Monday, June 24, 2024
Homeರಾಜಕೀಯಶಾಮನೂರು ಶಿವಶಂಕರಪ್ಪ ಅಸಮಾಧಾನ ತಣಿಸುವ ಹೊಣೆ ಈಶ್ವರ್ ಖಂಡ್ರೆ ಹೆಗಲಿಗೆ

ಶಾಮನೂರು ಶಿವಶಂಕರಪ್ಪ ಅಸಮಾಧಾನ ತಣಿಸುವ ಹೊಣೆ ಈಶ್ವರ್ ಖಂಡ್ರೆ ಹೆಗಲಿಗೆ

ಬೆಂಗಳೂರು,ಅ.6- ಕಾಂಗ್ರೆಸ್‍ನ ಹಿರಿಯ ನಾಯಕ ಶ್ಯಾಮನೂರು ಶಿವಶಂಕರಪ್ಪ ಅವರ ಅಸಮಾಧಾನವನ್ನು ತಣಿಸುವ ಜವಾಬ್ದಾರಿಯನ್ನು ಸಚಿವರೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ವಹಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆ ಕರೆದಿದ್ದ ಕಾಂಗ್ರೆಸ್‍ನ ಸಚಿವರು ಹಾಗೂ ಶಾಸಕರ ಔತಣಕೂಟದಲ್ಲಿ ಹಲವಾರು ಮಹತ್ವದ ವಿಚಾರಗಳು ಚರ್ಚೆಯಾಗಿವೆ. ಅದರಲ್ಲಿ ಶ್ಯಾಮನೂರು ಶಿವಶಂಕರಪ್ಪ ನೀಡಿರುವ ಲಿಂಗಾಯತರಿಗೆ ಅನ್ಯಾಯವಾಗಿದೆ ಎಂಬ ಹೇಳಿಕೆ ಪ್ರಮುಖವಾಗಿ ವಿಮರ್ಶೆಗೆ ಒಳಗಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಯಾಮನೂರು ಅವರ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮನ್ನೇ ಗುರಿಯಾಗಿಸಿಕೊಂಡು ಮಾಡುತ್ತಿರುವ ಟೀಕೆಗೆ ಸಂಪುಟದ ಸಚಿವರುಗಳು ಮೌನ ಸಮ್ಮತಿ ವ್ಯಕ್ತಪಡಿಸುತ್ತಿದ್ದಾರೆ ಎಂಬ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಿ.ಕೆ.ಹರಿಪ್ರಸಾದ್ ಅವರು ಆಡಳಿತ ವ್ಯವಸ್ಥೆಯಲ್ಲಿ ಕೆಲಸ ಮಾಡಿಲ್ಲ. ಅವರ ಟೀಕೆಗಳು ಬೇರೆಯ ಸ್ವರೂಪದಲ್ಲಿರುತ್ತವೆ. ಆದರೆ ಶ್ಯಾಮನೂರು ಶಿವಶಂಕರಪ್ಪ ಅವರು ಸಂಪುಟದಲ್ಲಿ ಸಚಿವರಾಗಿದ್ದವರು, ಹಿರಿಯ ನಾಯಕರು, ಶಾಸಕರಾಗಿ ಸುದೀರ್ಘ ಅನುಭವ ಹೊಂದಿದ್ದಾರೆ. ಆಡಳಿತ ಯಂತ್ರ ಹೇಗೆ ಕೆಲಸ ಮಾಡುತ್ತದೆ ಎಂಬ ಮಾಹಿತಿ ಅವರಿಗಿದೆ. ಅಂತವರು ಸಾರ್ವಜನಿಕವಾಗಿ ಹೇಳಿಕೆ ನೀಡುವುದು ಬೇಕಿರಲಿಲ್ಲ ಎಂದು ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಯಾರಿಗಾದರೂ ತೊಂದರೆಯಾಗಿದ್ದರೆ ಅದನ್ನು ನೇರವಾಗಿ ತಮ್ಮ ಬಳಿ ಚರ್ಚೆ ಮಾಡಬಹುದಿತ್ತು. ಎಲ್ಲರ ಮಾತನ್ನೂ ಕೇಳಲು ತಾವು ಸಿದ್ಧರಿದ್ದು, ಯಾರನ್ನೂ ನಿರ್ಲಕ್ಷಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹಿರಿಯ ನಾಯಕರುಗಳ ಟೀಕೆಗಳು ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಹಾನಿ ಉಂಟುಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದಿರಬೇಕು ಎಂದು ಹೇಳಿದ್ದಾರೆ.

