Friday, February 23, 2024
Homeಮನರಂಜನೆಸಂಗೀತ ನಿರ್ದೇಶಕ ಇಳಯರಾಜ ಪುತ್ರಿ, ಗಾಯಕಿ ಭವತಾರಿಣಿ ನಿಧನ

ಸಂಗೀತ ನಿರ್ದೇಶಕ ಇಳಯರಾಜ ಪುತ್ರಿ, ಗಾಯಕಿ ಭವತಾರಿಣಿ ನಿಧನ

ಚನ್ನೈ,ಜ.26- ಭಾರತೀಯ ಚಿತ್ರರಂಗದ ಮಹಾನ್ ಸಂಗೀತ ನಿರ್ದೇಶಕ ಇಳಯರಾಜ ಪುತ್ರಿ ಗಾಯಕಿ ಭವತಾರಿಣಿ ನಿಧನ ಹೊಂದಿದ್ದಾರೆ. ಲಿವರ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಭವತಾರಿಣಿ ಚಿಕಿತ್ಸೆಗಾಗಿ ಶ್ರೀಲಂಕಾಕ್ಕೆ ಹೋಗಿದ್ದರು. ಜನವರಿ 25ರಂದು ಸಂಜೆ 5 ಗಂಟೆಗೆ ಶ್ರೀಲಂಕಾದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಇಂದು ಅವರ ಪಾರ್ಥಿವ ಶರೀರವನ್ನು ಚೆನ್ನೈಗೆ ತರಲಾಗುವುದು. ಅಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಹೇಳಲಾಗಿದೆ.

ಭವತಾರಿಣಿ ನಿಧನಕ್ಕೆ ಸಿನಿಮಾರಂಗ ಮತ್ತು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಭವತಾರಿಣಿ ಕಳೆದ ಕಳೆದ ಕೆಲುವ ತಿಂಗಳಿನಿಂದಲೂ ಶ್ರೀಲಂಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭವತಾರಿಣಿ ತನ್ನ ಗಂಡನನ್ನು ಒಬ್ಬಂಟಿಯಾಗಿ ಬಿಟ್ಟು ಹೋಗಿದ್ದಾಳೆ. ಆಕೆಗೆ 47 ವರ್ಷ ವಯಸ್ಸಾಗಿತ್ತು. ಭಾವತಾರಿಣಿ ಅವರ ಹಠಾತ್ ನಿಧನದ ಸುದ್ದಿ ಕೇಳಿ ಅಭಿಮಾನಿಗಳು ದುಃಖಿತರಾಗಿದ್ದಾರೆ.

ಇಂಡಿಯಾ ಒಕ್ಕೂಟದ ಏಕತೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ರಾಹುಲ್

ಇಳಯರಾಜ ಪುತ್ರಿ ಭವತಾರಿಣಿ ಕೂಡ ಅದ್ಭುತ ಗಾಯಕಿ ಆಗಿದ್ದರು. ತಂದೆಯ ರೀತಿಯಲ್ಲಿಯೇ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ಭಾರತಿ ಚಿತ್ರದ ಗಾಯನಕ್ಕೆ ರಾಷ್ಟ್ರೀಯ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. ತಮ್ಮ ಸುಮಧುರ ಕಂಠಸಿರಿಯ ಗಾಯನಕ್ಕಾಗಿ ರಾಜ್ಯ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು.

ಭವತಾರಿಣಿ ಎಲ್ಲರಿಗೂ ಬೇಕಾಗಿದ್ದವರು. ಇವರ ನಿಧನ ಇಡೀ ಸಿನಿಮಾರಂಗಕ್ಕೆ ಆಘಾತ ನೀಡಿದೆ. ಇದರಿಂದ ನಟಿ ಸಿಮ್ರನ್ ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. ಭವತಾರಿಣಿ ಸಾವು ನೋವು ತಂದಿದೆ ಎಂದಿದ್ದಾರೆ.
ಭವತಾರಿಣಿ ನಿಧನಕ್ಕೆ ತಮಿಳುನಾಡಿನ ಸಿ.ಎಂ.ಸ್ಟಾಲಿನ್ ಕೂಡ ಶೋಕ ವ್ಯಕ್ತಪಡಿಸಿದ್ದು, ಭವತಾರಿಣಿ ಸಾವಿನ ನೋವು ಯಾರೂ ತುಂಬಲಾರರು. ಅದು ಹಾಗೆ ಉಳಿಯಲಿದೆ ಎಂದು ಹೇಳಿಕೊಂಡಿದ್ದಾರೆ.

ಭವತಾರಿಣಿ ಸಂಗೀತ ಲೋಕದಲ್ಲಿ ಬಹಳ ಹೆಸರುವಾಸಿಯಾಗಿದ್ದರು. ಅವರು ಇಳಯರಾಜ ಅವರ ಮಗಳು ಮತ್ತು ಕಾರ್ತಿಕ್ ರಾಜ-ಯುವನ್ ಶಂಕರ್ ರಾಜರ ಸಹೋದರಿ. ಭವತಾರಿಣಿ ಅವರು ಭಾರತಿ ಚಿತ್ರದ ಮಾಯಿಲ್ ಪೋಲ ಪೊನ್ನು ಒಣ್ಣು ಎಂಬ ತಮಿಳು ಗೀತೆಗಾಗಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಹಿನ್ನೆಲೆ ಗಾಯಕಿಯಾಗುವುದರ ಜೊತೆಗೆ ಸಂಗೀತ ಸಂಯೋಜಕಿಯೂ ಆಗಿದ್ದರು.

ಕಳೆದ 6 ತಿಂಗಳಿಂದ ಲಿವರ್ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಅವರನ್ನು ಉತ್ತಮ ಚಿಕಿತ್ಸೆಗಾಗಿ ಶ್ರೀಲಂಕಾಕ್ಕೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆ ಫಲಿಸದೆ ಅಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

RELATED ARTICLES

Latest News