ಬೆಂಗಳೂರು, ಏ.9– ಕಾರಿನ ಸನ್ ರೂಪ್ ತೆರೆದು ಜಾಲಿರೈಡ್ ಮಾಡುವುದು ಅಪಾಯಕಾರಿ ಹಾಗೂ ಕಾನೂನು ಬಾಹಿರ ಅಂತಹ ಪ್ರಕರಣ ಕಂಡು ಬಂದರೆ ಪೊಲೀಸರು ದಂಡ ಹಾಕುವುದಂತೂ ಗ್ಯಾರಂಟಿ. ಇಂತಹದ್ದೊಂದು ಘಟನೆ ಆರ್‌ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂರು ದಿನಗಳ ಹಿಂದೆ ರಾತ್ರಿ ವೇಳೆ ಜಯಮಹಲ್ ರಸ್ತೆಯಲ್ಲಿ ಕಾರಿನ ಸನ್‌ರೂಪ್ ತೆರೆದು ಅಪಾಯಕಾರಿ ಚಾಲನೆ ಮಾಡುತ್ತಾ ಮಕ್ಕಳು ಸೇರಿ ಮೂರು ಮಂದಿ ನಿಂತುಕೊಂಡು ಜಾಲಿರೈಡ್ ಹೋಗುತ್ತಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರನ್ನು ಪತ್ತೆಹಚ್ಚಿ ಚಾಲಕನಿಗೆ 1 ಸಾವಿರ ದಂಡ ವಿಧಿಸಿ. ಮುಂದೆ ಈ ರೀತಿ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ. ಈರೀತಿ ಕಾರಿನ ಸನ್‌ರೂಪ್ ತೆಗೆದು ಹೊರಗೆ ನಿಂತುಕೊಂಡರೆ ಜೀವಕ್ಕೆ ಅಪಾಯವುಂಟಾಗುವ ಸಾಧ್ಯತೆಯಿದೆ. ಹಾಗಾಗಿ ಈ ಬಗ್ಗೆ ಗಮನಹರಿಸುವುದು ಒಳಿತು.