Friday, April 24, 2026
Homeಮನರಂಜನೆಡಾ.ರಾಜ್ ಹುಟ್ಟುಹಬ್ಬ : ರಾಜ್ಯದೆಲ್ಲೆಡೆ ಸಂಭ್ರಮ, ಪುಣ್ಯಭೂಮಿಯಲ್ಲಿ ಕುಟುಂಬಸ್ಥರಿಂದ ಪೂಜೆ

ಡಾ.ರಾಜ್ ಹುಟ್ಟುಹಬ್ಬ : ರಾಜ್ಯದೆಲ್ಲೆಡೆ ಸಂಭ್ರಮ, ಪುಣ್ಯಭೂಮಿಯಲ್ಲಿ ಕುಟುಂಬಸ್ಥರಿಂದ ಪೂಜೆ

Dr. Raj's birthday: Celebrations across the state,

ಬೆಂಗಳೂರು,ಏ.24- ಪದಭೂಷಣ ಡಾ.ರಾಜ್‌ಕುಮಾರ್‌ ಅವರ ಹುಟ್ಟುಹಬ್ಬ ಸಂಭ್ರಮ ರಾಜ್ಯದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಭಿಮಾನಿಗಳೇ ದೇವರು ಎಂದು ಕರೆದ ಡಾ.ರಾಜ್‌ಕುಮಾರ್‌ ಅವರ ಕೋಟ್ಯಂತರ ಅಭಿಮಾನಿಗಳು ಇಂದು ಅವರ ಹುಟ್ಟುಹಬ್ಬಕ್ಕೆ ಹಲವು ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಅವರ ಹೆಸರಿನಲ್ಲಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ

ನಗರದ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಡಾ.ರಾಜಕುಮಾರ್‌ ಪುಣ್ಯಭೂಮಿಗೆ ಇಂದು ತಂಡೋಪತಂಡವಾಗಿ ಆಗಮಿಸಿ ಅಭಿಮಾನಿಗಳು ಡಾ.ರಾಜ್‌ ಅವರ ಜಯಘೋಷಗಳನ್ನು ಕೂಗಿ ಅಭಿಮಾನ ಮೆರೆದರು.ಹಲವರು ರಕ್ತದಾನ ಮಾಡಿದರೆ, ಇನ್ನೂ ಕೆಲವರು ಅನ್ನದಾನ ಮಾಡುವ ಮೂಲಕ ತಮ ನೆಚ್ಚಿನ ನಾಯಕನನ್ನು ಸರಿಸಿದರು.

ಇಂದು ಬೆಳಿಗ್ಗೆ ಡಾ.ರಾಜಕುಮಾರ್‌ ಪುಣ್ಯಭೂಮಿಗೆ ರಾಘವೇಂದ್ರ ರಾಜ್‌ಕುಮಾರ್‌, ಲಕ್ಷ್ಮಿ, ಡಾ.ರಾಜ್‌ ಕುಟುಂಬದ ಸದಸ್ಯರು, ಶಾಸಕ ಗೋಪಾಲಯ್ಯ, ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ಸೇರಿದಂತೆ ಹಲವರು ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಈ ವೇಳೆ ವಿನಯ್‌ರಾಜ್‌ಕುಮಾರ್‌ ಸುದ್ದಿಗಾರರೊಂದಿಗೆ ಮಾತನಾಡಿ ಡಾ.ರಾಜ್‌ಕುಮಾರ್‌ರವರಿಗೆ ಭಾರತರತ್ನ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಅಪ್ಪಾಜಿಯವರಿಗಿದ್ದ ಸರಳತೆ ಮತ್ತು ಸಮಾಜದ ಮೇಲಿದ್ದ ಅವರ ಕಾಳಜಿ ಎಂದಿಗೂ ಮರೆಯುವಂತಿಲ್ಲ.

ಕನ್ನಡಿಗರು ಸೇರಿದಂತೆ ಅಸಂಖ್ಯಾತ ಅಭಿಮಾನಿಗಳು ಅವರನ್ನು ಆರಾಧ್ಯ ದೈವ ಎಂದು ಪೂಜಿಸುವುದು ನೋಡಿದರೆ ನನಗೆ ರೋಮಾಂಚನವಾಗುತ್ತದೆ ಎಂದು ಹೇಳಿದರು. ಚಿಕ್ಕವನಾಗಿದ್ದಾಗ ನನಗೆ ಹೇಳಿಕೊಟ್ಟ ಸಂಸ್ಕಾರ ಮರೆಯುವಂತಿಲ್ಲ ಎಂದು ಅವರು ಸರಿಸಿದರು.

ಇದೇ ವೇಳೆ ರಾಜ್ಯದ ನಾನಾ ಕಡೆಗಳಿಂದ ಬಂದಿದ್ದ ಅಭಿಮಾನಿಗಳು ಹೂವಿನ ಹಾರ, ಹೂಗುಚ್ಛಗಳನ್ನು ಡಾ.ರಾಜ್‌ ಸಮಾಧಿಗಿಟ್ಟು ನಮಿಸಿದರು. ಬೆಳಿಗ್ಗೆಯಿಂದಲೇ ಚಿತ್ರರಂಗದ ನಟ-ನಟಿಯರು ಸೇರಿದಂತೆ ಹಲವು ರಾಜಕೀಯ ಮುಖಂಡರು ಭೇಟಿ ನೀಡಿ ನೆಚ್ಚಿನ ನಾಯಕರಿಗೆ ನಮನ ಸಲ್ಲಿಸಿದರು.

RELATED ARTICLES

Latest News