Tuesday, July 2, 2024
Homeರಾಷ್ಟ್ರೀಯಆಂಧ್ರ ಪ್ರದೇಶದಲ್ಲಿ ವೈಎಸ್‌‍ಆರ್‌ ಪ್ರತಿಮೆಗೆ ಬೆಂಕಿ, ಟಿಡಿಪಿ ಧ್ವಜಸ್ಥಂಭ ಭಗ್ನ

ಆಂಧ್ರ ಪ್ರದೇಶದಲ್ಲಿ ವೈಎಸ್‌‍ಆರ್‌ ಪ್ರತಿಮೆಗೆ ಬೆಂಕಿ, ಟಿಡಿಪಿ ಧ್ವಜಸ್ಥಂಭ ಭಗ್ನ

ಹೈದರಾಬಾದ್‌,ಜೂ.30- ಆಂಧ್ರ ಪ್ರದೇಶದ ಬಾಪಟ್ಲಾ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ವೈ.ಎಸ್‌‍. ರಾಜಶೇಖರ ರೆಡ್ಡಿ ಅವರ ಪ್ರತಿಮೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಬಾಪಟ್ಲಾ ಜಿಲ್ಲೆಯ ಅಡ್ಡೆಪಳ್ಳಿ ಎಂಬ ಗ್ರಾಮದಲ್ಲಿದ್ದ ರಾಜಶೇಖರ ರೆಡ್ಡಿ ಅವರ ಮೂರ್ತಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಟಿಡಿಪಿ ಪಕ್ಷದ ಧ್ವಜಸ್ಥಂಬವನ್ನು ಧ್ವಂಸಗೊಳಿಸಿದ್ದಾರೆ ಎಂದು ಡಿಎಸ್‌‍ಪಿ ಮುರಳಿ ಕಷ್ಣ ದಢಪಡಿಸಿದ್ದಾರೆ.

ಕಿಡಿಗೇಡಿಗಳ ಈ ಕುಕತ್ಯದ ಹಿಂದಿನ ಉದ್ದೇಶ ತಿಳಿದುಬಂದಿಲ್ಲವಾದರೂ ದುಷ್ಕರ್ಮಿಗಳ ಬಗ್ಗೆ ಮಾಹಿತಿ ಸಿಕ್ಕಿದ್ದು, ಅವರನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದರೆ.

ಆಂಧ್ರಪ್ರದೇಶದಲ್ಲಿ ಇದೀಗ ಜಗನ್‌ ರೆಡ್ಡಿಯವರ ವೈಎಸ್‌‍ಆರ್‌ ಕಾಂಗ್ರೆಸ್‌‍ ಸೋತು ಸುಣ್ಣವಾಗಿದ್ದು, ತೆಲುಗುದೇಶಂ ಪಕ್ಷದ ಚಂದ್ರಬಾಬು ನಾಯ್ಡು ಆಳಿತ ನಡೆಸುತ್ತಿದ್ದಾರೆ. ಈ ಮಧ್ಯೆ ವೈಎಸ್‌‍ಆರ್‌ ಪ್ರತಿಮೆ ಹಾಗೂ ಟಿಡಿಪಿಯ ಧ್ರಜಸ್ತಂಬಕ್ಕೆ ಹಾನಿ ಮಾಡಿರುವವರ ಉದ್ದೇಶ ಏನೆಂಬುದು ಚರ್ಚೆಗೆ ಗ್ರಾಸವಾಗಿದೆ.

ಮಾಜಿ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ತಂದೆ ವೈ.ಎಸ್‌‍. ರಾಜಶೇಖರ ರೆಡ್ಡಿ ಅವರು ವೈಎಸ್‌‍ಆರ್‌ ಎಂದೇ ಪ್ರಸಿದ್ಧರು. 2004ರಿಂದ 2009ರವರೆಗೆ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. 2009ರಲ್ಲಿ ಅವರು ಕರ್ನೂಲು ಬಳಿ ಸಂಭವಿಸಿದ್ದ ಹೆಲಿಕಾಪ್ಟರ್‌ ದುರಂತದಲ್ಲಿ ಮತಪಟ್ಟಿದ್ದರು.

RELATED ARTICLES

Latest News