Thursday, February 29, 2024
Homeಇದೀಗ ಬಂದ ಸುದ್ದಿಶೆಟ್ಟರ್ ಮರಳಿ ತರುವ ಮೂಲಕ ಬಿಜೆಪಿ ರಣಕಹಳೆ

ಶೆಟ್ಟರ್ ಮರಳಿ ತರುವ ಮೂಲಕ ಬಿಜೆಪಿ ರಣಕಹಳೆ

ಬೆಂಗಳೂರು,ಜ.26- ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಮರಳಿ ಪಕ್ಷಕ್ಕೆ ಕರೆತರುವ ಮೂಲಕ ಬಿಜೆಪಿ ಲೋಕಸಮರದ ರಣಕಹಳೆ ಮೊಳಗಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ್ದರಿಂದ ಮುನಿಸಿಕೊಂಡು ಕಾಂಗ್ರೆಸ್ ಸೇರಿದ್ದ ಮಾಜಿ ಶೆಟ್ಟರ್ ಬಿಜೆಪಿಗೆ ಮರಳಿರು ವುದು ಬಿಜೆಪಿಯ ಮಹತ್ವದ ಬೆಳವಣಿಗೆಗಳಲ್ಲಿ ಒಂದು.

ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಮಾತೃ ಪಕ್ಷಕ್ಕೆ ಮರಳಲು ಬಲವಾದ ಕಾರಣವೊಂದನ್ನು ಕಂಡುಕೊಂಡಿದ್ದಾರೆ. ಬಿಜೆಪಿ ಈಗಾಗಲೇ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ಆರಂಭಿಸಿದ್ದು, ನಾಯಕರು ಗೆಲ್ಲುವ ಸಾಮಥ್ರ್ಯ ಇರುವವರಿಗೇ ಟಿಕೆಟ್ ನೀಡುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಈ ಬಾರಿ ರಾಜ್ಯದಲ್ಲಿಯೇ ಹೈವೋಲ್ಟೇಜ್ ಹಣಾಹಣಿಗೆ ಸಾಕ್ಷಿಯಾಗಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಮಲ ಪಾಳಯದ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ತೀವ್ರವಾಗಿದೆ.

2004ರಿಂದ ನಿರಂತರ ನಾಲ್ಕು ಬಾರಿ ಸುರೇಶ್ ಅಂಗಡಿ ಅವರು ಸಂಸದರಾಗಿ ಆಯ್ಕೆಯಾಗಿದ್ದರು. ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ 2021ರಲ್ಲಿ ನಡೆದ ಉಪಚುನಾವಣೆಯಲ್ಲಿ ಪ್ರಬಲ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ವಿರುದ್ಧ ಸುರೇಶ್ ಅಂಗಡಿ ಪತ್ನಿ ಮಂಗಳಾ ಅಂಗಡಿ ಅವರು ಅನುಕಂಪದ ಆಧಾರದಲ್ಲಿ 5,240 ಮತಗಳ ಅಂತರದ ಗೆಲುವು ಸಾಸಿ ಸಂಸತ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿ ದ್ದರು.

