Tuesday, May 20, 2025
Homeಬೆಂಗಳೂರುಪ್ರಿಯಕರನ ಮೋಸದಾಟ ಅರಿವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳಾ ಟೆಕ್ಕಿ

ಪ್ರಿಯಕರನ ಮೋಸದಾಟ ಅರಿವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳಾ ಟೆಕ್ಕಿ

ಬೆಂಗಳೂರು, ಏ.15- ಪ್ರೇಮ ಪಾಶಕ್ಕೆ ಸಿಲುಕಿದ ಮಹಿಳಾ ಟೆಕ್ಕಿಯೊಬ್ಬರು ಇದೀಗ ಪ್ರಿಯಕರನ ಮೋಸದಾಟ ಬಯಲಾಗಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಉತ್ತರ ಭಾರತ ಮೂಲದ 27 ವರ್ಷದ ಮಹಿಳಾ ಸಾಫ್ಟ್ವೇರ್ ಎಂಜಿನಿಯರ್ ಮೋಸಕ್ಕೊಳಗಾದವರು.

ನಗರದ ಸಾಪ್ಟ್ವೇರ್ ಕಂಪನಿವೊಂದರಲ್ಲಿ ಉದ್ಯೋಗಿ ಆಗಿರುವ ಈ ಯುವತಿ ಜಿಮ್ಗೆ ಹೋಗುತ್ತಿದ್ದಾಗ ಯುವಕ ಆದಿತ್ಯಸಿಂಗ್ ಎಂಬಾತನ ಪರಿಚಯವಾಗಿದೆ. ಈತನೂ ಸಹ ಸಾಪ್ಟ್ವೇರ್ ಎಂಜಿನಿಯರ್. ಇವರಿಬ್ಬರು ಬೇರೆ ಬೇರೆ ಕಂಪನಿಯ ಉದ್ಯೋಗಿಗಳಾಗಿದ್ದು, ಇವರಿಬ್ಬರ ಮಧ್ಯೆ ಸ್ನೇಹವಾಗಿ ಪ್ರೀತಿಗೆ ತಿರುಗಿದೆ.

ಆದಿತ್ಯಸಿಂಗ್ ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿದ್ದಾನೆ. ಈತನ ಮಾತಿಗೆ ಮರುಳಾದ ಯುವತಿ ಆತನೊಂದಿಗೆ ಲಿವಿಂಗ್ ರಿಲೇಶನ್ಶಿಪ್ನಲ್ಲಿ ಬಂಡೇಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಮನೆವೊಂದರಲ್ಲಿ ಒಟ್ಟಿಗೆ ನೆಲೆಸಿದ್ದರು.ತದನಂತರದಲ್ಲಿ ಆಕೆ ಆದಿತ್ಯಸಿಂಗ್ಗೆ ಮದುವೆಯಾಗೋಣವೆಂದು ಕೇಳಿದಾಗ ಆತ ನಿರಾಕರಿಸಿದ್ದಲ್ಲದೇ ಆಕೆಗೆ ನಿಂದಿಸಿ ಹಲ್ಲೆ ಸಹ ಮಾಡಿದ್ದಾನೆ.

ಪ್ರೀತಿಯ ಹೆಸರಿನಲ್ಲಿ ಮೋಸ ಮಾಡಿದ್ದ ಆದಿತ್ಯಸಿಂಗ್ ವಿರುದ್ಧ ಬಂಡೇಪಾಳ್ಯ ಪೊಲೀಸರಿಗೆ ಯುವತಿ ದೂರು ನೀಡಿದ್ದು, ತನ್ನ ಮೇಲೆ ಚಾಕುವಿನಿಂದ ಇರಿದು ಗೋಡೆಗೆ ತಲೆ ಚಚ್ಚಿದ್ದಾನೆಂದು ಆರೋಪಿಸಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಆದಿತ್ಯ ಸಿಂಗ್ಗೆ ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗಬೇಕೆಂದು ತಿಳಿಸಿದ್ದಾರೆ.

RELATED ARTICLES

Latest News