Saturday, April 27, 2024
Homeರಾಷ್ಟ್ರೀಯಮಾಜಿ ಕೇಂದ್ರ ಸಚಿವ ಹರ್ಮೋಹನ್ ಧವನ್ ನಿಧನ

ಮಾಜಿ ಕೇಂದ್ರ ಸಚಿವ ಹರ್ಮೋಹನ್ ಧವನ್ ನಿಧನ

ನವದೆಹಲಿ,ಜ.28- ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರದ ಮಾಜಿ ಸಚಿವ ಹರ್ಮೋಹನ್ ಧವನ್ (83) ನಿಧನರಾಗಿದ್ದಾರೆ. ಅವರು ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಸರ್ಕಾರದಲ್ಲಿ ಕೇಂದ್ರ ರಾಜ್ಯ ಸಚಿವರಾಗಿದ್ದರು.

ಇದಾದ ನಂತರ ಅವರು ಕಾಂಗ್ರೆಸ್, ಬಿಎಸ್ಪಿ ಮತ್ತು ಬಿಜೆಪಿ ಸೇರಿದರು. ಆದಾಗ್ಯೂ, ಈಗ ಅವರು ಅಮ್ ಆದ್ಮಿ ಪಕ್ಷದೊಂದಿಗೆ (ಎಎಪಿ) ಸಂಬಂಧ ಹೊಂದಿದ್ದರು. ಹರ್ಮೋಹನ್ ಧವನ್ ಚಂಡೀಗಢದಿಂದ ಸಂಸತ್ ಸದಸ್ಯ ಮತ್ತು ಕೇಂದ್ರ ಸಚಿವರಾಗಿದ್ದರು.

1970 ರಲ್ಲಿ ಅವರು ಸಣ್ಣ ಪ್ರಮಾಣದ ಕೈಗಾರಿಕಾ ಘಟಕವನ್ನು ಪ್ರಾರಂಭಿಸಿದರು. 1979ರಲ್ಲಿ ಮೆಹಿಲ್ ಎಂಬ ರೆಸ್ಟೋರೆಂಟ್ ಅನ್ನು ತೆರೆದರು. ಹರ್ಮೋಹನ್ ಧವನ್ 1977 ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದರು ಮತ್ತು ದಿವಂಗತ ಪ್ರಧಾನಿ ಚಂದ್ರಶೇಖರ್ ಅವರಿಂದ ಮಾರ್ಗದರ್ಶನ ಪಡೆದಿದ್ದರು. ಅವರು 1981 ರಲ್ಲಿ ಜನತಾ ಪಕ್ಷದ ಅಧ್ಯಕ್ಷರಾದರು. 1989 ರಲ್ಲಿ ಅವರು ಚಂಡೀಗಢ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾದರು ಮತ್ತು ಚಂದ್ರಶೇಖರ್ ಅವರ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿದ್ದರು.

ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಡ್ರೋಣ್ ಕ್ಯಾಮೆರಾ ಬಳಕೆ

ಅವರು 14 ಜುಲೈ 1940 ರಂದು ಕ್ಯಾಂಪ್ಬೆಲ್ಪುರದ ಫತೇಜಂಗ್ ಜಿಲ್ಲೆಯಲ್ಲಿ (ಈಗ ಪಶ್ಚಿಮ ಪಾಕಿಸ್ತಾನದಲ್ಲಿದೆ) ಜನಿಸಿದ್ದರು. 1947 ರಲ್ಲಿ ಭಾರತ ವಿಭಜನೆಯ ನಂತರ ಅವರ ಕುಟುಂಬ ಭಾರತಕ್ಕೆ ಬಂದಿತು. ಅವರು ಅಂಬಾಲಾ ಕಂಟೋನ್ಮೆಂಟ್‍ನಲ್ಲಿ ಬಹಳ ಕಾಲ ಇದ್ದರು. ಅಲ್ಲಿ ಅವರು ಮೆಟ್ರಿಕ್ಯುಲೇಷನ್ ಮತ್ತು ಎಸ್ಡಿ ಕಾಲೇಜಿನಿಂದ ಇಂಟರ್‍ಮೀಡಿಯೇಟ್ ಮಾಡಿದರು. ಧವನ್ 1960 ರಲ್ಲಿ ತಮ್ಮ ಇಂಟರ್‍ಮೀಡಿಯೇಟ್ ಮುಗಿಸಿದರು. 1960ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ಎಂಎಸ್ಸಿ ಅಧ್ಯಯನ ಮಾಡಿದರು.

RELATED ARTICLES

Latest News