ವಾಷಿಂಗ್‍ಟನ್,ಅ.29- ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ತಂಗಿದ್ದ ಡೆಲವೇರ್ ನಿವಾಸದ ಬಳಿ ನಾಗರೀಕ ವಿಮಾನ ಹಾರಾಟ ನಡೆಸಿ ಆತಂಕಹುಟ್ಟಿಸಿದ ಘಟನೆ ನಡೆದಿದೆ. ನಿರ್ಬಂಧಿತ ವಾಯುಪ್ರದೇಶವನ್ನು ಪ್ರವೇಶಿಸಿ ಭದ್ರತ ಲೋಪ ಉಂಟಾಗಿದೆ. ಎಚ್ಚೆತ್ತ ಅಮೆರಿಕದ ಯುದ್ಧ ವಿಮಾನಗಳು ತಕ್ಷಣವೇ ಮುನ್ನೆಚ್ಚರಿಕೆ ವಹಿಸಿ ವಿಮಾನವನ್ನು ಹತ್ತಿರದ ವಿಮಾನ ನಿಲ್ಧಾಣದಲ್ಲಿ ಕೆಳಗಿಳಿಸಿದೆ,
ಪರೀಕ್ಷೆ ಅಕ್ರಮ : 22 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು
ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿಲ್ಮಿಂಗ್ಟನ್‍ನ ಉತ್ತರಕ್ಕೆ ನಾಗರಿಕ ವಿಮಾನವೊಂದು ನಿರ್ಬಂಧಿತ ವಾಯುಪ್ರದೇಶವನ್ನು ಪ್ರವೇಶಿಸಿತು ಅಧ್ಯಕ್ಷರು ವಿಲ್ಮಿಂಗ್ಟನ್‍ನಲ್ಲಿರುವ ಅವರ ಮನೆಯಲ್ಲೇ ಇದ್ದರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ರಹಸ್ಯ ಸೇವೆ ಮತ್ತು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್‍ನ ಏಜೆಂಟ್‍ಗಳು ಈ ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ. ವಿಮಾನ ಪೈಲೆಟ್‍ನನ್ನು ಬಂಸಲಾಗಿದೆ ವಿಮಾನಯಾನ ಕಂಪನಿ ಮೇಲೂ ಪ್ರಕರಣ ದಾಖಲಿಸಲಾಗಿದೆ.