ಜೈಲಿನಿಂದ ಬಿಡುಗಡೆಯಾದ ಬಳಿಕ ಮಗುವಿಗೆ ಜನ್ಮ ನೀಡಿ ಮೃತಪಟ್ಟ ಮಹಿಳೆ

ಕೊರಾಪುಟ್(ಒಡಿಶಾ),ಜ.13- ಉದ್ಯೋಗಕ್ಕಾಗಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ತುಂಬು ಗರ್ಭಿಣಿಯೊಬ್ಬರು ಕೊಲೆ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿ ಜೈಲಿನಿಂದ ಬಿಡುಗಡೆಯಾದ ಮಾರನೇ ದಿನವೇ ಮಗುವಿಗೆ ಜನ್ಮ ನೀಡಿ, ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಒಡಿಸ್ಸಾದ ಮೈಕಾಂಚ್ ಪಂಚಾಯತ್ ವ್ಯಾಪ್ತಿಯ ಅಂದ್ರಾಕಾಂಚ್ ಗ್ರಾಮದ ನಿವಾಸಿ ಮತ್ತು ದಿನಗೂಲಿ ಕಾರ್ಮಿಕರ ಪತ್ನಿ ಮೂವತ್ತು ವರ್ಷದ ಸುಲಬತಿ ನಾಯಕ್ ಬುಧವಾರ ಮತ್ತು ಗುರುವಾರ ಮಧ್ಯರಾತ್ರಿ ಸಾವನ್ನಪ್ಪಿದ್ದಾರೆ. ಈಕೆ ಒಡಿಶಾದ ರಾಯಗಡದಲ್ಲಿ 16 ದಿನಗಳಿಂದ ಜೈಲಿನಲ್ಲಿದ್ದರು. ಕಳೆದ ವರ್ಷ ಡಿಸೆಂಬರ್ 26 ರಂದು […]

ಮೊಬೈಲ್ ಕಳ್ಳನಿಂದ ಎಎಸ್‍ಐ ಕೊಲೆ

ನವದೆಹಲಿ, ಜ .9- ಮೊಬೈಲ್ ಫೋನ್ ಸುಲಿಗೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಹಿಡಿಯಲು ಹೋದ ದೆಹಲಿ ಪೊಲೀಸ್ ಸಹಾಯಕ ಸಬ್ ಇನ್ಸ್‍ಪೆಕ್ಟರ್‍ಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಮೂಲತ ರಾಜಸ್ಥಾನದ ಸಿಕರ್ ಜಿಲ್ಲೆಯವರಾದ ಎಎಸ್‍ಐ ಶಂಭು ದಯಾಳ್ (57) ಅವರು ಪತ್ನಿ, ಒಬ್ಬ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಕಳೆದ ಬುಧವಾರ ದೆಕಲಿಯ ಮಾಯಾಪುರಿ ಮಹಿಳೆಯೊಬ್ಬರು ದುಷ್ಕರ್ಮಿಯೊಬ್ಬ ಬೆದರಿಕೆ ಹಾಕಿ ತಮ್ಮ ಪತಿಯ ಮೊಬೈಲ್ […]

ರೇಸ್‍ ವೇಳೆ ಅಪಘಾತವಾಗಿ ಖ್ಯಾತ ರೇಸರ್ ಕುಮಾರ್ ದುರ್ಮರಣ

ಚೆನ್ನೈ,ಜ.9-ತಮಿಳುನಾಡಿನ ಮದ್ರಾಸ್ ಇಂಟರ್ನ್ಯಾಷನಲ್ ಸಕ್ರ್ಯೂಟ್‍ನಲ್ಲಿ ನಡೆಯುತ್ತಿರುವ ಕಾರ್ ರೇಸ್‍ನಲ್ಲಿ ನಡೆದ ಅಪಘಾತದಲ್ಲಿ ಖ್ಯಾತ ಕಾರ್ ರೇಸರ್ ಸಾವನ್ನಪ್ಪಿದ್ದಾರೆ. ಅವಘಡದಲ್ಲಿ ಮೃತಪಟ್ಟಿರುವ ಕಾರ್ ರೇಸರ್‍ನನ್ನು ಕೆ.ಇ.ಕುಮಾರ್ ಎಂದು ಗುರುತಿಸಲಾಗಿದೆ. ತಮಿಳುನಾಡಿನ ಚೆನ್ನೈನ ಇರುಂಗಾಟುಕೊಟ್ಟೈನಲ್ಲಿರುವ ಮದ್ರಾಸ್ ಇಂಟರ್ನ್ಯಾಷನಲ್ ಸಕ್ರ್ಯೂಟ್‍ನಲ್ಲಿ ನಡೆಯುತ್ತಿರುವ ಎಂಆರ್‍ಎಫ್ ಎಂಎಂಎಸ್‍ಸಿ ಎಫ್‍ಎಂಎಸ್‍ಸಿಐ ಇಂಡಿಯನ್ ನ್ಯಾಷನಲ್ ಕಾರ್ ರೇಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಕುಮಾರ್ ಅವರ ಕಾರು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ಟ್ರಾಕ್‍ನಿಂದ ಹೊರಬಿದ್ದು ಉರುಳಿ ಬಿದ್ದ ಪರಿಣಾಂಮ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಕಾರಿನ ಎಲ್ಲಾ ಭಾಗಗಳು ಕಳಚಿ […]

