Sunday, October 13, 2024
Homeರಾಜ್ಯಹೆಚ್.ಡಿ.ರೇವಣ್ಣ ಮಧ್ಯಂತರ ಜಾಮೀನು ಸೋಮವಾರದವರಿಗೆ ಮುಂದುವರಿಕೆ

ಹೆಚ್.ಡಿ.ರೇವಣ್ಣ ಮಧ್ಯಂತರ ಜಾಮೀನು ಸೋಮವಾರದವರಿಗೆ ಮುಂದುವರಿಕೆ

ಬೆಂಗಳೂರು,ಮೇ17-ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ಸ್ವೀಕಾರದ ಕುರಿತ ಮೇ.20ಕ್ಕೆ ಎಸಿಎಂಎಂ ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ.

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜಾಮೀನು ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ 42ನೇ ಎಸಿಎಂಎಂ ನ್ಯಾಯಾಲಯ ತೀರ್ಪು ಕಾಯ್ದಿರಿಸಿದ್ದು ಎಚ್ ಡಿ ರೇವಣ್ಣ ಅವರ ಮಧ್ಯಂತರ ಜಾಮೀನನ್ನ ಮೇ.20 ರ ವರೆಗೆ ಮುಂದುವರೆಸಿದೆ. ನಿನ್ನೆ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ರೇವಣ್ಣ ಅವರಿಗೆ ಒಂದು ದಿನದ ಮಟ್ಟಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಇಂದು ಮಧ್ಯಾಹ್ನ ಮತ್ತೆ ವಿಚಾರಣೆ ಕೈಗೆತ್ತಿಕೊಂಡಾಗ ಎಸ್‍ಐಟಿ ಪರ ವಕೀಲರಾದ ಜಾಯ್ನಾ ಕೊಠಾರಿ ಅವರು ಪ್ರಬಲ ವಾದ ಮಂಡಿಸಿ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.

ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಇಬ್ಬರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. FIR ದಾಖಲಾದ 354 ಸೆಕ್ಷನ್ ಹಾಕಲಾಗಿತ್ತು. ಸಂತ್ರಸ್ತೆ ವಿಚಾರಣೆ ಬಳಿಕ 376 ಸೆಕ್ಷನ್ ಸೇರಿಸಲಾಗಿದೆ ಎಂದು ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಆರೋಪಗಳು ಮತ್ತು FIR ನಲ್ಲಿ ದಾಖಲಾದ ಅಂಶಗಳ ವಿವರಗಳನ್ನು ನ್ಯಾಯಾಲಯಕ್ಕೆ ನೀಡಿದರು.

ಇಬ್ಬರ ವಿರುದ್ಧ ಅತ್ಯಾಚಾರ ದೂರು ದಾಖಲಾಗಿದ್ದು, ದೂರು ವಿಭಜಿಸಲು ಸಾಧ್ಯವಿಲ್ಲ. ಜಾಮೀನು ಅರ್ಜಿ ಮ್ಯಾಜಿಸ್ಟ್ರೇಟ್ ಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ. 376 ಸೆಕ್ಷನ್‍ನಡಿ FIR ದಾಖಲಾಗಿರುವುವದರಿಂದ 436 ಅಡಿ ಜಾಮೀನು ಅರ್ಜಿ ಊರ್ಜಿತವಾಗುವುದಿಲ್ಲ. ಇದು ಜಾಮೀನು ರಹಿತ ಅಪರಾಧ. ಆರೋಪ ಪಟ್ಟಿ ಸಲ್ಲಿಸಿದ ನಂತರವೇ ಯಾರ ಮೇಲೆ ಏನು ಆರೋಪ ಎಂದು ತಿಳಿಯಲಿದೆ. ಇಬ್ಬರ ವಿರುದ್ಧ ತನಿಖೆ ನಡೆಯುತ್ತಿದೆ. ಹೀಗಾಗಿ ಜಾಮೀನು ನೀಡಬಾರದೆಂದು ಹೇಳಿದರು.

