Wednesday, July 2, 2025
Homeರಾಷ್ಟ್ರೀಯ | Nationalಬಡ್ಡಿ ಆದಾಯದ ಮೇಲಿನ ತೆರಿಗೆ ವಿನಾಯಿತಿ: ಕೇಂದ್ರ ಬಜೆಟ್ ನತ್ತ ಎಲ್ಲರ ಚಿತ್ತ

ಬಡ್ಡಿ ಆದಾಯದ ಮೇಲಿನ ತೆರಿಗೆ ವಿನಾಯಿತಿ: ಕೇಂದ್ರ ಬಜೆಟ್ ನತ್ತ ಎಲ್ಲರ ಚಿತ್ತ

ನವದೆಹಲಿ,ಜ.10- ಫೆಬ್ರವರಿ 1ರಂದು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಮಂಡಿಸಲಿರುವ ಬಜೆಟ್‌ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಬಾರಿಯ ಬಜೆಟ್‌ ಹಿಂದಿನ ಬಜೆಟ್‌ಗಿಂತ ವಿಶೇಷವಾಗಲಿದ್ದು ಉಳಿತಾಯ ಮತ್ತು ಸ್ಥಿರ ಠೇವಣಿಗಳಿಂದ ಬರುವ ಬಡ್ಡಿ ಆದಾಯದ ಮೇಲಿನ ತೆರಿಗೆಗೆ ವಿನಾಯಿತಿ ನೀಡಬಹುದು ಎಂದು ವೈಯಕ್ತಿಕ ತೆರಿಗೆದಾರರು ಹಾಗೂ ಹಿರಿಯ ನಾಗರಿಕರು ಆಶಿಸುತ್ತಿದ್ದಾರೆ. ಈ ತೆರಿಗೆ ವಿನಾಯಿತಿಗಳು ಹಳೆಯ ಹಾಗೂ ವಿನಾಯಿತಿಗಳನ್ನು ಹೊಂದಿರುವ ತೆರಿಗೆ ಪದ್ಧತಿಯಲ್ಲಿ ಲಭ್ಯವಿದ್ದರೂ ಸೆಕ್ಷನ್‌ 80ಟಿಟಿಎ (ಉಳಿತಾಯ ಖಾತೆ ಬಡ್ಡಿ) ಅಡಿಯಲ್ಲಿ ಬಡ್ಡಿ ವಿನಾಯಿತಿಯನ್ನು 10,000 ರೂ.ಗಳಿಂದ 20,000 ರೂ.ಗಳಿಗೆ ಹೆಚ್ಚಿಸುವ ಅಗತ್ಯವಿದೆ ಎಂದು ತೆರಿಗೆ ಮತ್ತು ಹಣಕಾಸು ಯೋಜನಾ ತಜ್ಞರು ಸೂಚಿಸಿದ್ದಾರೆ.ಇನ್ನು ಹಿರಿಯ ನಾಗರಿಕರಿಗೆ ವಿಸ್ತರಿಸಲಾದ ಸೆಕ್ಷನ್‌ 80 ಅಡಿಯಲ್ಲಿ 50,000 ರೂ.ಗಳವರೆಗಿನ (ಸ್ಥಿರ ಠೇವಣಿ ಬಡ್ಡಿ) ಕಡಿತವನ್ನು 1 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು ಎಂದು ತಿಳಿಸಿದ್ದಾರೆ.

ಬ್ಯಾಂಕ್‌ ಠೇವಣಿ ಬಡ್ಡಿಯ ಮೇಲಿನ ಕಡಿತಗಳು: ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್‌ 80ಟಿಟಿಎ, ಬ್ಯಾಂಕುಗಳು, ಬ್ಯಾಂಕುಗಳು ಅಥವಾ ಅಂಚೆ ಕಚೇರಿಗಳಲ್ಲಿ ಹೊಂದಿರುವ ಉಳಿತಾಯ ಖಾತೆಗಳಿಂದ ಗಳಿಸಿದ ಬಡ್ಡಿ ಆದಾಯದ ಮೇಲೆ ರೂ. 10,000 ವರೆಗೆ ಕಡಿತಗೊಳಿಸಲು ಅನುಮತಿಸುತ್ತದೆ.ಈ ಕಡಿತವು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತ್ತು ಹಿಂದೂ ಅವಿಭಜಿತ ಕುಟುಂಬಗಳಿಗೆ ಲಭ್ಯವಿದೆ ಆದರೆ ಸ್ಥಿರ ಠೇವಣಿ ಮತ್ತು ಮರುಕಳಿಸುವ ಠೇವಣಿಗಳಿಂದ ಗಳಿಸಿದ ಬಡ್ಡಿಗೆ ಅನ್ವಯಿಸುವುದಿಲ್ಲ.

2012-13ನೇ ಹಣಕಾಸು ವರ್ಷದಲ್ಲಿ ಪರಿಚಯಿಸಿದಾಗಿನಿಂದ, ಹಿರಿಯ ನಾಗರಿಕರನ್ನು ಹೊರತುಪಡಿಸಿ ಇತರರು ಮತ್ತು ಹಿಂದೂ ಅವಿಭಜಿತ ಕುಟುಂಬಗಳಿಗೆ ಲಭ್ಯವಿರುವ ಉಳಿತಾಯ ಬ್ಯಾಂಕ್‌ ಖಾತೆಯ ಮೇಲಿನ ಬಡ್ಡಿ ಆದಾಯದ 10,000 ರೂ.ಗಳವರೆಗಿನ ಕಡಿತದ ಮಿತಿಯು ಸ್ಥಿರವಾಗಿತ್ತು. ಸೆಕ್ಷನ್‌ 80ಟಿಟಿಎ ಉಳಿತಾಯ ಮತ್ತು ಸ್ಥಿರ ಠೇವಣಿಗಳು ಹಾಗೂ ಅಂಚೆ ಕಚೇರಿ ಠೇವಣಿಗಳು ಸೇರಿದಂತೆ ಬ್ಯಾಂಕ್‌ ಠೇವಣಿಗಳಿಂದ ಗಳಿಸಿದ ಬಡ್ಡಿ ಆದಾಯದ ಮೇಲೆ ರೂ. 50,000 ವರೆಗೆ ಕಡಿತವನ್ನು ನೀಡುತ್ತದೆ.