ಬರಪೀಡಿತ ಪ್ರದೇಶಗಳಲ್ಲಿ ಕೇಂದ್ರ ತಂಡಗಳಿಂದ ಪರಿಸ್ಥಿತಿ ಅವಲೋಕನ

ಇಂತಹ ವಿವಾದಾತ್ಮಕ ಹೇಳಿಕೆ ಕೇಳಿಬಂದ ಸಂದರ್ಭದಲ್ಲಿ ಸಚಿವರು ತಕ್ಷಣ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಬೇಕು. ಶ್ಯಾಮನೂರು ಅವರ ಹೇಳಿಕೆಗೆ ಶಾಸಕರಾದ ಬಸವರಾಜರಾಯರೆಡ್ಡಿ ಅವರು ಪತ್ರಿಕಾಗೋಷ್ಠಿ ನಡೆಸಿ, ಸ್ಪಷ್ಟನೆ ನೀಡಿದ್ದಾರೆ. ಉಳಿದಂತೆ ಎಲ್ಲಾ ಸಚಿವರೂ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಂಪುಟದಲ್ಲಿ 8 ಮಂದಿ ಲಿಂಗಾಯತ ಸಮುದಾಯ ಸಚಿವರಿದ್ದಾರೆ. ಶ್ಯಾಮನೂರು ಶಿವಶಂಕರಪ್ಪ ಅವರು ಹೇಳಿಕೆ ನೀಡಿದ ಬಳಿಕ ಯಾರೂ ಅವರನ್ನು ಭೇಟಿ ಮಾಡಿ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿಲ್ಲ. ಇದು ಬೇರೆ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಲಿದೆ. ಮುಂದಿನ ದಿನಗಳಲ್ಲಿ ಸಚಿವರು ಜಾಗರೂಕರಾಗಿರಬೇಕು. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪ್ರತಿಯೊಂದು ವಿಷಯವೂ ಸೂಕ್ಷ್ಮ ಹಾಗೂ ಸಂಕೀರ್ಣವಾಗಿದ್ದು, ನಾವು ಕಾಲಕಾಲಕ್ಕೆ ಅದಕ್ಕೆ ಪ್ರತಿಕ್ರಿಯಿಸದೇ ಇದ್ದರೆ ರಾಜಕೀಯವಾಗಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಭಯೋತ್ಪಾದಕರು, ಜಿಹಾದಿಗಳು ಮತ್ತು ಗುಂಡಾಗಳ ತಾಣವಾಗಿದೆ : ಬಿಜೆಪಿ ವಾಗ್ದಾಳಿ

ಪಂಚಖಾತ್ರಿಗಳ ವಿಷಯದಲ್ಲಿ ನಕಾರಾತ್ಮಕ ಪ್ರಚಾರ ಹೆಚ್ಚಾಗುತ್ತಿದೆ. ಅಭಿವೃದ್ಧಿಗೆ ಹಣ ನೀಡಲಾಗುತ್ತಿಲ್ಲ ಎಂಬ ವ್ಯಾಖ್ಯಾನಗಳು ಕೇಳಿಬರುತ್ತಿವೆ. ಬಜೆಟ್‍ನಲ್ಲಿ ಘೋಷಣೆ ಮಾಡಿದ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲು ತಮ್ಮ ಸರ್ಕಾರ ಬದ್ಧವಾಗಿದೆ. ಉಳಿದಂತೆ ಹಿಂದಿನ ಸರ್ಕಾರದ ಯೋಜನೆಗಳಲ್ಲಿ ಕೆಲವು ಲೋಪದೋಷಗಳಿದ್ದು, ಅವುಗಳ ತನಿಖೆಯಾಗದ ಹೊರತು ಮುಂದುವರೆಸುವುದು ಸರಿಯಲ್ಲ. ಈ ವಾಸ್ತವತೆಯನ್ನು ಜನಪ್ರತಿನಿಗಳು ಅರ್ಥ ಮಾಡಿಸುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

RELATED ARTICLES

Latest News