Thursday, December 5, 2024
Homeರಾಷ್ಟ್ರೀಯ | Nationalಮಹಾ ವಿಕಾಸ್‌‍ ಅಘಾಡಿ ಪಾಳಯದಲ್ಲಿ ಅಶಾಂತಿ, ಮಹಾಯುತಿಗೆ ಹಾರಲಿದ್ದಾರಂತೆ ಶಾಸಕರು

ಮಹಾ ವಿಕಾಸ್‌‍ ಅಘಾಡಿ ಪಾಳಯದಲ್ಲಿ ಅಶಾಂತಿ, ಮಹಾಯುತಿಗೆ ಹಾರಲಿದ್ದಾರಂತೆ ಶಾಸಕರು

Five to six opposition MLAs might join Mahayuti in few months

ಮುಂಬೈ, ನ.25 (ಪಿಟಿಐ) ವಿರೋಧ ಪಕ್ಷದ ಮಹಾ ವಿಕಾಸ್‌‍ ಅಘಾಡಿ (ಎಂವಿಎ) ಪಾಳಯದಲ್ಲಿ ಅಶಾಂತಿ ಉಂಟಾಗಿದ್ದು, ಆ ಪಕ್ಷದ ಐದರಿಂದ ಆರು ಶಾಸಕರು ಮುಂದಿನ ನಾಲ್ಕು ತಿಂಗಳಲ್ಲಿ ಆಡಳಿತಾರೂಢ ಮಹಾಯುತಿಗೆ ಸೇರುವ ಸಾಧ್ಯತೆ ಇದೆ ಎಂದು ಎನ್‌ಸಿಪಿಯ ಮುಖ್ಯ ಸಚೇತಕ ಅನಿಲ್‌ ಪಾಟೀಲ್‌ ಹೇಳಿದ್ದಾರೆ.

ಮಾಜಿ ಸಿಎಂ ಉದ್ಧವ್‌ ಠಾಕ್ರೆ ನೇತತ್ವದ ಶಿವಸೇನೆ, ಶರದ್‌ ಪವಾರ್‌ ಅವರ ಎನ್‌ಸಿಪಿ (ಎಸ್‌‍ಪಿ) ಮತ್ತು ಕಾಂಗ್ರೆಸ್‌‍ ಪಕ್ಷವನ್ನು ಒಳಗೊಂಡಿರುವ ಎಂವಿಎ, ಈಗಷ್ಟೇ ಮುಕ್ತಾಯಗೊಂಡ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 288 ಸ್ಥಾನಗಳಲ್ಲಿ 46 ಸ್ಥಾನಗಳನ್ನು ಮಾತ್ರ ಗೆದ್ದು ಹೀನಾಯ ಸೋಲನ್ನು ಅನುಭವಿಸಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರ ಶಿವಸೇನೆ ಮತ್ತು ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ನೇತತ್ವದ ಎನ್‌ಸಿಪಿ ಸಹ ಪಾಲುದಾರರಾಗಿರುವ ಬಿಜೆಪಿ ನೇತತ್ವದ ಆಡಳಿತ ಸಮಿಶ್ರವು ಪ್ರಭಾವಿ 230 ಸ್ಥಾನಗಳನ್ನು ಗೆದ್ದು ಬೀಗಿದೆ.

ಮರು ಚುನಾಯಿತರಾದ ಕೆಲವು ಎನ್‌ಸಿಪಿ (ಎಸ್‌‍ಪಿ), ಕಾಂಗ್ರೆಸ್‌‍ ಮತ್ತು ಸೇನಾ (ಯುಬಿಟಿ) ಶಾಸಕರಲ್ಲಿ ಭಾರಿ ಅಶಾಂತಿ ಇದೆ. ನಮೊಂದಿಗೆ ಉತ್ತಮ ಸಂಬಂಧ ಹೊಂದಿರುವವರು ಎಂವಿಎಯ ಭಾರೀ ಸೋಲಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಪಾಟೀಲ್‌ ಮರಾಠಿ ಸುದ್ದಿ ವಾಹಿನಿ ಎಬಿಪಿ ಮಜಾಗೆ ತಿಳಿಸಿದರು.

ತಮ ಕ್ಷೇತ್ರದಲ್ಲಿ ಅಭಿವದ್ಧಿ ಕೆಲಸಗಳು ಆಗಬೇಕಾದರೆ ಅಧಿಕಾರದಲ್ಲಿ ಇರುವುದು ಒಳ್ಳೆಯದು ಎಂದು ಅಜಿತ್‌ ಪವಾರ್‌ ಪಕ್ಷದ ಶಾಸಕರು ಹೇಳಿದರು. ಎಂವಿಎ ಶಾಸಕರು ತಮ ಭವಿಷ್ಯವನ್ನು ಅನಿಶ್ಚಿತವೆಂದು ಭಾವಿಸುತ್ತಾರೆ. ಇನ್ನು ನಾಲ್ಕು ತಿಂಗಳಲ್ಲಿ ಐದರಿಂದ ಆರು ಶಾಸಕರು ಮಹಾಯುತಿಗೆ ಬಂದರೂ ಅಚ್ಚರಿ ಪಡಬೇಕಾಗಿಲ್ಲ ಎಂದರು.

RELATED ARTICLES

Latest News