ಬಜೆಟ್‌ ಮುಂದಿರುವ ಬೇಡಿಕೆಗಳೇನು?:
2025 ರ ಬಜೆಟ್‌ಗೆ ಮುಂಚಿತವಾಗಿ ತೆರಿಗೆ ತಜ್ಞರು ಹಲವಾರು ಸಲಹೆಗಳನ್ನು ನೀಡಿದ್ದಾರೆ. ಹೆಚ್ಚುತ್ತಿರುವ ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡು, ಸೆಕ್ಷನ್‌ 80 ಬಿಬಿಎಂ ಅಡಿ 10,000 ರೂ.ಗಳ ಕಡಿತದ ಮಿತಿಯನ್ನು ಕನಿಷ್ಠ 20,000 ಕ್ಕೆ ಹೆಚ್ಚಿಸುವುದು ಹೆಚ್ಚು ಸೂಕ್ತವಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೆಲವು ತಜ್ಞರು ಸೆಕ್ಷನ್‌ 80ಖಿಖಿಂ ಅನ್ನು ಉಳಿತಾಯ ಖಾತೆಗಳಿಂದ ಮಾತ್ರವಲ್ಲದೆ ಸ್ಥಿರ ಠೇವಣಿಗಳಿಂದ ಗಳಿಸಿದ ಬಡ್ಡಿಯನ್ನು ಒಳಗೊಳ್ಳಲು ವಿಸ್ತರಿಸಬಹುದು ಎಂದು ಆಶಿಸಿದ್ದು, ಇದು ಕಿರಿಯ ತೆರಿಗೆದಾರರಿಗೆ ಪ್ರಯೋಜನ ನೀಡುತ್ತದೆ ಎಂದಿದ್ದಾರೆ.

ಭಾರತದಲ್ಲಿ ಹೆಚ್ಚುತ್ತಿರುವ ಆರೋಗ್ಯ ವೆಚ್ಚಗಳು ಮತ್ತು ಹಿರಿಯ ನಾಗರಿಕರ ಜೀವಿತಾವಧಿಯನ್ನು ಪರಿಗಣಿಸಿ, ಹಿರಿಯ ನಾಗರಿಕರಿಗೆ 80ಟಿಟಿಎ ಅಡಿಯಲ್ಲಿ ಪ್ರಸ್ತುತ 50,000 ರೂ.ಗಳ ಮಿತಿಯನ್ನು ಕನಿಷ್ಠ 1 ಲಕ್ಷ ರೂ.ಗಳಿಗೆ ಹೆಚ್ಚಿಸುವ ಅಗತ್ಯವಿದೆ ಎಂದು ತಜ್ಞರು ಹೇಳುತ್ತಾರೆ.

ಕಡಿತ ಮಿತಿ ಹೆಚ್ಚಳಕ್ಕೆ ಕಾರಣಗಳು
ಹಣದುಬ್ಬರದಿಂದಾಗಿ ಖರೀದಿ ಸಾಮಥ್ರ್ಯದ ಇಳಿಕೆಯನ್ನು ಗಮನಿಸಿದರೆ, ಈ ಎರಡೂ ವಿಭಾಗಗಳಲ್ಲಿನ ಕಡಿತಗಳ ಹೆಚ್ಚಳವು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳು ಮತ್ತು ಹಿರಿಯ ನಾಗರಿಕರು ಸೇರಿದಂತೆ ತೆರಿಗೆದಾರರಿಗೆ ಅಗತ್ಯವಾದ ಪರಿಹಾರವನ್ನು ತರುತ್ತದೆ. ನಿವೃತ್ತರು ತಮ ಜೀವನೋಪಾಯಕ್ಕಾಗಿ ಸ್ಥಿರ-ಆದಾಯದ ಸಾಧನಗಳನ್ನು ಹೆಚ್ಚಾಗಿ ಅವಲಂಬಿಸಿರುತ್ತಾರೆ ಹಾಗಾಗಿ ಕಡಿತ ಮಿತಿಯನ್ನು ಹೆಚ್ಚಿಸುವುದರಿಂದ ಅವರಿಗೆ ಲಭ್ಯವಿರುವ ಸೀಮಿತ ಹೂಡಿಕೆ ಆಯ್ಕೆಗಳನ್ನು ಒದಗಿಸುತ್ತದೆ. ಏಕೆಂದರೆ ಅವರು ಹೆಚ್ಚಾಗಿ ಅಪಾಯಕಾರಿ, ಹೆಚ್ಚಿನ ಇಳುವರಿ ನೀಡುವ ಹೂಡಿಕೆಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಬಹುತೇಕ ಆರ್ಥಿಕ ತಜ್ಞರುಸೂಚಿಸಿದ್ದಾರೆ.

RELATED ARTICLES

Latest News