ವಿಷಾಹಾರ ಸೇವನೆ : ಕೇರಳದ ಯುವತಿ ಮಂಗಳೂರಿನಲ್ಲಿ ನಿಧನ

ಕಾಸರಗೋಡು,ಜ.7- ವಿಷಕಾರಿ ಆಹಾರ ಸೇವನೆಯಿಂದ ಮತ್ತೊಬ್ಬ ಯುವತಿ ಮೃತಪಟ್ಟಿದ್ದು, ಕೇರಳದಲ್ಲಿ ಹೋಟೆಲ್‍ಗಳಲ್ಲಿ ತಿಂಡಿ ತಿನಿಸುಗಳ ಗುಣಮಟ್ಟದ ಬಗ್ಗೆ ವ್ಯಾಪಕ ಚರ್ಚೆ ಶುರುವಾಗಿದೆ. ಕಾಸರಗೋಡಿನ ಅಂಜುಶ್ರೀ ಪಾರ್ವತಿ (19) ಮೃತಪಟ್ಟಿದ್ದು, ಆಕೆಯ ಪೋಷಕರು ರೋಮಂಶಿಯಾ ರೆಸ್ಟೋರೆಂಟ್ ವಿರುದ್ಧ ದೂರು ನೀಡಿದ್ದಾರೆ. ಡಿಸೆಂಬರ್ 31ರಂದು ಆನ್‍ಲೈನ್‍ನಲ್ಲಿ ಕುಂಜಿಮಂತಿಯನ್ನು ತರಿಸಿಕೊಂಡು (ಬಿರಿಯಾನಿ ಮಾದರಿಯ ಅರಬ್ ಶೈಲಿ ಊಟ) ತಿಂದಿದ್ದರು. ಬಳಿಕ ಆಕೆ ಅಸ್ವಸ್ಥಳಾಗಿದ್ದು, ಕಾಸರಗೋಡಿನ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಆಕೆಯನ್ನು ಕರ್ನಾಟಕದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. […]

ಬೈಕ್‍ಗೆ ಟಿಟಿ ವಾಹನ ಡಿಕ್ಕಿ, ಗಾರ್ಮೆಂಟ್ಸ್ ಉದ್ಯೋಗಿ ಸಾವು

ಬೆಂಗಳೂರು, ಜ.3- ಅತಿ ವೇಗವಾಗಿ ಬಂದ ಟಿಟಿ ವಾಹನವೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಗಾರ್ಮೆಂಟ್ಸ್ ಉದ್ಯೋಗಿ ಸಾವನ್ನಪ್ಪಿರುವ ಘಟನೆ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದೆ. ಮೂಲತಃ ಪಾವಗಡದ ಲೋಹಿತ್(23) ಮೃತಪಟ್ಟ ಗಾರ್ಮೆಂಟ್ಸ್ ಉದ್ಯೋಗಿ. ಇವರು ಕೆಂಗೇರಿ ಉಪನಗರದಲ್ಲಿ ವಾಸವಾಗಿದ್ದರು. ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಔಟರ್ ರಿಂಗ್ ರಸ್ತೆಯ ಉಲ್ಲಾಳ ಲೇಕ್ ಸಮೀಪ ಬೈಕ್‍ನಲ್ಲಿ ಕೆಂಗೇರಿ ಉಪನಗರದ ಕಡೆಗೆ ಬರುತ್ತಿದ್ದಾಗ ಅತಿ ವೇಗವಾಗಿ ಬಂದ ಟಿಟಿ […]

