Saturday, December 14, 2024
Homeರಾಷ್ಟ್ರೀಯ | Nationalಎಲ್ಲರ ಮನಗೆದ್ದ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್- ಹಿರಿಯ ವಕೀಲ ದ್ವಿವೇದಿ ಜುಗಲ್ ಬಂದಿ

ಎಲ್ಲರ ಮನಗೆದ್ದ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್- ಹಿರಿಯ ವಕೀಲ ದ್ವಿವೇದಿ ಜುಗಲ್ ಬಂದಿ

ನವದೆಹಲಿ,ಏ.4- ಹಿರಿಯ ವಕೀಲ ದಿನೇಶ್ ದ್ವಿವೇದಿ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ನಲ್ಲಿ ನಡೆಸಿರುವ ಮಾತಿನ ಸಂಭಾಷಣೆ ಎಲ್ಲರ ಮನಗೆದ್ದಿದೆ. ಕೋರ್ಟ್ ಹಾಲ್ಗೆ ಬಂದ ಹಿರಿಯ ವಕೀಲ ದ್ವಿವೇದಿ ಅವರು ನನ್ನ ಬಣ್ಣ ಬಣ್ಣದ ಕೂದಲಿಗೆ ಹೋಳಿ ಹಬ್ಬ ಕಾರಣ. ನನಗೆ ಮಕ್ಕಳು, ಮೊಮ್ಮಕ್ಕಳು ಹೆಚ್ಚಾಗಿರುವುದರಿಂದ ಅವರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ವಿಷಾದಿಸುತ್ತೇನೆ ಎನ್ನುತ್ತಾರೆ.

ಆಗ ಪೀಠದಲ್ಲಿದ್ದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು, ಹಾಸ್ಯಸ್ಪದವಾಗಿ ಮದ್ಯದೊಂದಿಗೆ ಏನೂ ಸಂಬಂಧವಿಲ್ಲವೇ ಎಂದು ಕೇಳಿದಾಗ ಹಾಲ್ನಲ್ಲಿದ್ದವರನ್ನು ನಗೆಗಡಲಲ್ಲಿ ಮುಳುಗಿಸುತ್ತದೆ.ಆಗ ದ್ವಿವೇದಿ ಅವರು ಹೋಳಿ ಎಂದರೆ ಭಾಗಶಃ ಮದ್ಯಪಾನ… ಮತ್ತು ನಾನು ತಪೊ್ಪಪ್ಪಿಕೊಳ್ಳಬೇಕು… ನಾನು ವಿಸ್ಕಿಯ ಅಭಿಮಾನಿ ಎಂದಾಗ ಮತ್ತೆ ಹಾಲ್ನಲ್ಲಿ ನಗು ಮೊಳಗುತ್ತದೆ.

ಒಂಬತ್ತು ನ್ಯಾಯಾೀಧಿಶರ ಸಂವಿಧಾನ ಪೀಠವು ಕೈಗಾರಿಕಾ ಮದ್ಯದ ಪ್ರಕರಣವನ್ನು ವಿಚಾರಣೆ ನಡೆಸುತ್ತಿದೆ. ಕೈಗಾರಿಕಾ ಮದ್ಯವು ಮಾರುಕಟ್ಟೆಗಳಲ್ಲಿ ಲಭ್ಯವಿರುವ ಖಾದ್ಯ ಆಲ್ಕೋ ಹಾಲ್ಗೆ ಸಮಾನವಾಗಿದೆಯೇ ಮತ್ತು ಕೈಗಾರಿಕಾ ಮದ್ಯ ಉತ್ಪಾದನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಅತಿಕ್ರಮಿಸುವ ಅಧಿಕಾರವಿದೆಯೇ ಎಂಬ ಬಗ್ಗೆ ಚರ್ಚಿಸಿತು.

ಉತ್ತರ ಪ್ರದೇಶ ರಾಜ್ಯವನ್ನು ಪ್ರತಿನಿಧಿಸುವ ದ್ವಿವೇದಿ ಅವರು ಈ ಸಂದರ್ಭದಲ್ಲಿ ಎಲ್ಲಾ ರೀತಿಯ ಮದ್ಯವು ರಾಜ್ಯದ ನಿಯಂತ್ರಣಕ್ಕೆ ಬರುತ್ತದೆ ಎಂದು ವಾದಿಸಿದರು.

RELATED ARTICLES

Latest News