Friday, April 4, 2025
Homeರಾಷ್ಟ್ರೀಯ | Nationalಬ್ಲಾಕ್‍ಮೇಲೆ ಮಾಡಿದ ಮಾಜಿ ಮಾಡೆಲ್ ಹತ್ಯೆ

ಬ್ಲಾಕ್‍ಮೇಲೆ ಮಾಡಿದ ಮಾಜಿ ಮಾಡೆಲ್ ಹತ್ಯೆ

ಗುರುಗ್ರಾಮ್,ಜ.4- ಹರಿಯಾಣದ ಗುರುಗ್ರಾಮ್‍ನಲ್ಲಿ 27 ವರ್ಷದ ಮಹಿಳೆಯೊಬ್ಬರನ್ನು ಹತ್ಯೆಗೈದ ಆರೋಪದ ಪ್ರಕರಣದಲ್ಲಿ ಕನಿಷ್ಠ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಗೀಡಾದ ಮಹಿಳೆಯನ್ನು ಪಂಜಾಬ್‍ನ ಮಾಜಿ ಮಾಡೆಲ್ ದಿವ್ಯಾ ಪಹುಜಾ ಎಂದು ಗುರುತಿಸಲಾಗಿದ್ದು, ಕೊಲೆ ನಡೆದ ಹೋಟೆಲ್‍ನ ಮಾಲೀಕರಾಗಿರುವ ಅಭಿಜೀತ್ ಸಿಂಗ್ ಕೊಲೆ ಆರೋಪಿ ಎಂದು ಹೇಳಲಾಗಿದೆ.

ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳು ಶವವನ್ನು ಹೋಟೆಲ್‍ನಿಂದ ಕಾರಿನವರೆಗೆ ಎಳೆದೊಯ್ದಿರುವುದು ಪತ್ತೆಯಾಗಿದೆ. ದಿವ್ಯಾ (27) ಎಂಬ ಬಾಲಕಿ ಹೊಟೇಲ್ ಮಾಲೀಕ ಅಭಿಜೀತ್ ಎಂಬಾತನ ಜತೆ ಹೋಗಿದ್ದಳು ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ. ಪೊಲೀಸರು ಹೊಟೇಲ್‍ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಪರಾಧ ಬಯಲಾಗಿದೆ ಎಂದು ಎಸ್‍ಪಿ ಮುಖೇಶ್ ಕುಮಾರ್ ಹೇಳಿದ್ದಾರೆ.

ರಾಮ ಮಂದಿರಕ್ಕೆ ಬಾಂಬ್ ಬೆದರಿಕೆ ಹಾಕಿದ್ದ ಇಬ್ಬರ ಬಂಧನ

ಪಹುಜಾ ಅವರು ಅಶ್ಲೀಲ ಚಿತ್ರಗಳನ್ನು ಇಟ್ಟುಕೊಡು ಬ್ಲ್ಯಾಕ್‍ಮೇಲ್ ಮಾಡಿ ಹಣ ವಸೂಲಿ ಮಾಡಿದ್ದಾಳೆ ಎಂಬ ಕೋಪದಲ್ಲಿ ಹೋಟೆಲ್ ಮಾಲೀಕರು ಗುಂಡು ಹಾರಿಸಿ ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಮುಖ ಶಂಕಿತ ಅಭಿಜೀತ್ ಸಿಂಗ್ ಮತ್ತು ಇತರ ಇಬ್ಬರು ಸಹಚರರು ಎನ್ನಲಾದ ಹೇಮರಾಜ್ ಮತ್ತು ಓಂಪ್ರಕಾಶ್ ಸೇರಿದಂತೆ ಮೂವರನ್ನು ಗುರುಗ್ರಾಮ್ ಅಪರಾಧ ವಿಭಾಗದ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಆರೋಪಿಗಳನ್ನು ಅಭಿಜೀತ್ ಸಿಂಗ್ (56), ಹೇಮರಾಜ್ (28) ಮತ್ತು ಓಂಪ್ರಕಾಶ್ (23) ಎಂದು ಗುರುತಿಸಲಾಗಿದೆ ಎಂದು ಗುರುಗ್ರಾಮ್ ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಠಾಣೆ ಸೆಕ್ಟರ್ -14, ಗುರುಗ್ರಾಮ್‍ನಲ್ಲಿ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಅಪರಾಧ ತಂಡವು ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಏತನ್ಮಧ್ಯೆ, ದಿವ್ಯಾ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಅಭಿಜೀತ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

RELATED ARTICLES

Latest News