Saturday, April 13, 2024
Homeರಾಜ್ಯಮಾಜಿ ಸಚಿವ ಕೆ.ಗೋಪಾಲಯ್ಯಗೆ ಕೊಲೆ ಬೆದರಿಕೆ

ಮಾಜಿ ಸಚಿವ ಕೆ.ಗೋಪಾಲಯ್ಯಗೆ ಕೊಲೆ ಬೆದರಿಕೆ

ಬೆಂಗಳೂರು,ಫೆ.14- ನಿನ್ನೆ ರಾತ್ರಿ ಬಸವೇಶ್ವರನಗರದ ಪದ್ಮರಾಜ್ ಎಂಬುವರು ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದಲ್ಲದೆ ಗೂಂಡಾ ವರ್ತನೆ ತೋರಿದ್ದಾರೆ ಎಂದು ಮಾಜಿ ಸಚಿವ ಕೆ.ಗೋಪಾಲಯ್ಯ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೂ ದೂರು ನೀಡಿದ್ದೇನೆ.

ಪದ್ಮರಾಜ್ ಎಂಬುವರು ಅತ್ಯಂತ ಕೆಟ್ಟ ಪದಗಳಿಂದ ನನ್ನನ್ನು ನಿಂದಿಸಿದ್ದಾರೆ. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರ ಬಳಿಯೂ ಮಾತನಾಡಿದ್ದೇನೆ. ಈ ವಿಚಾರವನ್ನು ಸದನದಲ್ಲಿ ಚರ್ಚಿಸಲು ಅವಕಾಶ ಕೋರಿರುವುದಾಗಿ ಹೇಳಿದರು. ಪದ್ಮರಾಜ್ ಎಂಬುವರು ಮಾಜಿ ಪಾಲಿಕೆ ಸದಸ್ಯರಾಗಿದ್ದು, ತಮಗೆ ಹಳೆ ಪರಿಚಯ.

ಪ್ರಧಾನಿ ಮೋದಿ ಇಲ್ಲದಿದ್ದರೆ ನಾನು ನನ್ನ ಕುಟುಂಬ ಸೇರುತ್ತಿರಲಿಲ್ಲ ; ವರ್ಮಾ

ಹಲವು ಬಾರಿ ನನ್ನಿಂದ ಅನುಕೂಲ ಮಾಡಿಕೊಂಡಿದ್ದಾರೆ. ನನಗೆ ಮಾತ್ರವಲ್ಲ, ಹಲವರಿಗೆ ಇದೇ ರೀತಿ ಬೆದರಿಕೆ ಹಾಕಿದ್ದಾರೆ. ಈ ವಿಚಾರವನ್ನು ಸಂಬಂಧಪಟ್ಟ ಎಸಿಪಿ, ಡಿಸಿಪಿಯವರಿಗೂ ತಿಳಿಸಿದ್ದೇನೆ. ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರಿಗೂ ಮಾಹಿತಿ ನೀಡಿರುವುದಾಗಿ ಅವರು ಹೇಳಿದರು.

RELATED ARTICLES

Latest News