ಬೆಂಗಳೂರು, ಏ.5- ಬಿಸಿನೆಸ್ ವೀಸಾದಲ್ಲಿ ಭಾರತಕ್ಕೆ ಬಂದು ಪರಿಚಯವಿರುವ ವ್ಯಕ್ತಿಗಳ ಜೊತೆ ಸೇರಿಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿ 2 ಕೋಟಿ ಬೆಲೆ ಬಾಳುವ ಎಂಡಿಎಂಎ ಕ್ರಿಸ್ಟಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಐವರಿಕೋಸ್ಟ್ ಪ್ರಜೆ ಸಿಕಾ ಸ್ಲಾನಿ ತಾನೊ (33) ಬಂತ ಆರೋಪಿ.ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಂಡಿಪಿಎಸ್ ಕಾಯ್ದೆ ಪ್ರಕರಣ ದಾಖಲಿಸಿ ನಂತರ ಕಾರ್ಯಾಚರಣೆ ಕೈಗೊಂಡ ಸಿಸಿಬಿ ಪೊಲೀಸರು ಹೊಂಗಸಂದ್ರದಲ್ಲಿ ವಿದೇಶಿ ಪ್ರಜೆಯನ್ನು ಬಂಧಿಸಿ 676 ಗ್ರಾಂ ವೈಟ್ ಕ್ರಿಸ್ಟಲ್, 926 ಗ್ರಾಂ ಬ್ರೌನ್ ಕ್ರಿಸ್ಟೆಲ್, 112 ಗ್ರಾಂ ಹಳದಿ ಕ್ರಿಸ್ಟೆಲ್, 2024 ಗ್ರಾಂ ಪಿಂಕ್ ಕ್ರಿಸ್ಟೆಲ್ ಹಾಗೂ ಒಂದು ಮೊಬೈಲ್, ವೇಯಿಂಗ್ ಮಿಷನ್ ವಶಪಡಿಸಿಕೊಂಡಿದ್ದಾರೆ.
ಈ ಪ್ರಜೆ 2022ರಲ್ಲಿ ಬಿಸಿನೆಸ್ ವೀಸಾ ಭಾರತಕ್ಕೆ ಬಂದು ಮುಂಬೈ ಮತ್ತು ದೆಹಲಿಯಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದನು.ನಂತರ ಬೆಂಗಳೂರಿಗೂ ಬಂದು ತನಗೆ ಪರಿಚಯ ವಿರುವ ವ್ಯಕ್ತಿಗಳ ಜೊತೆ ಸೇರಿಕೋಮಡು ನಿಷೇಧಿತ ಮಾದಕ ವಸ್ತು ಎಂಡಿಎಂಎ ಕ್ರಿಸ್ಟೆಲ್ಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದನು.
ಈತನ ವಿರುದ್ಧ ಈ ಹಿಂದೆ ಶಂಕರಪುರಂ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಪ್ರಕರಣ ದಾಖಲಾಗಿ ನ್ಯಾಯಾಂಗ ಬಂಧನದಲ್ಲಿದ್ದನು. ನಂತರ ಬಿಡುಗಡೆಯಾಗಿ ಇದೇ ಪ್ರವೃತ್ತಿಯನ್ನು ಮುಂದುವರೆಸಿದ್ದನು. ಈ ಕಾರ್ಯಾಚರಣೆಯನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ತಂಡವು ಯಶಸ್ವಿಯಾಗಿ ಕೈಗೊಂಡಿತ್ತು.