ಈ ಬಾರಿ ಮಂಗಳಾ ಅಂಗಡಿ ಅವರ ಬದಲಾಗಿ ಟಿಕೆಟ್ ಯುವ ಮುಖಕ್ಕೆ ನೀಡಲು ಬಿಜೆಪಿ ತೀರ್ಮಾನ ಮಾಡಿರುವ ಕುರಿತು ಚರ್ಚೆಗಳು ನಡೆದಿದೆ. ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿದ್ದ ಸುರೇಶ್ ಅಂಗಡಿ ಅವರ ಪುತ್ರಿ, ಜಗದೀಶ ಶೆಟ್ಟರ್ ಸೊಸೆ ಶ್ರದ್ಧಾ ಶೆಟ್ಟರ್ ಅವರನ್ನು ಬಿಜೆಪಿ ಕಣಕ್ಕಿಳಿಸುವ ಎಲ್ಲಾ ಸಾಧ್ಯತೆಗಳಿವೆ.
ಸೊಸೆ ಬಿಜೆಪಿ ಅಭ್ಯರ್ಥಿಯಾಗಿ, ಮಾವ ಕಾಂಗ್ರೆಸ್ ಪಕ್ಷದಲ್ಲಿದ್ದರೆ ಪ್ರಚಾರದ ವೇಳೆ ಮುಜುಗರ ಅನುಭವಿಸಬೇಕಾಗಬಹುದು ಎಂದು ಚುನಾವಣೆ ಘೋಷಣೆಗೆ ಮೊದಲು ಶೆಟ್ಟರ್ ಅವರು ಕಮಲ ಪಾಳಯಕ್ಕೆ ಮರಳಿ ಪುನರ್ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ದಿಢೀರ್ ದೆಹಲಿ ಮಟ್ಟದಲ್ಲಿ ಶೆಟ್ಟರ್ ಅವರು ಪಕ್ಷಕ್ಕೆ ಮರಳಲು ಇದು ಪ್ರಮುಖ ಕಾರಣ ಎಂದು ಹಲವು ಆಯಾಮಗಳಲ್ಲಿ ಅಂದಾಜಿಸಲಾಗಿದೆ. ಶೆಟ್ಟರ್ ಪುತ್ರ, ಶ್ರದ್ಧಾ ಪತಿ ಸಂಕಲ್ಪ್ ಅವರು ತಂದೆ ಪಕ್ಷಕ್ಕೆ ಮರಳಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ನಮ್ಮ ಕುಟುಂಬ ಜನಸಂಘದ ಕಾಲದಿಂದ ಸಂಘಟನೆ ಮಾಡಿಕೊಂಡು ಬಂದಿದೆ. ನಮ್ಮ ತಂದೆ ಮೋದಿ ಅವರ ಪರವಾಗಿ ಕೆಲಸ ಮಾಡಲಿದ್ದಾರೆ ಎಂದಿದ್ದಾರೆ. ಈ ವೇಳೆ ಸಂಸದೆ ಮಂಗಳಾ ಅಂಗಡಿ ಕೂಡ ಜತೆಯಲ್ಲಿದ್ದರು.

ಸುರೇಶ್ ಅಂಗಡಿ ನಿಧನದ ನಂತರ ಬೆಳಗಾವಿ ಲೋಕಸಭೆ ಉಪ ಚುನಾವಣೆ ವೇಳೆ ಸೊಸೆ ಶ್ರದ್ಧಾಗೆ ಟಿಕೆಟ್ ಕೊಡಿಸಲು ಜಗದೀಶ ಶೆಟ್ಟರ್ ದೆಹಲಿ ಸೇರಿದಂತೆ ರಾಜ್ಯಮಟ್ಟದಲ್ಲಿ ತೀವ್ರ ಲಾಬಿ ನಡೆಸಿದ್ದರು. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದ ಶ್ರದ್ಧಾ ಸದ್ದಿಲ್ಲದೇ ಬಿಜೆಪಿ ಶಾಸಕರು, ಮುಖಂಡರನ್ನು ಭೇಟಿ ಮಾಡಿದ್ದರು. ತಾಯಿಗೆ ಟಿಕೆಟ್ ಸಿಕ್ಕಿದ ಬಳಿಕ ಕ್ಷೇತ್ರದೆಲ್ಲೆಡೆ ಪ್ರಚಾರದಲ್ಲಿಯೂ ತೊಡಗಿಸಿಕೊಂಡಿದ್ದರು.

