ಉಡುಪಿ, ನ.13- ದೀಪಾವಳಿ ಪೂಜೆ ವೇಳೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಏಳು ಬೋಟುಗಳು ಸುಟ್ಟು ಕರಕಲಾಗಿರುವ ಘಟನೆ ಬೈಂದೂರಿನ ಗಂಗೊಳ್ಳಿಯಲ್ಲಿ ನಡೆದಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮೀನುಗಾರರು ಹಾಗೂ ಬೋಟ್ ಮಾಲೀಕರು ಪೂಜೆಯಲ್ಲಿ ಸಂಭ್ರಮದಲ್ಲಿದ್ದರು. ಮುಂಜಾನೆಯಿಂದಲೇ ಖುಷಿ ಖುಷಿಯಲ್ಲಿ ತಮ್ಮ ಬೋಟುಗಳು ಹಾಗೂ ಮೀನುಗಾರಿಕೆಗೆ ಬಳಸುವ ಯಂತ್ರಗಳು ಹಾಗೂ ವಸ್ತುಗಳಿಗೆ ಪೂಜೆ ಸಲ್ಲಿಸುತ್ತಿದ್ದರು.
ಈ ವೇಳೆ ಹಾರಿದ ಪಟಾಕಿ ಕಿಡಿ ಲಂಗರು ಹಾಕಿದ್ದ ಬೋಟುಗಳಿಗೆ ತಾಗಿ ಬೆಂಕಿ ಹತ್ತಿಕೊಂಡು ಉರಿದಿದೆ.
ಬೋಟ್‍ನ ಇಂಜಿನ್‍ಗಳಿಗೆ ಬೆಂಕಿ ಕಿಡಿ ತಗುಲಿ ನೋಡನೋಡುತ್ತಿದ್ದಂತೆ ಏಳು ಬೋಟುಗಳು ಬೆಂಕಿಯ ಕೆನ್ನಾಲಿಗೆ ಸುಟ್ಟು ಕರಕಲಾಗಿದೆ.
ಆಗ್ರಾ ಹೋಟೆಲ್‍ನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಕೂಡಲೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ತಹಬದಿಗೆ ತಂದು ಅಕ್ಕಪಕ್ಕದ ಇತರ ಬೋಟುಗಳಿಗೆ ಹಬ್ಬುತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ.
ಬೆಂಕಿ ಅವಘಡ ಮೀನುಗಾರರ ದೀಪಾವಳಿ ಸಂಭ್ರಮದಲ್ಲಿವನ್ನು ಕಸಿದುಕೊಂಡಿದೆ.