Friday, May 10, 2024
Homeರಾಜ್ಯಫೆಡೆಕ್ಸ್ ಹೆಸರಿನಲ್ಲಿ ಕೊರಿಯರ್ ಎಂದು ಹೇಳಿ ವಂಚಿಸಿದ್ದ 14 ಮಂದಿ ವಂಚಕರ ಬಂಧನ

ಫೆಡೆಕ್ಸ್ ಹೆಸರಿನಲ್ಲಿ ಕೊರಿಯರ್ ಎಂದು ಹೇಳಿ ವಂಚಿಸಿದ್ದ 14 ಮಂದಿ ವಂಚಕರ ಬಂಧನ

ಬೆಂಗಳೂರು,ಜ.9- ಫೆಡೆಕ್ಸ್ ಹೆಸರಿನಿಂದ ಕೊರಿಯರ್ ಬಂದಿದೆ ಎಂದು ಸಾರ್ವಜನಿಕರಿಗೆ ಕರೆ ಮಾಡಿ ನಿಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತದೆ ಎಂದು ಹೆದರಿಸಿ ತಮ್ಮ ಖಾತೆಗಳಿಗೆ ಲಕ್ಷಾಂತರ ಹಣವನ್ನು ಆನ್‍ಲೈನ್ ಮುಖಾಂತರ ಹಾಕಿಸಿಕೊಳ್ಳುತ್ತಿದ್ದ 14 ಮಂದಿ ವಂಚಕರನ್ನು ವಿಶೇಷ ತಂಡದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಂಚಕರಿಂದ 25.47 ಲಕ್ಷ ಹಣವನ್ನು ಬ್ಯಾಂಕ್ ಖಾತೆಗಳನ್ನು ಫೀಜ್ ಮಾಡಿಸಿ ಮೊಬೈಲ್ ಹಾಗೂ ಲ್ಯಾಪ್‍ಟಾಪ್‍ಗಳನ್ನು ವಶಪಡಿಸಿಕೊಂಡಿದ್ದು, ಈ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.

ಈ ವಂಚಕರು ಸಾರ್ವಜನಿಕರಿಗೆ ಫೆಡೆಕ್ಸ್ ಹೆಸರಿನ ಮೂಲಕ ತಮಗೆ ಕೊರಿಯರ್ ಬಂದಿದೆ ಎಂದು ನಂಬಿಸಿ ಐವಿಆರ್‍ನಿಂದ ಕರೆ ಮಾಡಿ ನಿಮ್ಮ ಕೊರಿಯರ್ ಮುಂಬೈನಿಂದ ತೈವಾನ್‍ಗೆ ವರ್ಗಾವಣೆಯಾಗುತ್ತಿದೆ. ಅದರಲ್ಲಿ ನಿಮ್ಮ ಹೆಸರು ಮತ್ತು ಆಧಾರ್ ಕಾರ್ಡ್‍ನ್ನು ಉಪಯೋಗಿಸಿ ಅಕ್ರಮವಾಗಿ ಮಾದಕ ವಸ್ತು ಹಾಗೂ ಮನಿ ಲಾಂಡ್ರಿಂಗ್ ಪ್ರಕರಣಗಳಲ್ಲಿ ಬಳಕೆಯಾಗುತ್ತಿದೆ ಎಂದು ಬೆದರಿಸಿದ್ದಾರೆ.

ನಂತರ ನಿಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತದೆ ಎಂದು ತಿಳಿಸಿ ನೀವು ಈ ಕೂಡಲೇ ಮುಂಬೈ ಕ್ರೈಂ
ಬ್ರಾಂಚ್‍ಗೆ ತನಿಖೆಗೆ ಖುದ್ದು ಬರಬೇಕಾಗುತ್ತದೆ ಅಥವಾ ವಿಡಿಯೋ ಕಾಲ್ ಮುಖಾಂತರ ತನಿಖೆಗೆ ಸಹಕರಿಸಬೇಕು ಇಲ್ಲವಾದಲ್ಲಿ ನಿಮ್ಮನ್ನು ತಕ್ಷಣ ಬಂಧಿಸಲಾಗುವುದು ಎಂದು ವಂಚಕರು ತಿಳಿಸಿದ್ದಾರೆ.