ಶೆಟ್ಟರ್ ಬಿಟ್ಟು ಹೋಗಿದ್ದು ಒಳ್ಳೆಯದಾಯಿತು : ಡಿಕೆಶಿ

ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ರಾಜಕಾರಣದ ತೆರೆಯ ಹಿಂದೆ ಸರಿದಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಗನಿಗೆ ರಾಜ್ಯಾಧ್ಯಕ್ಷ ಪಟ್ಟ ಸಿಗುತ್ತಿದ್ದಂತೆ ಸಕ್ರಿಯರಾಗಿದ್ದಾರೆ. ಜಗದೀಶ್ ಶೆಟ್ಟರ್ ಅವರನ್ನು ಕರೆದುಕೊಂಡು ಬರುವ ಮೂಲಕ ಪುತ್ರ ವಿಜಯೇಂದ್ರಗೆ ಶಕ್ತಿ ತುಂಬುವಲ್ಲಿ ಬಿಎಸ್‍ವೈ ಯಶಸ್ವಿಯಾಗಿದ್ದಾರೆ.
ಜಗದೀಶ್ ಶೆಟ್ಟರ್ ಬೆನ್ನಲ್ಲೇ ಪಕ್ಷ ತೊರೆದವ ರನ್ನು ವಾಪಸ್ ಕರೆತರಲು ಯಡಿಯೂರಪ್ಪ ಮುಂದಾಗಿದ್ದು, ಶೆಟ್ಟರ್ ಬೆನ್ನಲ್ಲೇ ಇಬ್ಬರು ಪ್ರಮುಖ ನಾಯಕರನ್ನು ಯಡಿಯೂರಪ್ಪ ಸಂಪರ್ಕಿಸಿದ್ದಾರೆ ಎನ್ನಲಾಗಿದೆ.

ಅಥಣಿ ಶಾಸಕ ಲಕ್ಷ್ಮಣ ಸವದಿ ಮತ್ತು ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಅವರನ್ನು ಯಡಿಯೂರಪ್ಪ ಸಂಪರ್ಕಿಸಿದ್ದಾರಂತೆ. ಕಳೆದ ಟಿಕೆಟ್ ಸಿಗದ ಹಿನ್ನೆಲೆ ಸವದಿ ಕಾಂಗ್ರೆಸ್ ಸೇರಿದ್ದರೆ, ಜನಾರ್ಧನ ರೆಡ್ಡಿ ಹೊಸ ಪಕ್ಷವನ್ನೇ ಸ್ಥಾಪಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಈ ಇಬ್ಬರ ಜೊತೆಯಲ್ಲಿ ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿರುವ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಘರ್ ವಾಪಸಿ ಮೂಲಕ ಬಿಜೆಪಿಗೆ ಕರೆತರಲು ಯಡಿಯೂರಪ್ಪ ಪ್ಲಾನ್ ಮಾಡಿಕೊಂಡಿದ್ದಾರಂತೆ.
ಲಕ್ಷ್ಮಣ ಸವದಿ ಜೊತೆಯಲ್ಲಿ ಶಶಿಕಲಾ ಜೊಲ್ಲೆ ಸೇರಿದಂತೆ ಬೆಳಗಾವಿ ಭಾಗದ ನಾಯಕರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸವದಿ ಹಿಂದಿರುಗಿದರೆ ಬೆಳಗಾವಿ ಭಾಗದಲ್ಲಿ ಬಿಜೆಪಿಗೆ ಬಹುದೊಡ್ಡ ಶಕ್ತಿ ಬಂದಂತಾಗುತ್ತದೆ ಎಂಬುವುದು ಕಮಲ ವರಿಷ್ಠರ ಪ್ಲಾನ್ ಆಗಿದೆ.

ಜನಾಧರ್Àನ ರೆಡ್ಡಿ ಕರೆತರಲು ಆಪ್ತ ಗೆಳೆಯ, ಮಾಜಿ ಸಚಿವ ಶ್ರೀರಾಮುಲು ಪ್ರಯತ್ನಿಸುತ್ತಿದ್ದಾರೆ. ಶೀಘ್ರವೇ ರೆಡ್ಡಿ ಜೊತೆ ಹೈಕಮಾಂಡ್ ನಾಯಕರ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಜನಾಧರ್ನ ರೆಡ್ಡಿ ಮರಳಿಸಿದ್ರೆ ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ ಗೆಲ್ಲುವ ತಂತ್ರವನ್ನು ಬಿಜೆಪಿ ಹಾಕಿಕೊಂಡಿದೆ. ಇನ್ನು ಪೂರ್ಣಿಮಾ ಶ್ರೀನಿವಾಸ್ ಜೊತೆ ನೇರವಾಗಿ ಯಡಿಯೂರಪ್ಪ ಅವರೇ ಮಾತನಾಡಿದ್ದಾರೆ ಎನ್ನಲಾಗಿದೆ.

RELATED ARTICLES

Latest News