Thursday, April 16, 2026
Homeಮನರಂಜನೆಫೆಬ್ರವರಿಗೆ ತೆರೆಗೆ ಬರಲಿದೆ 'ದಿ ಕೇರಳ ಸ್ಟೋರಿ 2'

ಫೆಬ್ರವರಿಗೆ ತೆರೆಗೆ ಬರಲಿದೆ ‘ದಿ ಕೇರಳ ಸ್ಟೋರಿ 2’

The Kerala Story 2' to hit the screens in February

ಮುಂಬೈ, ಜ.1- ವಿವಾದಗಳ ನಡುವೆಯೂ ಭಾರಿ ಸಂಚಲನ ಮೂಡಿಸಿದ್ದ ದಿ ಕೇರಳ ಸ್ಟೋರಿ ಚಿತ್ರದ ಸಿಕ್ವೇಲ್‌ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.ದಿ ಕೇರಳ ಸ್ಟೋರಿ 2 ಚಿತ್ರೀಕರಣ ಪೂರ್ಣಗೊಂಡಿದ್ದ ಹೊಸ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಲವ್‌ ಜಿಹಾದ್‌ ಕುರಿತ ಈ ಚಿತ್ರ ಹೆಚ್ಚು ಗಂಭೀರ ಹಾಗೂ ಕರಾಳ ಕಥೆಯನ್ನು ಹೊಂದಿದೆ. ಚಿತ್ರೀಕರಣದ ವೇಳೆ ಸಂಪೂರ್ಣ ಗುಪ್ತತೆ ಕಾಪಾಡಕೊಳ್ಳಲಾಗಿತ್ತು ಎನ್ನುವುದು ಚಿತ್ರ ಬಿಡುಗಡೆಯ ಕುತೂಹಲಕ್ಕೆ ಕಾರಣವಾಗಿದೆ.

ದಿ ಕೇರಳ ಸ್ಟೋರಿ ಸಿನಿಮಾದಿಂದ ಒಂದು ಭಯಾನಕ ವಾಸ್ತವ ಬೆಳಕಿಗೆ ಬಂದಿತ್ತು. 2023ರಲ್ಲಿ ಬಿಡುಗಡೆಯಾದ ಸಿನಿಮಾ ಲವ್‌ ಜಿಹಾದ್‌‍ ವಿಷಯವನ್ನು ಆಧರಿಸಿತ್ತು. ಈ ಚಿತ್ರ ಹಲವು ಕಡೆಗಳಲ್ಲಿ ಬ್ಯಾನ್‌ ಆಯಿತು. ಸಿನಿಮಾ ವಿವಾದದಲ್ಲಿ ಸಿಲುಕಿದ್ದರೂ, ಸಿನಿಮಾ ಸಾಕಷ್ಟು ಹಣ ಗಳಿಸಿತು.
ಸುದೀಪ್ತೋ ಸೇನ್‌ ನಿರ್ದೇಶನದ ಈ ಸಿನಿಮಾದಲ್ಲಿ ಅದಾ ಶರ್ಮಾ ಪ್ರಮುಖ ಪಾತ್ರ ವಹಿಸಿದ್ದರು ಅಂತಹ ಚಿತ್ರದ ಸೀಕ್ವೆಲ್‌ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಚಿತ್ರದ ಸ್ಟೋರಿ ಬಗ್ಗೆ ಸೆಟ್‌ನಿಂದ ಯಾವುದೇ ಮಾಹಿತಿ ಸೋರಿಕೆಯಾಗದಂತೆ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.

ದಿ ಕೇರಳ ಸ್ಟೋರಿ ಚಿತ್ರದ ಮುಂದುವರಿದ ಭಾಗದ ಚಿತ್ರೀಕರಣ ಕೂಡ ಪೂರ್ಣಗೊಂಡಿದೆ. ಈಗ ಅಭಿಮಾನಿಗಳು ದಿ ಕೇರಳ ಸ್ಟೋರಿ 2 ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಈ ಚಿತ್ರ ಫೆಬ್ರವರಿಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ದಿ ಕೇರಳ ಸ್ಟೋರಿ ಚಿತ್ರದ ಮುಂದುವರಿದ ಭಾಗವನ್ನು ಈಗಾಗಲೇ ಕೇರಳದಲ್ಲಿ ಚಿತ್ರೀಕರಿಸಲಾಗಿದ್ದು, ವರದಿಗಳ ಪ್ರಕಾರ, ಈ ಭಾಗವು ಹೆಚ್ಚು ಗಂಭೀರ ಮತ್ತು ಕರಾಳ ಕಥೆಯನ್ನು ಒಳಗೊಂಡಿರುತ್ತದೆ.

ದಿ ಕೇರಳ ಸ್ಟೋರಿ 2 ರ ಪಾತ್ರವರ್ಗ ಮತ್ತು ಇತರ ವಿವರಗಳನ್ನು ಗೌಪ್ಯವಾಗಿಡಲಾಗಿದೆ. ದಿ ಕೇರಳ ಸ್ಟೋರಿ 2 ಚಿತ್ರೀಕರಣವನ್ನು ಈಗಾಗಲೇ ಬಹಳ ಸುರಕ್ಷಿತ ರೀತಿಯಲ್ಲಿ ಮಾಡಲಾಗಿದೆ. ನಿರ್ಮಾಪಕ ವಿಪುಲ್‌ ಅಮೃತ್‌ಲಾಲ್‌‍ ಶಾ ಚಿತ್ರೀಕರಣದ ಸಮಯದಲ್ಲಿ ಯಾವುದೇ ಸಮಸ್ಯೆಗಳಾಗದಂತೆ ನೋಡಿಕೊಂಡಿದ್ದಾರೆ.

RELATED ARTICLES

Latest News