Wednesday, October 16, 2024
Homeರಾಜ್ಯಬಳ್ಳಾರಿ: ನಿಧಿ ಆಸೆಗಾಗಿ ಗುಹೆಯೊಳಗೆ ಸುರಂಗ ಕೊರೆಯುತ್ತಿದ್ದ ಐವರ ಬಂಧನ

ಬಳ್ಳಾರಿ: ನಿಧಿ ಆಸೆಗಾಗಿ ಗುಹೆಯೊಳಗೆ ಸುರಂಗ ಕೊರೆಯುತ್ತಿದ್ದ ಐವರ ಬಂಧನ

ಬಳ್ಳಾರಿ,ಆ.8- ನಿಧಿ ಆಸೆಗಾಗಿ ಬೆಟ್ಟದ ಮೇಲಿನ ಗುಹೆಯೊಳಗೆ ಸುರಂಗ ಕೊರೆಯಲು ಮುಂದಾಗಿದ್ದ 11 ಮಂದಿ ಕಳ್ಳರ ಪೈಕಿ ಐವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಆಂಧ್ರಮೂಲದ ಶ್ರೀನಿವಾಸ್ (45), ಆಕಾಶ್ ( 20), ಶ್ರೀನಿವಾಸ್, ವೆಂಕಟ್ ರಾವ್ ಹಾಗೂ ಗದಗ ಮೂಲದ ಭಗತ್ ಸಿಂಗ್ ದೊಡ್ಡಮನಿ (50) ಎಂಬುವರನ್ನು ಬಂಧಿಸಲಾಗಿದೆ. ಸಂಡೂರು ತಾಲೂಕಿನ ತಾರಾನಗರದ ನಾರಿಹಳ್ಳದ ಹಿಂಭಾಗದ ಗುಡ್ಡದಲ್ಲಿ ಈ ಖದೀಮರು ಸುರಂಗ ಕೊರೆಯಲು ಸಿದ್ದತೆ ಮಾಡಿಕೊಂಡಿದ್ದರು.

ನಿಧಿಗಾಗಿ 40 ಮೀಟರ್ ಆಳದ ಗುಹೆಯೊಳಗೆ ಇಳಿದಿದ್ದರು.ಗುಹೆಯೊಳಗೆ ಸುರಂಗ ಕೊರೆಯಲು ಕೃತಕ ಆಕ್ಸಿಜನ್ ವ್ಯವಸ್ಥೆ, ಲೈಟಿಂಗ್‍ಗಾಗಿ ಜನರೇಟರ್ ವ್ಯವಸ್ಥೆ ಮಾಡಿಕೊಂಡಿದ್ದರು. ನಿಧಿಗಾಗಿ ಎಲ್ಲ ಸಿದ್ಧತೆ ಮಾಡಿಕೊಂಡು ನೀರು ತರಲೆಂದು ಖದೀಮರು ನಾರಿಹಳ್ಳಕ್ಕೆ ಹೋಗಿದ್ದಾಗ, ಅದೇ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ಅರಣ್ಯಾಧಿಕಾರಿಗಳು ತಡೆದು ವಿಚಾರಿಸಿದ್ದಾರೆ. ಕಳ್ಳರು ತಬ್ಬಿಬ್ಬಾಗಿ ಉತ್ತರ ನೀಡಲು ತಡವರಿಸಿದ್ದರಿಂದ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ನಿಧಿಗಾಗಿ ಬಂದಿರುವುದಾಗಿ ತಿಳಿಸಿದ್ದಾರೆ.

ಕಳ್ಳರು ನೀಡಿದ ಮಾಹಿತಿಯಂತೆ ಅರಣ್ಯಾಧಿಕಾರಿಗಳು ಗುಹೆಯ ಬಳಿ ಹೋಗಿ ನೋಡಿದಾಗ ಅಲ್ಲಿ ಸುರಂಗ ಕೊರೆಯಲು ವ್ಯವಸ್ಥೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಅರಣ್ಯಾ„ಕಾರಿಗಳು ಬರುತ್ತಿದ್ದಂತೆ ಆರು ಮಂದಿ ಸ್ಥಳದಿಂದ ಪರಾರಿಯಾಗಿದ್ದಾರೆ. ಅತ್ಯಾಧುನಿಕ ಟೆಕ್ನಾಲಜಿ ಬಳಸಿ ನಿಧಿ ಶೋಧನೆಗೆ ಅರಣ್ಯದಲ್ಲಿರುವ ಗುಹೆಗಳನ್ನು ಈ ಖದೀಮರು ಟಾರ್ಗೆಟ್ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೆ ತಾರಾನಗರದ ಒಬ್ಬ ಹಾಗೂ ಹೊಸಪೇಟೆ ಇನ್ನೊಬ್ಬ ಕುಮ್ಮಕ್ಕು ನೀಡಿದ್ದಾನೆ. ಅರಣ್ಯಾಧಿಕಾರಿಗಳು ಬರುತ್ತಿದ್ದಂತೆ ಆರು ಮಂದಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಐವರನ್ನು ಬಂ„ಸಿ ಅರಣ್ಯಾ„ಕಾರಿಗಳು ಕಾಡು ಪ್ರಾಣಿಗಳ ಹತ್ಯೆ ಕಾಯ್ದೆಯಡಿ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News