Wednesday, February 5, 2025
Homeರಾಜ್ಯಎಸ್‌‍.ಎಂ.ಕೃಷ್ಣ ನಿಧನಕ್ಕೆ ಮಾಜಿ ಕ್ರಿಕೆಟಿಗ ಕುಂಬ್ಳೆ ಸಂತಾಪ

ಎಸ್‌‍.ಎಂ.ಕೃಷ್ಣ ನಿಧನಕ್ಕೆ ಮಾಜಿ ಕ್ರಿಕೆಟಿಗ ಕುಂಬ್ಳೆ ಸಂತಾಪ

Former cricketer Kumble condoles death of S.M. Krishna

ಬೆಂಗಳೂರು,ಡಿ.10– ಮಾಜಿ ಮುಖ್ಯಮಂತ್ರಿ ಎಸ್‌‍.ಎಂ.ಕೃಷ್ಣ ಅವರ ನಿಧನ ರಾಜ್ಯಕ್ಕೆ ದೊಡ್ಡ ನಷ್ಟವಾಗಿದೆ ಎಂದು ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಸಂತಾಪ ಸೂಚಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕುಂಬ್ಳೆ, ಮುಖ್ಯಮಂತ್ರಿಯಾಗಿ ಎಸ್‌‍ .ಎಂ.ಕಷ್ಣ ಅವರು ರಾಜ್ಯಕ್ಕೆ ನೀಡಿದ ಕೊಡುಗೆ ಅವರ ಅಧಿಕಾರಾವಧಿಯನ್ನು ಮೀರಿದೆ.

ಅವರ ನಿಧನ ಕರ್ನಾಟಕಕ್ಕೆ ದೊಡ್ಡ ನಷ್ಟ. ಬೆಂಗಳೂರು ಸಿಲಿಕಾನ್‌ ವ್ಯಾಲಿ ಆಗಲು ಮತ್ತು ಭೂಪಟದಲ್ಲಿ ಮೂಡಿಬರಲು ಅವರ ಕೊಡುಗೆ ಸದಾ ನೆನಪಿನಲ್ಲಿ ಉಳಿಯುತ್ತದೆ ಎಂದಿದ್ದಾರೆ.
ಕಷ್ಣ ಅವರ ನಿಧನದಿಂದ ನಾನು ಆಘಾತಕ್ಕೊಳಗಾಗಿದ್ದೇನೆ.

ರಾಜ್ಯ ಮತ್ತು ಕೇಂದ್ರ ಸಚಿವ ಮತ್ತು ಮುಖ್ಯಮಂತ್ರಿಯಾಗಿ ಅವರ ಸೇವೆ ಅಪ್ರತಿಮವಾಗಿದೆ. ಕರ್ನಾಟಕವು ಅವರ ಬೆಳವಣಿಗೆಗೆ ನೀಡಿದ ಕೊಡುಗೆಗೆ ಕರ್ನಾಟಕ ಯಾವಾಗಲೂ ಋಣಿಯಾಗಿರಲಿದೆ ಎಂದಿದ್ದಾರೆ.

RELATED ARTICLES

Latest News