Saturday, July 27, 2024
Homeರಾಷ್ಟ್ರೀಯಮತ್ತೆ ಪ್ರತಿಭಟನೆಗೆ ಮುಂದಾದ ರೈತರು

ಮತ್ತೆ ಪ್ರತಿಭಟನೆಗೆ ಮುಂದಾದ ರೈತರು

ಅಂಬಾಲಾ, ಮೇ 23 (ಪಿಟಿಐ) ಕೇಂದ್ರ ಸರ್ಕಾರದ ವಿರುದ್ಧದ ಹೋರಾಟಕ್ಕೆ ರೈತರು ಮತ್ತೆ ಮುನ್ನುಡಿ ಬರೆದಿದ್ದಾರೆ. ರೈತರು ತಮ್ಮ ಬೇಡಿಕೆಗಳನ್ನು ಅಂಗೀಕರಿಸಲು ಕೇಂದ್ರದ ಮೇಲೆ ಒತ್ತಡ ಹೇರಲು ನಡೆಯುತ್ತಿರುವ ಪ್ರತಿಭಟನೆಯ 100 ದಿನಗಳನ್ನು ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲೇ ಶಂಭು ಮತ್ತು ಇತರ ಗಡಿ ಬಿಂದುಗಳಲ್ಲಿ ರೈತರು ಜಮಾಯಿಸಿದ್ದಾರೆ. ಕಳೆದ ಫೆಬ್ರವರಿ 13 ರಂದು ಭದ್ರತಾ ಪಡೆಗಳು ತಮ್ಮ ದೆಹಲಿ ಚಲೋ ಮೆರವಣಿಗೆಯನ್ನು ತಡೆದ ನಂತರ ರೈತರು ಶಂಭು ಮತ್ತು ಖಾನೌರಿ ಗಡಿ ಬಿಂದುಗಳಲ್ಲಿ ಮೊಕ್ಕಾಂ ಹೂಡಿದ್ದಾರೆ.

ಕಿಸಾನ್‌ ಮಜ್ದೂರ್‌ ಸಂಘರ್ಷ್‌ ಸಮಿತಿಯ ಮುಖಂಡ ಸರ್ವಾನ್‌ ಸಿಂಗ್‌ ಪಂಧೇರ್‌ ಮಾತನಾಡಿ, ಶಂಭು, ಖಾನೌರಿ ಮತ್ತು ದಬ್ವಾಲಿ ಗಡಿ ಬಿಂದುಗಳಲ್ಲಿ ಈ ಸಂದರ್ಭದಲ್ಲಿ ರೈತರು ಜಮಾಯಿಸಿದ್ದಾರೆ. ಬಿಜೆಪಿ ನೇತತ್ವದ ಕೇಂದ್ರ ಸರ್ಕಾರವು ತಮ್ಮ ಪ್ರತಿಭಟನೆಯನ್ನು ಮುಂದುವರೆಸಲು ದೆಹಲಿಯತ್ತ ಹೋಗುವುದನ್ನು ತಡೆಯುತ್ತಿದೆ ಎಂದು ಪಂಧೇರ್‌ ಆರೋಪಿಸಿದರು ಮತ್ತು ಪಂಜಾಬ್‌ ಮತ್ತು ಹರಿಯಾಣ ನಡುವಿನ ಗಡಿ ಬಿಂದುಗಳಲ್ಲಿ ಭಾರೀ ಪೊಲೀಸ್‌‍ ಪಡೆಯನ್ನು ನಿಯೋಜಿಸಿರುವುದನ್ನು ಖಂಡಿಸಿದರು.

ಪಟಿಯಾಲಾ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೈತರು ಪ್ರಶ್ನೆಗಳನ್ನು ಕೇಳಲು ಬಯಸಿದ್ದು, ಅವರಿಗೆ ಪ್ರವೇಶ ನೀಡದಿದ್ದರೆ ಧರಣಿ ನಡೆಸುವುದಾಗಿ ಕೆಎಂಎಂ ನಾಯಕ ಹೇಳಿದರು. ಮೇ 23 ರಂದು ಪಟಿಯಾಲಾದಲ್ಲಿ ಮೊದಲ ರ್ಯಾಲಿ ನಡೆಸುವ ಮೂಲಕ ಮೋದಿ ರಾಜ್ಯದಲ್ಲಿ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಲಿದ್ದಾರೆ.

ಪಂಜಾಬ್‌ನ 13 ಲೋಕಸಭಾ ಸ್ಥಾನಗಳಿಗೆ ಜೂನ್‌ 1 ರಂದು ಮತದಾನ ನಡೆಯಲಿದೆ. ಪಂಜಾಬ್‌ನಲ್ಲಿ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಗಳು ರೈತರಿಂದ ಪ್ರತಿಭಟನೆ ಎದುರಿಸುತ್ತಿದ್ದಾರೆ.

ಪ್ರತಿಭಟನೆಯ ಭಾಗವಾಗಿ, ರೈತರು ತಮ ಬೇಡಿಕೆಗಳನ್ನು ಒಪ್ಪದ ಬಿಜೆಪಿ ನಾಯಕರಿಗೆ ಪ್ರಶ್ನೆಗಳನ್ನು ಕೇಳಿದರು ಮತ್ತು ಕಪ್ಪು ಬಾವುಟವನ್ನು ಪ್ರದರ್ಶಿಸಿದ್ದಾರೆ. ವಿವಿಧ ರೈತ ಸಂಘಟನೆಗಳ ನಿಷ್ಠೆ ಹೊಂದಿರುವ ರೈತರು ಕನಿಷ್ಠ ಬೆಂಬಲ ಬೆಲೆಯ ಕಾನೂನು ಸೇರಿದಂತೆ ತಮ ಬೇಡಿಕೆಗಳನ್ನು ಅಂಗೀಕರಿಸದ ಕೇಂದ್ರದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ದೆಹಲಿಯ ಕಡೆಗೆ ಹೋಗಲು ಅವಕಾಶ ನೀಡದಿದ್ದಕ್ಕಾಗಿ ಅವರು ಅಸಮಾಧಾನಗೊಂಡರು, ಪಂಜಾಬ್‌ ಮತ್ತು ಹರಿಯಾಣದ ಶಂಭು ಮತ್ತು ಖಾನೌರಿ ಗಡಿ ಬಿಂದುಗಳಲ್ಲಿ ಬಿಡಾರ ಹೂಡುವಂತೆ ಒತ್ತಾಯಿಸಿದರು.

ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌‍ಪಿ) ಕಾನೂನಾತಕ ಖಾತರಿ ನೀಡಬೇಕು ಎಂಬ ತಮ ಬೇಡಿಕೆಗಳ ಕುರಿತು ಸರ್ಕಾರವನ್ನು ಒತ್ತಾಯಿಸಲು ಸಂಯುಕ್ತ ಕಿಸಾನ್‌ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್‌ ಮಜ್ದೂರ್‌ ಮೋರ್ಚಾವು ರೈತರಿಂದ ದೆಹಲಿ ಚಲೋ ಮೆರವಣಿಗೆಯನ್ನು ಮುನ್ನಡೆಸುತ್ತಿದೆ.

RELATED ARTICLES

Latest News