ಎಸ್‍ಐಟಿ ಪರ ವಕೀಲರಾದ ಅಶೋಕ್ ನಾಯಕ್ ವಾದ ಮಂಡಿಸಿ, ಎಚ್.ಡಿ.ರೇವಣ್ಣ ಅವರು ಪ್ರಭಾವಿ ರಾಜಕಾರಣಿ. ಅವರಿಗೆ ಮಧ್ಯಂತರ ಜಾಮೀನು ನೀಡಬಾರದಿತ್ತು ಎಂದು ಹೇಳಿದಾಗ, ಇದನ್ನು ನೀವು ಮೇಲಿನ ಕೋರ್ಟ್‍ನಲ್ಲಿ ಪ್ರಶ್ನಿಸಬಹುದೆಂದು ನ್ಯಾಯಾ„ೀಶರು ಹೇಳಿದರು. ಇಬ್ಬಿಬ್ಬರು ಸರ್ಕಾರಿ ಪರ ಅಭಿಯೋಜಕರು ವಾದ ಮಂಡಿಸುತ್ತಿರುವುದಕ್ಕೆ ಎಚ್.ಡಿ.ರೇವಣ್ಣ ಪರ ವಕೀಲರಾದ ಸಿ.ವಿ.ನಾಗೇಶ್ ಆಕ್ಷೇಪ ವ್ಯಕ್ತಪಡಿಸಿದರು.ನನ್ನ ಕ್ಷಕ್ಷಿದಾರರಾದ ರೇವಣ್ಣ ವಿರುದ್ಧ ಜಾಮೀನು ನೀಡಬಹುದಾದಂತಹ ಪ್ರಕರಣಗಳು ದಾಖಲಾಗಿದೆ.

ಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲೂ ಜಾಮೀನು ನೀಡಬಹುದಾಗಿದೆ. ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಬೇಕೆಂದು ಎಂದು ಮನವಿ ಮಾಡಿದರು. ರೇವಣ್ಣ ವಿರುದ್ದ ಎ-ïಐಆರ್ ದಾಖಲಿಸಿರುವುದೇ ಕಾನೂನು ಬಾಹಿರ ಸಂತ್ರಸ್ಥ ಮಹಿಳೆ ಹೊಳೆನರಸೀಪುರ ಠಾಣೆಗೆ ಹೋಗಿಯೇ ಇಲ್ಲ,ಬೆಂಗಳೂರಿಗೆ ಬಂದಿದ್ದ ಸಬ್‍ಇನ್‍ಸ್ಪೆಕ್ಟರ್‍ರೊಬ್ಬರು ದೂರು ಪಡೆದುಕೊಂಡಿದ್ದಾರೆ,ತಮಗೆ ತೋಚಿದ ರೀತಿಯಲ್ಲಿ ದೂರು ಬರೆಸಿಕೊಂಡಿದ್ದಾರೆ,ಲೈಂಗಿಕ ದೌರ್ಜನ್ಯ ಬೇರೆ,ಅತ್ಯಾಚಾರ ಬೇರೆ,ಆ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಂದು ಹೇಳುವುದಕ್ಕೇ ಬರುವುದಿಲ್ಲ ,ಇದು ಟೈಪ್ ಮಾಡಿ ಸಿದ್ದಪಡಿಸಿಕೊಂಡಿರುವ ದೂರು ಎಂದು ಪ್ರಭಲ ವಾದ ಮಂಡಿಸಿದರು.

ಸಂತ್ರಸ್ಥೆ ನೀಡಿರುವ ದೂರಿನಲ್ಲಿ ಸಾಕಷ್ಟು ವ್ಯತ್ಯಾಸವಿದೆ,ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಅವರಿಗೆ ಮನೆ ಖಾಲಿ ಮಾಡಿ ನಾಲ್ಕೂವರೆ ವರ್ಷ ಆದ ಮೇಲೆ ಗೊತಾಗಿದೆ ಎಂದು ದೂರಿನಲ್ಲಿರುವ ವ್ಯತ್ಯಾಸದ ಬಗ್ಗೆ ಎಳೆಎಳೆಯಾಗಿ ಬಿಡಿಸಿಟ್ಟರು. ಚುನಾವಣಾ ಸಂದರ್ಭದಲ್ಲಿ ಈ ಆರೋಪ ಕೇಳಿಬಂದಿರುವುದರಿಂದ ಇದು ರಾಜಕೀಯ ಷಡ್ಯಂತ್ರದ ಭಾಗವಾಗಿದೆ ಎಂದರು ಆರಂಭದಲ್ಲಿ 376 ಸೆಕ್ಷನ್ ಹಾಕಿಲ್ಲ ಎಂದು ಉಲೇಕಿಸಿ ಹಿನ್ನಲೆಯಲ್ಲಿ ನಿರೀಕ್ಷಣಾ ಜಾಮೀನಿನ ಅರ್ಜಿ ವಾಪಸ್ ಪಡೆಯಲಾಗಿತ್ತು ಆದರೆ ಈಗ 376 ಇದೆ ಎಂದು ಹೇಳಲಾಗುತ್ತಿದೆ ಆಗಾಗಿದ್ದರೆ ನಾವು ನಿರೀಕ್ಷಣಾ ಜಾಮೀನಿನ ಅರ್ಜಿ ವಾಪಸ್ ಪಡೆಯುತ್ತಿರಲಿಲ್ಲ ಎಂದು ಹೇಳಿದರು .ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ ಮೇ20ಕ್ಕೆ ತೀರ್ಪು ಕಾಯ್ದಿರಿಸಿತು.

RELATED ARTICLES

Latest News