಶ್‌ ಗೆಲುವಿನ ನಗೆ ಬೀರಿದ್ದಾರೆ.

ವಿಜಯ್‌ ಸೇತುಪತಿ ನಡೆಸಿಕೊಟ್ಟ ಬಿಗ್‌ ಬಾಸ್‌‍ 9 ಆವೃತ್ತಿಯಲ್ಲಿ ವೈಲ್ಡ್ ಕಾರ್ಡ್‌ ಎಂಟ್ರಿ ಪಡೆದ ದಿವ್ಯಾಗಣೇಶ್‌ ಇತರ 23 ಸ್ಪರ್ಧಿಗಳಿಗೆ ಪ್ರಬಲ ಪೈಪೋಟಿ ನೀಡಿ ಫೈನಲ್‌ ಗೆ ಪ್ರವೇಶ ಪಡೆದಿದ್ದರು.

ಟಾಪ್‌ 4ಗೆ ಅರ್ಹತೆ ಪಡೆದಿದ್ದ ಸ್ಪರ್ಧಿಗಳಾದ ಶಬರಿನಾಥನ್‌, ವಿಕ್ಕಲ್‌್ಸ ವಿಕ್ರಮ್‌ ಮತ್ತು ಅರೋರಾ ಸಿಂಕ್ಲೇರ್‌ಗೆ ಪ್ರಬಲ ಪೈಪೋಟಿ ನೀಡಿದ ದಿವ್ಯಾಗಣೇಶ್‌ ವಿನ್ನರ್‌ ಆಗಿ ಸುಂದರವಾದ ಟ್ರೋಫಿ ಜೊತೆಗೆ 50 ಲಕ್ಷ ರೂ. ನಗದು ಹಾಗೂ ಮಾರುತಿ ಸುಜುಕಿ ವಿಕ್ಟೋರಿಸ್‌‍ ಕಾರನ್ನು ಬಹುಮಾನವಾಗಿ ಪಡೆದರು.

ಶಬರಿನಾಥ್‌ ಮೊದಲ ರನ್ನರ್‌ ಅಪ್‌ ಆದರೆ, ವಿಕ್ಕಲ್ಸ್ ವಿಕ್ರಮ್‌ ಹಾಗೂ ಅರೋರಾ ಸಿಂಕ್ಲೇರ್‌ ಎರಡನೇ ಹಾಗೂ ಮೂರನೇ ರನ್ನರ್‌ ಅಪ್‌ ಆದರು.ಫೈನಲ್‌ ವಾರಕ್ಕೂ ಮುನ್ನ ಜಾನಪದ ಗಾಯಕ ಗಾನಾ ವಿನೋತ್‌ ಕುಮಾರ್‌ 18 ಲಕ್ಷ ಬಹುಮಾನ ಪಡೆದು ಟ್ರೋಫಿ ಸುತ್ತಿನಿಂದ ದೂರ ಉಳಿದಿದ್ದರು.

2017ರಲ್ಲಿ ಕೆಳದಿ ಕಣಣಿ ಧಾರಾವಾಹಿ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ದಿವ್ಯಾ ಗಣೇಶ್‌, ನಂತರ ವಿನ್ನೈತಾಂಡಿ ವರುವಾಯಾ, ಲಕ್ಷ್ಮಿ ವಂದುಚು , ಭಾಗ್ಯರೇಖಾ, ಸುಮಂಗಲಿ, ಭಾಗ್ಯ ಲಕ್ಷ್ಮಿ, ಮತ್ತು ಚೆಲ್ಲಮ್ಮ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು. ಅಲ್ಲದೆ ದಂಗತೇ ಹಾಗೂ ಕನ್ನಡಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

RELATED ARTICLES

Latest News