Friday, May 24, 2024
Homeರಾಷ್ಟ್ರೀಯಆತ್ಮಹತ್ಯೆಗೆ ಯತ್ನಿಸಿದ ಈರೋಡ್ ಸಂಸದ ಎ.ಗಣೇಶಮೂರ್ತಿ ಸಾವು

ಆತ್ಮಹತ್ಯೆಗೆ ಯತ್ನಿಸಿದ ಈರೋಡ್ ಸಂಸದ ಎ.ಗಣೇಶಮೂರ್ತಿ ಸಾವು

ಈರೋಡ್ ಮಾ 28 (ಪಿಟಿಐ) : ಇತ್ತೀಚೆಗೆ ಆತ್ಮಹತ್ಯೆಗೆ ಯತ್ನಿಸಿದ ಈರೋಡ್ ಕ್ಷೇತ್ರದ ಸಂಸದ ಎ.ಗಣೇಶಮೂರ್ತಿ( 77) ಬೆಳಗ್ಗೆ ಚಿಕಿತ್ಸೆ ಫಲಿಸದೆ ಕೊಯಮತ್ತೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಮಾರ್ಚ್ 24 ರಂದು ಈರೋಡ್‍ನಲ್ಲಿನ ತಮ್ಮ ಮನೆಯಲ್ಲಿ ಕೆಲವು ವಿಷಯುಕ್ತ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಎ.ಗಣೇಶಮೂರ್ತಿ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೊಯಮತ್ತೂರಿನ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈರೋಡ್ ಟೌನ್ ಪೊಲೀಸರು ಈಗಾಗಲೇ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು ಈಗ ಆಸ್ಪತ್ರೆ ವೈದ್ಯಾಧಿಕಾರಿಗಳು ಶವವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದು, ಶವಪರೀಕ್ಷೆಗಾಗಿ ಇನ್‍ಸ್ಟಿಟ್ಯೂಟ್ ಆಫ್ ರೋಡ್ ಟ್ರಾನ್ಸ್‍ಪೋರ್ಟ್ (ಐಆರ್‍ಟಿ) ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತರಲಾಗಿದೆ.

ಮರಣೋತ್ತರ ಪರೀಕ್ಷೆ ಬಳಿಕ ಇಲ್ಲಿಂದ 15 ಕಿ.ಮೀ ದೂರದ ಕುಮಾರವಲಸು ಗ್ರಾಮಕ್ಕೆ ಕೊಂಡೊಯ್ದು ಅಲ್ಲಿ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಡಿಎಂಕೆ ಪಕ್ಷದ ಮೂಲಗಳು ತಿಳಿಸಿವೆ. ಗಣೇಶಮೂರ್ತಿ ಅವರು 2019 ರಲ್ಲಿ ಡಿಎಂಕೆ ಪಕದಷದಿಂದ ಸ್ರ್ಪಧಿಸಿ ಸಂಸದರಾಗಿ ಆಯ್ಕೆಯಾದರು. ಅವರು ಈ ಹಿಂದೆ 1998 ರಲ್ಲಿ ಪಳನಿ ಮತ್ತು 2009 ರಲ್ಲಿ ಈರೋಡ್‍ನಿಂದ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದರು.ಗಣೇಶಮೂರ್ತಿ ಅವರು ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಘಟನೆ ಸಂಬಂಧ ಹಲವಾರು ಮಾತುಗಳು ಕೇಳಿಬರುತ್ತಿದೆ.ಈರೋಡ್ ಟೌನ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎ.ಗಣೇಶಮೂರ್ತಿ ಅಕಾಲಿಕ ನಿಧನಕ್ಕೆ ಸಿಎಂ ಸ್ಟಾಲೀನ್ ,ಮಾಜಿ ಸಿಎಂ ಪಳನಿಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News