Saturday, November 23, 2024
Homeರಾಷ್ಟ್ರೀಯ | Nationalದಯಾಮರಣ ಕೋರಿ ಸುಪ್ರೀಂ ಮೆಟ್ಟಿಲೇರಲು ಸಿದ್ದವಾದ ಕೇರಳ ಕುಟುಂಬ

ದಯಾಮರಣ ಕೋರಿ ಸುಪ್ರೀಂ ಮೆಟ್ಟಿಲೇರಲು ಸಿದ್ದವಾದ ಕೇರಳ ಕುಟುಂಬ

ತಿರುವನಂತಪುರಂ,ಜ.28- ಅಪರೂಪದ ಜನ್ಮಜಾತ ಕಾಯಿಲೆಯಿಂದ ಬಳಲುತ್ತಿರುವ ತಮ್ಮ ಮಕ್ಕಳಿಗೆ ಚಿಕಿತ್ಸೆ ಮುಂದುವರಿಸುವ ಪ್ರಯತ್ನಗಳು ವಿಫಲವಾದ ನಂತರ ಕೇರಳದ ಕೊಟ್ಟಾಯಂನ ದಂಪತಿ ತಮ್ಮ ಕುಟುಂಬದ ಎಲ್ಲಾ ಐವರು ಸದಸ್ಯರಿಗೆ ದಯಾಮರಣ ನೀಡಲು ಅನುಮತಿ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

ದಂಪತಿಗಳಾದ ಸ್ಮಿತಾ ಆಂಟೋನಿ ಮತ್ತು ಮನು ಜೋಸೆಫ್, ಈ ಜಿಲ್ಲೆಯ ಕೊಝುವನಾಲïನವರು. ತಮ್ಮ ಮೂರು ಮಕ್ಕಳಲ್ಲಿ ಇಬ್ಬರ ಚಿಕಿತ್ಸೆಯನ್ನು ಮುಂದುವರಿಸಲು ಯಾವುದೇ ಮಾರ್ಗವನ್ನು ಕಂಡುಕೊಳ್ಳಲು ಸಾಧ್ಯವಾಗದ ಕಾರಣ ದಯಾ ಮರಣಕ್ಕಾಗಿ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಲು ನಿರ್ಧರಿಸಿದರು. ಈ ಎರಡೂ ಮಕ್ಕಳು ಸಾಲ್ಟ-ವೇಸ್ಟಿಂಗ್ ಕಂಜೆನಿಟಲ್ ಅಡ್ರಿನಲ್ ಹೈಪಪ್ರ್ಲಾಸಿಯಾನಿಂದ ಬಳಲುತ್ತಿದ್ದಾರೆ.

ತಾವಿಬ್ಬರೂ ವೃತ್ತಿಯಲ್ಲಿ ನರ್ಸ್‍ಗಳಾಗಿದ್ದರೂ, ಎರಡನೇ ಮತ್ತು ಮೂರನೇ ಮಕ್ಕಳನ್ನು ಸಂಪೂರ್ಣವಾಗಿ ನೋಡಿಕೊಳ್ಳಲು ಮನೆಯಲ್ಲಿಯೇ ಇರಬೇಕಾಗಿರುವುದರಿಂದ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಸ್ಮಿತಾ ಹೇಳಿದರು. ಅವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸ್ಯಾಂಟ್ರಿನ್ ಮತ್ತು ಸ್ಯಾಂಟೊಯೊ ಇಬ್ಬರಿಗೂ ಸಾಲ್ಟ-ವೇಸ್ಟಿಂಗ್ ಕಂಜೆನಿಟಲ್ ಅಡ್ರಿನಲ್ ಹೈಪಪ್ರ್ಲಾಸಿಯಾ ರೋಗ ಇದೆ ಎಂದು ಹೇಳಲಾಗಿದೆ. ಈ ಕಾರಣದಿಂದ ಮೊದಲ ಮಗು ಕೂಡ 90 ರಷ್ಟು ಸ್ವಲೀನತೆಯಿಂದ ಬಳಲುತ್ತಿದೆ.

ಇನ್ನು ಮಕ್ಕಳ ಚಿಕಿತ್ಸಾ ವೆಚ್ಚ ಭರಿಸಲು ಹಾಗೂ ಮಕ್ಕಳಿಗೆ ಔಷಧ ಖರೀದಿಸಲು ಆಸ್ತಿಯನ್ನು ಅಡವಿಟ್ಟು ಮಾರಾಟ ಮಾಡಿರುವುದಾಗಿ ತಿಳಿಸಿದರು. ಸ್ಮಿತಾ ಮಾತನಾಡಿ, ನಾವು ನಮ್ಮ ದೈನಂದಿನ ಖರ್ಚು, ಚಿಕ್ಕ ಮಕ್ಕಳ ಚಿಕಿತ್ಸೆ ಮತ್ತು ಹಿರಿಯ ಮಗುವಿನ ಶಿಕ್ಷಣವನ್ನು ಪೂರೈಸಲು ಹೆಣಗಾಡುತ್ತಿದ್ದೇವೆ. ಆದಾಯವಿಲ್ಲದ ಕಾರಣ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಡ್ರೋಣ್ ಕ್ಯಾಮೆರಾ ಬಳಕೆ

ಉದ್ಯೋಗ ಮತ್ತು ಚಿಕಿತ್ಸೆಗಾಗಿ ನೆರವು ಕೋರಿ ಸ್ಥಳೀಯ ಪಂಚಾಯತ್ಗೆ ಮನವಿ ಮಾಡಿದರೂ ಅವರು ಯಾವುದೇ ನೆರವು ನೀಡಲಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಕೆಲ ಸಮಯದ ಹಿಂದೆ ಪಂಚಾಯತ್ ಸಮಿತಿಯವರು ಕೂಡಿ ಕೆಲಸ ಕೊಡಿಸಲು ತೀರ್ಮಾನಿಸಿದ್ದರು. ಆದರೆ ಅದರ ಕಾರ್ಯದರ್ಶಿಯವರು ನಿರ್ಣಯದ ಬಗ್ಗೆ ಅಗತ್ಯ ದಾಖಲೆಗಳನ್ನು ಸರ್ಕಾರಕ್ಕೆ ಕಳುಹಿಸಲಿಲ್ಲ ಎಂದು ಅವರು ಹೇಳಿದರು.

ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದರು. ಮಾನವ ಹಕ್ಕುಗಳ ಆಯೋಗದ ಮಧ್ಯಪ್ರವೇಶದ ನಂತರ ಕಾರ್ಯದರ್ಶಿ ಕಡತವನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆ, ಆದರೆ ಇದುವರೆಗೆ ಸಂಬಂಧಿಸಿದ ಕೆಲಸದ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಮಹಿಳೆ ಹೇಳಿದರು.

ಆದ್ದರಿಂದ ನಮ್ಮ ಕುಟುಂಬಕ್ಕೆ ಈಗ ದಯಾಮರಣವನ್ನು ವಿನಂತಿಸುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲ ಎಂದು ಅವರು ಹೇಳಿದರು. ನಾವು ಈಗ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಅನ್ನು ಸಂಪರ್ಕಿಸಲು ಪರಿಗಣಿಸುತ್ತಿದ್ದೇವೆ. ತಮ್ಮ ಕುಟುಂಬ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದೆ ಎಂದು ಸ್ಮಿತಾ ಹೇಳಿದ್ದಾರೆ.

RELATED ARTICLES

Latest News