Thursday, May 9, 2024
Homeರಾಷ್ಟ್ರೀಯಡಿಕೆಶಿ ಮನೆಗೆ ಗೃಹಸಚಿವ ಪರಮೇಶ್ವರ್ ದಿಢೀರ್ ಭೇಟಿ

ಡಿಕೆಶಿ ಮನೆಗೆ ಗೃಹಸಚಿವ ಪರಮೇಶ್ವರ್ ದಿಢೀರ್ ಭೇಟಿ

ಬೆಂಗಳೂರು,ಜ.27- ನಿಗಮ ಮಂಡಗಳಿಗಳ ನೇಮಕಾತಿ ಪಟ್ಟಿ ಹೊರಬರುತ್ತಿದ್ದಂತೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಇಂದು ಬೆಳಿಗ್ಗೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲ ಕೆರಳಿಸಿದೆ. ಇಂದು ಬೆಳಿಗ್ಗೆ ಉಪಮುಖ್ಯಮಂತ್ರಿಯವರ ಮನೆಗೆ ದಿಢೀರ್ ಭೇಟಿ ನೀಡಿದ ಪರಮೇಶ್ವರ್ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಗೃಹಮಂಡಳಿ ನೇಮಕಾತಿ ಸಂದರ್ಭದಲ್ಲಿ ತಮ್ಮೊಂದಿಗೆ ಚರ್ಚೆ ನಡೆಸಿಲ್ಲ ಎಂದು ಪರಮೇಶ್ವರ್ ಬಹಿರಂಗ ಹೇಳಿಕೆ ನೀಡಿದ್ದರು. ಎಲ್ಲಾ ಸಚಿವರಿಂದಲೂ 2 ರಿಂದ 3 ಹೆಸರುಗಳನ್ನು ಪಡೆದುಕೊಳ್ಳಲಾಗಿದೆ ಎಂಬ ಸಮರ್ಥನೆಯನ್ನು ಕಾಂಗ್ರೆಸ್ ವರಿಷ್ಠರು ನೀಡುತ್ತಿದ್ದಾರೆ. ಆದರೆ ನಿನ್ನೆ ಆಯ್ಕೆಯಾಗಿರುವ ನಿಗಮ ಮಂಡಳಿಗಳ ಶಾಸಕರ ಪಟ್ಟಿಯಲ್ಲಿ ವಲಸಿಗರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮೂಲ ಕಾಂಗ್ರೆಸಿಗರನ್ನು ಕಡೆಗಣಿಸಲಾಗಿದೆ ಎಂಬ ಆರೋಪಗಳಿವೆ.

ಈ ಹಿನ್ನೆಲೆಯಲ್ಲಿ ಪರಮೇಶ್ವರ್‍ರವರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ ಎನ್ನಲಾಗಿದೆ. ಕಾರ್ಯಕರ್ತರ ನೇಮಕಾತಿ ಪಟ್ಟಿ ಇನ್ನೂ ನೆನೆಗುದಿಯಲ್ಲಿದ್ದು, ಅದರಲ್ಲಿಯಾದರೂ ತಮ್ಮ ಬೆಂಬಲಿಗರಿಗೆ ಹಾಗೂ ನಿಷ್ಠರಿಗೆ ಅವಕಾಶ ಮಾಡಿಕೊಡುವಂತೆ ಪರಮೇಶ್ವರ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಬಿಜೆಪಿಯಿಂದ ಎಎಪಿ ಶಾಸಕರಿಗೆ 25 ಕೋಟಿ ಆಫರ್ ; ಕೇಜ್ರಿವಾಲ್

ಆರಂಭದಿಂದಲೂ ಡಿ.ಕೆ.ಶಿವಕುಮಾರ್ ಮತ್ತು ಪರಮೇಶ್ವರ್ ಆಪ್ತ ಸ್ನೇಹಿತರಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲು ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದ ಪರಮೇಶ್ವರ್ ಅವರು ಡಿ.ಕೆ.ಶಿವಕುಮಾರ್‍ರಿಂದ ಅಂತರ ಕಾಯ್ದುಕೊಂಡಿದ್ದರಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಣದಲ್ಲಿ ಕಾಣಿಸಿಕೊಂಡಿದ್ದರು.

ನಿಗಮ ಮಂಡಳಿಗಳ ನೇಮಕಾತಿ ಅಷ್ಟೇ ಅಲ್ಲದೆ ಲೋಕಸಭೆ ಚುನಾವಣೆಯ ಟಿಕೆಟ್ ಹಂಚಿಕೆ, ಎಸ್.ಪಿ.ಮುದ್ದಹನುಮೇಗೌಡರ ಕಾಂಗ್ರೆಸ್ ಸೇರ್ಪಡೆ, ಬಿಟ್‍ಕಾಯಿನ್ ಹಗರಣದಲ್ಲಿ ಎಸ್‍ಐಟಿ ತನಿಖೆಯಲ್ಲಾಗಿರುವ ಬೆಳವಣಿಗೆ, ಪಿಎಸ್‍ಐ ನೇಮಕಾತಿ ಹಗರಣದಲ್ಲಿ ವಿಚಾರಣೆ ನಡೆಸಿ ನ್ಯಾಯಮೂರ್ತಿ ವೀರಪ್ಪ ಅವರು ನೀಡಿರುವ ವರದಿಯಲ್ಲಿರುವ ಪ್ರಭಾವಿಗಳ ಹೆಸರುಗಳನ್ನೂ ಕೂಡ ಪ್ರಸ್ತಾಪಿಸಲಾಗಿದೆ ಎನ್ನಲಾಗಿದೆ.

RELATED ARTICLES

Latest News