Monday, January 13, 2025
Homeರಾಷ್ಟ್ರೀಯ | Nationalಇಂದಿನಿಂದ ಮತ್ತೆ ರೈತರ ಪ್ರತಿಭಟನೆ : ನೊಯ್ಡಾದಿಂದ ದೆಹಲಿಗೆ ಪಾದಯಾತ್ರೆ

ಇಂದಿನಿಂದ ಮತ್ತೆ ರೈತರ ಪ್ರತಿಭಟನೆ : ನೊಯ್ಡಾದಿಂದ ದೆಹಲಿಗೆ ಪಾದಯಾತ್ರೆ

Farmers protest march heads to Delhi; Noida police beef up security at Chilla border

ನೊಯ್ಡಾ,ಡಿ.2- ಹಲವು ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಮತ್ತೊಮೆ ಪ್ರತಿಭಟನಾ ಮೆರವಣಿಗೆ ಆಯೋಜಿಸಿದ್ದು ಇಂದು ನೊಯ್ಡಾದಿಂದ ದೆಹಲಿಗೆ ಪಾದಯಾತ್ರೆ ನಡೆಸಲಿದ್ದಾರೆ. 10ಕ್ಕೂ ಹೆಚ್ಚು ರೈತ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿವೆ. ಯುನೈಟೆಡ್‌ ಕಿಸಾನ್‌ ಮೋರ್ಚಾದ ಮುಖಂಡರು ಡಿಎಂ, ಪೊಲೀಸ್‌‍ ಕಮಿಷನರ್‌, ನೋ್ಡಾ, ಗ್ರೇಟರ್‌ ನೋ್ಡಾ ಪ್ರಾಧಿಕಾರದ ಸಿಇಒ ಮತ್ತು ಯಮುನಾ ಪ್ರಾಧಿಕಾರದ ಸಿಇಒಯೊಂದಿಗೆ ಸಭೆ ನಡೆಸಿದ್ದರು ಅದು ವಿಫಲವಾಗಿತ್ತು.

ಇದಾದ ಬಳಿಕ ದೆಹಲಿಗೆ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಘೋಷಿಸಿದರು. ಆದರೆ ಅವರನ್ನು ತಡೆಯಲು ನೋ್ಡಾ ಪೊಲೀಸರು ಸಂಪೂರ್ಣ ಸಿದ್ಧತೆ ನಡೆಸಿದ್ದಾರೆ. ಅಲ್ಲದೆ, ದೆಹಲಿಗೆ ಬರುವ ಕೆಲವು ಮಾರ್ಗಗಳನ್ನು ಮುಚ್ಚಲಾಗಿದೆ ಮತ್ತು ಮಾರ್ಗಗಳನ್ನು ಬದಲಾಯಿಸಲಾಗಿದೆ. ಶಾಲೆಗಳನ್ನೂ ಆನ್‌ಲೈನ್‌ ಮಾಡಲಾಗಿದೆ.

ಇಂದು 12 ಗಂಟೆಗೆ ಮಹಾಮಾಯಾ ಮೇಲ್ಸೇತುವೆಯ ಕೆಳಗೆ ರೈತರು ತಮ ಮೆರವಣಿಗೆಯನ್ನು ಪ್ರಾರಂಭಿಸುತ್ತಾರೆ. ಟ್ರ್ಯಾಕ್ಟರ್‌ ಟ್ರಾಲಿಗಳಲ್ಲಿ ದೆಹಲಿಗೆ ತೆರಳಲಿದ್ದಾರೆ. ನೋ್ಡಾ ಪೊಲೀಸರು ಗೌತಮ್‌ ಬುದ್ಧ ನಗರದಿಂದ ದೆಹಲಿಗೆ ಸಂಪರ್ಕಿಸುವ ಎಲ್ಲಾ ಗಡಿಗಳಲ್ಲಿ ರೈತರನ್ನು ತಡೆಯಲು ಬ್ಯಾರಿಕೇಡ್‌‍ಗಳನ್ನು ಅಳವಡಿಸಿದ್ದಾರೆ.

ಗೌತಮ್‌ ಬುದ್ಧ ನಗರದಿಂದ ದೆಹಲಿಗೆ ಬಂದು ಹೋಗಲು ಜನರು ಮೆಟ್ರೋ ಬಳಸಬೇಕು ಎಂದು ನೋ್ಡಾ ಪೊಲೀಸರು ಮನವಿ ಮಾಡಿದ್ದಾರೆ. 2014ರ ಜನವರಿ 1ರ ನಂತರ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಸಂತ್ರಸ್ತರಾದ ಎಲ್ಲ ರೈತರಿಗೆ ಶೇ.10 ಅಭಿವದ್ಧಿ ಪಡಿಸಿದ ನಿವೇಶನಗಳು, ಶೇ.64.7 ಹೆಚ್ಚುವರಿ ಪರಿಹಾರ, ಹೊಸ ಭೂಸ್ವಾಧೀನ ಕಾನೂನಿನಂತೆ ಮಾರುಕಟ್ಟೆ ದರದ 4 ಪಟ್ಟು ಪರಿಹಾರ, ಉದ್ಯೋಗ ಮತ್ತು ಪುನರ್ವಸತಿ ಸೇರಿದಂತೆ ಎಲ್ಲ ಸವಲತ್ತುಗಳು, ನಿವೇಶನಗಳ ಇತ್ಯರ್ಥ ಇತ್ಯಾದಿ ಹಲವು ಬೇಡಿಕೆಗಳನ್ನು ಹೊಂದಿದ್ದಾರೆ.
ಗೌತಮ್‌ ಬುದ್ಧ ನಗರ, ಆಗ್ರಾ, ಅಲಿಗಢ ಮತ್ತು ಬುಲಂದ್‌ಶಹರ್‌ ಸೇರಿದಂತೆ 20 ಜಿಲ್ಲೆಗಳ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

RELATED ARTICLES

Latest News