ಕರೆ ಮಾಡುವ ವ್ಯಕ್ತಿಯು ತಾನು ಪೊಲೀಸ್ ಇಲಾಖೆ, ಎನ್‍ಸಿಬಿ, ಸಿಬಿಐ, ಇಡಿ ಹಾಗೂ ಆರ್‍ಬಿಐ ಸಂಸ್ಥೆಗಳ ಹೆಸರುಗಳನ್ನು ತಿಳಿಸಿ ಸಾರ್ವಜನಿಕರನ್ನು ಭಯಭೀತರನ್ನಾಗಿಸುತ್ತಿದ್ದರು. ನಂತರ ಇದೇ ವಿಚಾರವಾಗಿ ಸಾರ್ವಜನಿಕರ ಬ್ಯಾಂಕ್ ಖಾತೆಗಳಿಂದ ಲಕ್ಷಾಂತರ ಹಣವನ್ನು ಆನ್‍ಲೈನ್ ಮುಖಾಂತರ ಅವರುಗಳ ಬ್ಯಾಂಕ್ ಖಾತೆಗಳಿಗೆ ಹಣವನ್ನು ಹಾಕಿಸಿಕೊಳ್ಳುತ್ತಿದ್ದರು.

ಲೋಕಸಭೆ ಚುನಾವಣೆ : 10 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಪ್ಲಾನ್

ಈ ಕುರಿತು ಹಲವು ಪ್ರಕರಣಗಳು ದಾಖಲಾಗಿದ್ದವು. ಈ ರೀತಿ ಮೋಸ ಮಾಡುತ್ತಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆಯಲು ಬೆಂಗಳೂರು ನಗರದ ಪೊಲೀಸ್ ಆಯುಕ್ತರ ಮಾರ್ಗದರ್ಶನದ ಮೇರೆಗೆ ಒಂದು ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡದ ಉಸ್ತುವಾರಿಯನ್ನು ಸಂಚಾರ ಪೂರ್ವ ವಿಭಾಗ(ಸಂಚಾರ)ದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಅವರನ್ನೊಳಗೊಂಡ ಅಕಾರಿಗಳು ಮತ್ತು ಸಿಬ್ಬಂದಿ ತನಿಖೆ ಕೈಗೊಂಡು ವಂಚಕರ ಬಗ್ಗೆ ಹಲವು ಮಾಹಿತಿಗಳನ್ನು ಕಲೆ ಹಾಕಿ ಕೇರಳ ರಾಜ್ಯದ ಮಲ್ಲಪುರಂ ಮತ್ತು ಕೋಜಿಕೋಡ್, ಗುಜರಾತ್ ರಾಜ್ಯದ ರಾಜ್‍ಕೋಟ್ ಮತ್ತು ಅಹಮದಾಬಾದ್ ಹಾಗೂ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ 14 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಈ ತಂಡವು ಭಾರತ ಸರ್ಕಾರದ ಎನ್‍ಸಿಆರ್‍ಪಿ ತುರ್ತು ಸೇವೆಯ ನಂಬರ್ 1930 ಪೋರ್ಟಲ್ ರಿಜಿಸ್ಟರ್‍ನಲ್ಲಿ ದೇಶಾದ್ಯಂತ ದಾಖಲಾಗಿರುವ ಒಟ್ಟು 546 ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ. ವಶಕ್ಕೆ ಪಡೆದ 14 ಮಂದಿ ವಂಚಕರಿಂದ ನಗರದ ಆರು ಪ್ರಕರಣಗಳು ಪತ್ತೆಯಾಗಿರುತ್ತವೆ.

RELATED ARTICLES

Latest News