Home ಇದೀಗ ಬಂದ ಸುದ್ದಿ ಟ್ರಕ್‍ಗೆ ಕಾರು ಅಪ್ಪಳಿಸಿ ಐವರ ಸಾವು

ಟ್ರಕ್‍ಗೆ ಕಾರು ಅಪ್ಪಳಿಸಿ ಐವರ ಸಾವು

0
ಟ್ರಕ್‍ಗೆ ಕಾರು ಅಪ್ಪಳಿಸಿ ಐವರ ಸಾವು

ಹೋಶಿಯಾರ್‍ಪುರ,ಜ.27 (ಪಿಟಿಐ) ಜಲಂಧರ್-ಪಠಾಣ್‍ಕೋಟ್ ರಸ್ತೆಯಲ್ಲಿ ಕಾರು ಟ್ರಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತರು ತಡರಾತ್ರಿ ಜಲಂಧರ್‍ನಿಂದ ಮುಕೇರಿಯನ್‍ಗೆ ತೆರಳುತ್ತಿದ್ದಾಗ ಡಿಕ್ಕಿ ಸಂಭವಿಸಿದೆ ಎಂದು ದಸುಯಾ ಪೊಲೀಸ್ ಠಾಣೆ ಎಸ್‍ಎಚ್‍ಒ ಸಬ್‍ಇನ್ಸ್‍ಪೆಕ್ಟರ್ ಹಪ್ರ್ರೇಮ್ ಸಿಂಗ್ ತಿಳಿಸಿದ್ದಾರೆ.

ಕಾರು ಉಂಚಿ ಬಸ್ಸಿ ಗ್ರಾಮಕ್ಕೆ ಸಮೀಪಿಸುತ್ತಿದ್ದಂತೆ, ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ನಂತರ ರಸ್ತೆಯ ಇನ್ನೊಂದು ಬದಿಯಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಟ್ರಕ್‍ಗೆ ಅಪ್ಪಳಿಸಿದ್ದರಿಂದ ಈ ದುರಂತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ.

ರಾಹುಲ್ ನಡೆಸುತ್ತಿರುವುದು ಭಾರತ್ ತೋಡೋ ಯಾತ್ರೆ : ಅಠಾವಳೆ

ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಐದನೇ ವ್ಯಕ್ತಿಯನ್ನು ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಸಾವನ್ನಪ್ಪಿದರು. ಘಟನೆಯಲ್ಲಿ ಹರಿಯಾಣ ಮೂಲದ ಟ್ರಕ್ ಚಾಲಕ ಸುಶೀಲ್ ಕುಮಾರ್ ಎಂಬುವರಿಗೂ ಗಾಯಗಳಾಗಿವೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.