ಶ್ರೀ ಸಿದ್ದೇಶ್ವರರ ಅಂತಿಮ ದರ್ಶನಕ್ಕೆ ಹರಿದುಬಂದ ಭಕ್ತಸಾಗರ

ವಿಜಯಪುರ,ಜ.3- ಜ್ಞಾನಯೋಗಾನಂದ ಆಶ್ರಮಕ್ಕೆ ಹರಿದು ಬಂದ ಭಕ್ತ ಕೋಟಿ. ಮುಗಿಲು ಮುಟ್ಟಿದ ಆಕ್ರಂಧನ, ಓಂ ನಮಃ ಶಿವಾಯದ ಮಂತ್ರ ಪಠಣ, ಶ್ರೀಗಳ ಅಂತಿಮ ದರ್ಶನ ಪಡೆಯಲು ರಾಜ್ಯ ಹಾಗೂ ದೇಶದ ವಿವಿಧೆಡೆಯಿಂದ ಭಾರೀ ಸಂಖ್ಯೆಯಲ್ಲಿ ಆಗಮಿಸಿದ ಭಕ್ತ ಸಮೂಹ, ಆಶ್ರಮದ ಆವರಣದಲ್ಲಿ ಎಲ್ಲೆಲ್ಲೂ ಶೋಕಸಾಗರ. ಲಿಂಗೈಕ್ಯರಾದ ಜ್ಞಾನಯೋಗಿ ಖ್ಯಾತ ಪ್ರವಚನಕಾರರು, ಶತಮಾನದ ಸಂತ, 2ನೇ ವಿವೇಕಾನಂದರು ಎಂದೇ ಪ್ರಸಿದ್ದರಾದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಅಂತಿಮ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನರು ಸಾಗರೋಪಾದಿಯಲ್ಲಿ ಹರಿದುಬಂದರು. ರಾಜ್ಯದಿಂದಷ್ಟೇ ಅಲ್ಲ […]

ಕಂಜಾವಾಲ ಅಪಘಾತದ ವೇಳೆ ಸ್ನೇಹಿತೆ ಸ್ಥಳದಿಂದ ಪರಾರಿ

ನವದೆಹಲಿ,ಜ.3- ಕಂಜಾವಾಲ ಅಪಘಾತ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದು, ಮೃತಪಟ್ಟ ಯುವತಿಯ ಜೊತೆಗೆ ಆರಂಭದಲ್ಲಿ ಇದ್ದ ಸ್ನೇಹಿತೆ ಅಪಘಾತ ನಡೆದ ತಕ್ಷಣ ಸಣ್ಣಪುಟ್ಟ ಗಾಯಗಳೊಂದಿಗೆ ಸ್ಥಳದಿಂದ ಪರಾರಿಯಾಗಿರುವುದು ಸ್ಪಷ್ಟವಾಗಿದೆ. ಅಪಘಾತಕ್ಕೆ ಒಳಗಾದ 20 ವರ್ಷದ ಯುವತಿಯ ದೇಹ ಕಾರಿನ ಕೆಳಗೆ ಸಿಲುಕಿದ್ದು, 12 ಕಿಲೋ ಮೀಟರ್ ದೂರ ಎಳೆದುಕೊಂಡು ಹೋಗಿರುವುದು ಪ್ರಕರಣದ ಭೀಕರತೆಯನ್ನು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪ್ರಕರಣದತ್ತ ಹೆಚ್ಚು ಗಮನ ಹರಿಸಿದ್ದಾರೆ. ಆದರೆ ದೆಹಲಿಯ ಪೊಲೀಸರು ಕಳಪೆ ತನಿಕೆ […]

ತೆಲುಗು ಸೂಪರ್ ಸ್ಟಾರ್ ಕೃಷ್ಣ ಇನ್ನಿಲ್ಲ..!

