Wednesday, February 5, 2025
Homeಬೆಂಗಳೂರುಮೊಬೈಲ್ ದರೋಡೆ ಮಾಡಿ ಮಾರಾಟ ಮಾಡುತ್ತಿದ್ದ ಅಪ್ಪ- ಮಗ ಸೇರಿ ಮೂವರು ಸೆರೆ

ಮೊಬೈಲ್ ದರೋಡೆ ಮಾಡಿ ಮಾರಾಟ ಮಾಡುತ್ತಿದ್ದ ಅಪ್ಪ- ಮಗ ಸೇರಿ ಮೂವರು ಸೆರೆ

Father-son arrested for stealing and selling mobile phones

ಬೆಂಗಳೂರು,ಫೆ.4- ಮೊಬೈಲ್ ಪೋನ್ಗಳನ್ನು ಸುಲಿಗೆ ಹಾಗೂ ಮಾರಾಟ ಮಾಡುತ್ತಿದ್ದ ಅಪ್ಪ-ಮಗ ಸೇರಿದಂತೆ ಮೂವರನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿ 30.40ಲಕ್ಷ ಮೌಲ್ಯದ 93 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ಮಗ ಮೊಬೈಲ್ ದರೋಡೆ ಮಾಡಿಕೊಂಡು ಬಂದು ಮಾರಾಟ ಮಾಡಲು ಅಪ್ಪ ಹಾಗೂ ಸ್ನೇಹಿತನಿಗೆ ಕೊಡುತ್ತಿದ್ದುದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ.ಪಿ.ಜಿ ಯೊಂದರಲ್ಲಿ ವಾಸವಿರುವ ವ್ಯಕ್ತಿಯೊಬ್ಬರು ಜ.15 ರಂದು ರಾತ್ರಿ ಬಿ-ನಾರಾಯಣಪುರ ಹತ್ತಿರ ಹೋಗುತ್ತಿರುವಾಗ ದರೋಡೆಕೋರರ ದ್ವಿ-ಚಕ್ರ ವಾಹನದಲ್ಲಿ ಹಿಂಬದಿಯಿಂದ ಬಂದು ಅವರ ಕೈಯನಲ್ಲಿದ್ದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ.

ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಖಚಿತ ಮಾಹಿತಿಯನ್ನು ಕಲೆಹಾಕಿ, ಮಹದೇವಪುರದ ರೈನ್ಬೋ ಆಸ್ಪತ್ರೆಯ ಬಳಿ ಆರೋಪಿಯನ್ನು ಈ ಪ್ರಕರಣದಲ್ಲಿ ಸುಲಿಗೆಯಾಗಿದ್ದ ಮೊಬೈಲ್ ಫೋನ್ ಹಾಗೂ ಇನ್ನೆರಡು ಮೊಬೈಲ್ ಫೋನ್ಗಳು ಮತ್ತು ದ್ವಿ-ಚಕ್ರ ವಾಹನ ಸಮೇತ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಮೊಬೈಲ್ ಸುಲಿಗೆ ಮಾಡಿರುವುದಾಗಿ ಹೇಳಿದ್ದಾನೆ.

ಅಲ್ಲದೇ ನಗರದ ವಿವಿಧ ಕಡೆಗಳಲ್ಲಿ ಮೊಬೈಲ್ ಫೋನ್ಗಳನ್ನು ಸುಲಿಗೆ ಮಾಡಿರುವುದಾಗಿ ತಿಳಿಸಿದ್ದು, ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆ ನಡೆಸಿ, 21 ಮೊಬೈಲ್ ಫೋನ್ಗಳನ್ನು ಆತನು ವಾಸವಿರುವ ಸಾರಾಯಿಪಾಳ್ಯದ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ.
ಸುಲಿಗೆ ಮಾಡಿದ್ದ ಕೆಲವು ಮೊಬೈಲ್ ಫೋನ್ಗಳನ್ನು ಮಾರಾಟ ಮಾಡುವ ಸಲುವಾಗಿ ತನ್ನ ಅಪ್ಪ ಹಾಗೂ ಸ್ನೇಹಿತನಿಗೆ ನೀಡಿರುವುದಾಗಿ ತಿಳಿಸಿದ್ದಾನೆ.

ಈತನ ಮಾಹಿತಿ ಮೇರೆಗೆ ಥಣಿಸಂದ್ರದ ಮುಖ್ಯರಸ್ತೆಯಲ್ಲಿ 2 ಮೊಬೈಲ್ ಫೋನ್ ಸಮೇತ ಸ್ನೇಹಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮೊಬೈಲ್ ಫೋನ್ಗಳನ್ನು ಮಾರಾಟ ಮಾಡುವ ಸಲುವಾಗಿ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾನೆ.

ನಂತರ ತನಿಖೆ ಮುಂದುವರೆಸಿ ಎಲೆಕ್ಟ್ರಾನಿಕ್ ಸಿಟಿ ನೀಲಾದ್ರಿ ರಸ್ತೆಯಲ್ಲಿ 21 ಮೊಬೈಲ್ ಫೋನ್ ಸಮೇತ ಆರೋಪಿಯ ಅಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ 47 ಮೊಬೈಲ್ ಫೋನ್ಗಳನ್ನು ಮಂಗಮನಪಾಳ್ಯ ವಾಸದ ಮನೆಯಿಂದ ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣದ ಆರೋಪಿಗಳ ವಶದಿಂದ ಒಟ್ಟಾರೆ 93 ಮೊಬೈಲ್ ಫೋನ್ಗಳು ಹಾಗೂ ಒಂದು ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಇನ್‌್ಸಪೆಕ್ಟರ್ ಪ್ರವೀಣ್ಬಾಬು ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.

RELATED ARTICLES

Latest News