Thursday, April 3, 2025
Homeರಾಷ್ಟ್ರೀಯ | Nationalನಾಪತ್ತೆಯಾಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಶವವಾಗಿ ಪತ್ತೆ

ನಾಪತ್ತೆಯಾಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಶವವಾಗಿ ಪತ್ತೆ

ಪುಣೆ, ಅ.8 – ಇತ್ತೀಚೆಗೆ ನಿಗೂಢವಾಗಿ ನಾಪತ್ತೆಯಾಗಿದ್ದ 22 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಶವ ರಾಜ್ಯದ ಅಹ್ಮದ್‍ನಗರ ಜಿಲ್ಲೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾಲೇಜು ಸ್ನೇಹಿತರು ಸೇರಿದಂತೆ ಮೂವರು ಆಕೆಯನ್ನು ಅಪಹರಿಸಿ ನಂತರ ಕತ್ತು ಹಿಸುಕಿ ಕೊಂದಿದ್ದಾರೆಎಂದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯುವತಿಯ ಶವ ನಿನ್ನೆ ಅಹ್ಮದ್‍ನಗರದಲ್ಲಿ ಪತ್ತೆಯಾಗುತ್ತಿದ್ದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ವಿದ್ಯಾರ್ಥಿಯು ಪುಣೆಯ ವಘೋಲಿ ಪ್ರದೇಶದ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಳು. ಕಳೆದ ಮಾರ್ಚ್ 29 ರಂದು ಸ್ನೇಹಿತ ಮತ್ತು ಇತರ ಇಬ್ಬರು ಅವಳನ್ನು ಭೇಟಿಯಾಗಿ ಸುತ್ತಾಡಿ ನಂತರ ಹಾಸ್ಟೆಲ್‍ಗೆ ಬಿಟ್ಟದ್ದರು.

ನಂತರ ಮಾರ್ಚ್ 30 ರಂದು ಯಾರರಿಗೂ ತಿಳಿಯದಂತೆ ಅಕೆಯನ್ನು ಅಹ್ಮದ್‍ನಗರಕ್ಕೆ ಕರೆದುಕೊಂಡು ಹೋಗಿದ್ದ ಆರೋಪಿಗಳು ನಂತರ ಆಕೆಯನ್ನು ಕತ್ತು ಹಿಸುಕಿ ಕೊಂದು ಶವವನ್ನು ಅಹಮದ್‍ನಗರದ ಹೊರವಲಯದಲ್ಲಿ ಹೂತುಹಾಕಿ ಆಕೆಯ ಸೆಲ್‍ ಫೋನ್ ನ ಸಿಮ್ ಕಾರ್ಡ್ ತೆಗೆದು ಬಿಸಾಡಿದ್ದಾರೆ.

ಇನ್ನು ವಿದ್ಯಾರ್ಥಿನಿ ಕುಟುಂಬ ಸದಸ್ಯರು ಆಕೆಯೊಂದಿಗೆ ಸಂಪರ್ಕಮಡಲು ಸಾಧ್ಯವಾಗದ ಕಾರಣ, ಅವರು ಕಾಲೇಜು ಮತ್ತು ಹಾಸ್ಟೆಲ್‍ಗೆ ಬಂದು ವಿಚಾರಿಸಿದ್ದರು ಆದರೆ ಆಕೆಯನ್ನು ಕಾಣದಿದ್ದಾಗ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆರೋಪಿಗಳು ಆಕೆಯ ಪೋಷಕರಿಗೆ 9 ಲಕ್ಷ ರೂಪಾಯಿ ಹಣ ನೀಡುವಂತೆ ಸಂದೇಶ ಕಳುಹಿಸಿದ್ದರು. ನಂತರ ಕುಟುಂಬವು ಪೊಲೀಸರಿಗೆ ತಿಳಿಸಿದ್ದರು ತನಿಖೆ ಚುರುಕುಗೊಳಿಸಿ ತಾಂತ್ರಿಕ ನೆರೆವಿನೊಂದಿಗೆ ಮೂವರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಅಧಿಕಾರಿ ಹೇಳಿದರು.

RELATED ARTICLES

Latest News