ಹೈದರಾಬಾದ್, ನ.15 – ತೆಲುಗು ಚಿತ್ರರಂಗದ ಹಿರಿಯ ನಟ ಕೃಷ್ಣ (80) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ ಹೃದಯಾಘಾತದಿಂದಾಗಿ ನಗರದ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮುಂಜಾನೆ 4 ಗಂಟೆಗೆ ನಟ ಇಹಲೋಕ ತ್ಯಜಿಸಿದ್ದಾರೆ ಸೂಪರ್‍ ಸ್ಟಾರ್ ಮಹೇಶ್ ಬಾಬು ಅವರ ತಂದೆ ಕೃಷ್ಣ ಅವರು 1960 ರ ದಶಕದ ಆರಂಭದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಈವರೆಗೆ ಸುಮಾರು 350 ಚಲನಚಿತ್ರಗಳಲ್ಲಿ ನಟಿಸಿ ಜನಮನಗೆದ್ದಿದ್ದರುಅವರ ಮೂಲ ಹೆಸರು ಘಟ್ಟಮನೇನಿ ಶಿವರಾಮ ಕೃಷ್ಣ, ಪೌರಾಣಿಕ […]

ಕಂಚಗಲ್ಲು ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ

ಮಾಗಡಿ,ಅ.24- ಕಂಚಗಲ್ಲು ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಅವರು ತಡರಾತ್ರಿ ಮಠದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನಲ್ಲಿರುವ ಬಂಡೆಮಠದಲ್ಲೇ ಕಿಟಕಿ ಕಂಬಿಗೆ ನೇಣು ಬಿಗಿದುಕೊಂಡು ಬಸವಲಿಂಗ ಸ್ವಾಮೀಜಿ (44)ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ರಾತ್ರಿ ಭಕ್ತರೊಂದಿಗೆ ಕುಳಿತು ಕೆಲ ಕಾಲ ಮಾತನಾಡಿ ನಂತರ ಊಟ ಮಾಡಿ ಮಲಗಲು ತಮ್ಮ ಕೊಠಡಿಗೆ ತೆರಳಿದ್ದಾರೆ. ಇಂದು ಬೆಳಗ್ಗೆ ಸ್ವಾಮೀಜಿ ಎಷ್ಟು ಹೊತ್ತಾದರೂ ಹೊರಗೆ ಬಾರದಿರುವುದನ್ನು ಗಮನಿಸಿದ ಮಠದ ಭಕ್ತರೊಬ್ಬರು ಅವರ ಕೊಠಡಿ ಬಳಿ ಹೋಗಿ ನೋಡಿದಾಗ ಆತ್ಮಹತ್ಯೆ […]

ಪುನೀತ ಪರ್ವ ಕಾರ್ಯಕ್ರಮ ನೋಡುತ್ತಲೇ ಪ್ರಾಣಬಿಟ್ಟ ಅಪ್ಪು ಅಭಿಮಾನಿ

ಬೆಂಗಳೂರು,ಅ.22- ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸಾವಿನ ದುಃಖ ತಡೆಯಲಾರದೆ ಅವರ ಅಭಿಮಾನಿಯೊಬ್ಬರು ಹೃದಯಘಾತದಿಂದ ನಿಧನರಾಗಿದ್ದಾರೆ. ನಿನ್ನೆ ಪ್ರಸಾರವಾಗುತ್ತಿದ್ದ ಪುನೀತ ಪರ್ವ ಕಾರ್ಯಕ್ರಮ ನೋಡುತ್ತಿದ್ದಾಗಲೇ ಅಪ್ಪು ಅಭಿಮಾನಿ ಗಿರಿರಾಜ ಎನ್ನುವವರು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಮಲ್ಲೇಶ್ವರಂನ ಲಿಂಕ್ ರಸ್ತೆಯಲ್ಲಿ ವಾಸಿಸುತ್ತಿದ್ದ ಗಿರಿರಾಜ ಅಪ್ಪು ಅವರ ಅಪ್ಪಟ ಅಭಿಮಾನಿಯಾಗಿದ್ದರು.ಅಪ್ಪು ನಿಧನದ ಸಂದರ್ಭದಲ್ಲೂ ತೀವ್ರವಾಗಿ ಘಾಸಿಗೊಂಡಿದ್ದ ಗಿರಿರಾಜ ಅವರು ನಿನ್ನೆ ಪುನೀತ ಪರ್ವ ಕಾರ್ಯಕ್ರಮ ನೋಡುವಾಗ ಮತ್ತಷ್ಟು ಕಂಗೆಟ್ಟಿದ್ದರು. ಪುನೀತ್ ಪರ್ವ ಕಾರ್ಯಕ್ರಮ ನೋಡುವಾಗ ಎಂಥ ಮನುಷ್ಯ ಸತ್ತೋದ ಎಂದ ಕಣ್ಣೀರಿಡುತ್ತಿದ್ದ […]