Saturday, November 23, 2024
Homeರಾಜ್ಯನಕಲಿ ಪೊಲೀಸರ ಕೈಚಳಕ, ಮಹಿಳೆಯ ಮಾಂಗಲ್ಯ ಸರ ಅಪಹರಣ

ನಕಲಿ ಪೊಲೀಸರ ಕೈಚಳಕ, ಮಹಿಳೆಯ ಮಾಂಗಲ್ಯ ಸರ ಅಪಹರಣ

ಗೌರಿಬಿದನೂರು, ಆ. 20- ಆಟೋಗಾಗಿ ಕಾಯುತ್ತಿದ್ದ ಮಹಿಳೆಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಪೊಲೀಸರು ಎಂದು ಜಾಗೃತಿ ನೀಡುವ ನೆಪದಲ್ಲಿ ಮಹಿಳೆಯ ಮಾಂಗಲ್ಯ ಸರವನ್ನು ಅಪಹರಿಸಿರುವ ಘಟನೆ ನಗರದ ಸಮೀಪದ ಕಲ್ಲೂಡಿ ಗ್ರಾಮದ ಕ್ರಾಸ್ ಬಳಿ ಜರುಗಿದೆ.
ನಂಜಮ್ಮ ಕಲ್ಲೂಡಿ ಗ್ರಾಮದ ವಾಸಿ ಮಾಂಗಲ್ಯ ಸರವನ್ನು ನಕಲಿ ಪೊಲೀಸರಿಂದ ವಂಚಿತಳಾದ ಮಹಿಳೆ.

ಕಲ್ಲೂಡಿ ಗ್ರಾಮದ ವಾಸಿ ನಂಜಮ್ಮ ನಿನ್ನೆ ಕಲ್ಲೂಡಿಯ ಕಲೆಂತ್ರೇಶ್ವರ ದೇವಾಲಯಕ್ಕೆ ತೆರಳಲು ಆಟೋಗಾಗಿ ಕಲ್ಲೂಡಿ ಕ್ರಾಸ್ ಬಳಿ ಕಾದು ನಿಂತಿದ್ದ ಸಂದರ್ಭದಲ್ಲಿ ಹಿಂದೂಪುರ ರಸ್ತೆಯ ಕಡೆಯಿಂದ ಬೈಕ್‍ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಆಟೋಗಾಗಿ ಕಾಯುತ್ತಿದ್ದ ನಂಜಮ್ಮನ ಬಳಿ ಬೈಕ್ ನಿಲ್ಲಿಸಿ ನಾವು ಪೊಲೀಸರು ನೀವು ಈ ರೀತಿ ಮಾಂಗಲ್ಯ ಸರವನ್ನು ಹೊರಗಡೆ ಹಾಕಿಕೊಳ್ಳಬಾರದು, ಇತ್ತೀಚಿನ ದಿನಗಳಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ ಎಂದು ಹೇಳಿ ಚೈನ್ ನಿಮ್ಮ ಸೆರಗಿನಲ್ಲಿ ಕಟ್ಟಿಕೊಳ್ಳುವಂತೆ ತಿಳಿಸಿದ್ದಾರೆ.

ಅದರಂತೆ ನಂಜಮ್ಮ ತನ್ನ ಮಾಂಗಲ್ಯ ಸರವನ್ನು ಸೆರಗಿನಲ್ಲಿ ಕಟ್ಟಿಕೊಳ್ಳವ ಸಮಯದಲ್ಲಿ ಆಕೆ ಗಮನ ಬೇರೆಡೆಗೆ ಸೆಳೆದು ಸೆರಗಿನಲ್ಲಿದ್ದ ಸರವನ್ನು ತೆಗೆದುಕೊಂಡು ಕಲ್ಲುಗಳನ್ನು ಇಟ್ಟಿದ್ದಾರೆ, ನಂಜಮ್ಮ ಸೆರಗಿನಲ್ಲಿ ಕಲ್ಲುಗಳನ್ನು ಕಟ್ಟಿಕೊಂಡು ಆಟೋ ಹತ್ತಿ ದೇವಾಲಯದ ಕಡೆಗೆ ಹೊರಟಿದ್ದ ಸಂದರ್ಭದಲ್ಲಿ ಸೆರಗು ಬಿಚ್ಚಿ ನೋಡಿದಾಗ ಸೆರಗಿನಲ್ಲಿ ಕಲ್ಲುಗಳು ಇರುವುದನ್ನು ಕಂಡು ನನ್ನ ಸರ ಕಳ್ಳತನವಾಗಿದ ಎಂದು ಚೀರಿಕೊಂಡಳು. ಆದರೆ ಅಷ್ಟೊತ್ತಿಗೆ ಕಳ್ಳರು ಚೈನು ಕಸಿದುಕೊಂಡು ಪರಾರಿಯಾಗಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೇ ನಗರ ಠಾಣೆಯ ಎಸ್‍ಐ ಚಂದ್ರಕಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂಜಮ್ಮನ ಬಳಿ ಹೇಳಿಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಒಟ್ಟಾರೆ ಗೌರಿಬಿದನೂರು ನಗರದಲ್ಲಿ ದಿನೇ ದಿನೇ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ, ಪೊಲೀಸರು ಧ್ವನಿವರ್ಧಕಗಳ ಮೂಲಕ ಎಷ್ಟೇ ಜಾಗೃತಿ ಮೂಡಿಸಿದರೂ ಸಹ ಸಾರ್ವಜನಿಕರು ಇಂತಹ ವಂಚನೆಗಳಿಗೆ ಒಳಗಾಗುತ್ತಿರುವುದರಿಂದ ಪ್ರಕರಣಗಳು ಮರುಕಳಿಸುತ್ತಿವೆ.

RELATED ARTICLES

Latest News