Tuesday, May 28, 2024
Homeರಾಷ್ಟ್ರೀಯಬಿಜೆಪಿ ಸೇರಿದ ಭಾರತೀಯ ವಾಯುಪಡೆ ಮಾಜಿ ಮುಖ್ಯಸ್ಥ ಬದೌರಿಯಾ

ಬಿಜೆಪಿ ಸೇರಿದ ಭಾರತೀಯ ವಾಯುಪಡೆ ಮಾಜಿ ಮುಖ್ಯಸ್ಥ ಬದೌರಿಯಾ

ನವದೆಹಲಿ, ಮಾ.24- ಭಾರತೀಯ ವಾಯುಪಡೆಯ(ಐಎಎಫ್) ಮಾಜಿ ಮುಖ್ಯಸ್ಥ ಆರ್‍ಕೆಎಸ್ ಬದೌರಿಯಾ ಅವರು ಇಂದು ಬಿಜೆಪಿಗೆ ಸೇರ್ಪಡೆಯಾದರು. ಭಾರತೀಯ ವಾಯುಪಡೆಯಲ್ಲಿ ಭದೌರಿಯಾ ಅವರ ಸುದೀರ್ಘ ಸೇವೆಯನ್ನು ಶ್ಲಾಘಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರು, ರಕ್ಷಣಾ ಪಡೆಗಳಲ್ಲಿ ಸಕ್ರಿಯ ಪಾತ್ರವಹಿಸಿದ ನಂತರ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೊಡುಗೆ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭದೌರಿಯಾ ಅವರು ಐಎಎಫ್‍ನಲ್ಲಿ ಸುಮಾರು 40 ವರ್ಷಗಳನ್ನು ಕಳೆದಿದ್ದಾರೆ ಮತ್ತು ಪ್ರಧಾನಿ ನರೇಂದ್ರಮೋದಿಯವರ ಆತ್ಮನಿರ್ಭರ್ ಭಾರತ್ ಕಾರ್ಯಕ್ರಮಕ್ಕೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.ಭದೌರಿಯಾ ಉತ್ತರ ಪ್ರದೇಶದವರು. ಲೋಕಸಭೆ ಚುನಾವಣೆಗೆ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಗಳನ್ನು ಹೆಸರಿಸಿಲ್ಲ.

RELATED ARTICLES

Latest News