ಜಮ್ಮು, ಫೆ 14:ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ)ನಾಯಕ ಅರ್ಷಿದ್ ಮೆಹಮೂದ್ ಖಾನ್ ಅವರು ಇಂದು ಇಲ್ಲಿ ತಮ್ಮ ಹಲವಾರು ಬೆಂಬಲಿಗರೊಂದಿಗೆ ಬಿಜೆಪಿ ಸೇರಿದರು. ನೌಶೇರಾದ ದಂಡೇಸರ್ ಗ್ರಾಮದಿಂದ ಮೂರು ಬಾರಿ ಸರಪಂಚ್ ಆಗಿರುವ ಖಾನ್ ಮತ್ತು ಅವರ ಬೆಂಬಲಿಗರನ್ನು ಪಕ್ಷದ ಜೆ ಕೆ ಅಧ್ಯಕ್ಷ ರವೀಂದರ್ ರೈನಾ ಮತ್ತು ಮಾಜಿ ಉಪ ಮುಖ್ಯಮಂತ್ರಿ ಕವೀಂದರ್ ಗುಪ್ತಾ ಮತ್ತು ಸಂಸದ ಜುಗಲ್ ಕಿಶೋರ್ ಸೇರಿದಂತೆ ಇತರ ಹಿರಿಯ ನಾಯಕರು ಬಿಜೆಪಿಗೆ ಸ್ವಾಗತಿಸಿದರು.
ಸೇರ್ಪಡೆಯ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರೈನಾ, ಕೇಂದ್ರಾಡಳಿತ ಪ್ರದೇಶದಲ್ಲಿ ಬಿಜೆಪಿ ಚುನಾವಣೆಗೆ ಸಿದ್ಧವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಯನ್ನು ಘೋಷಿಸುವುದು ಚುನಾವಣಾ ಆಯೋಗದ ಅ„ಕಾರವಾಗಿದೆ ಆದರೆ ನಾವು ಯಾವುದೇ ಚುನಾವಣೆಗೆ ಸಿದ್ಧರಿದ್ದೇವೆ ಎಂದು ಅವರು ಹೇಳಿದರು.
ಕ್ರೈಂ ರಾಜಧಾನಿಯಾಗುತ್ತಿದೆ ಬೆಂಗಳೂರು : ಆರ್.ಅಶೋಕ್
ಫೆಬ್ರವರಿ 20 ರಂದು ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮುವಿನಲ್ಲಿ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ರೈನಾ ಹೇಳಿದರು.ಮೋದಿ ಅವರು ಜೆ ಕೆ ಅಭಿವೃದ್ಧಿಗಾಗಿ ಬೊಕ್ಕಸವನ್ನು ತೆರೆದರು. ಶಾಂತಿ ಮತ್ತು ಸಹೋದರತ್ವದ ಮರುಸ್ಥಾಪನೆಯು ಜನರಿಗೆ ಅವರ ದೊಡ್ಡ ಕೊಡುಗೆಯಾಗಿದೆ. ಅವರು ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸವನ್ನು ಖಾತ್ರಿಪಡಿಸಿದ್ದಾರೆ ಮತ್ತು ಸಮಾಜದ ಎಲ್ಲಾ ವರ್ಗಗಳಿಗೆ ನ್ಯಾಯವನ್ನು ಒದಗಿಸಿದ್ದಾರೆ ಎಂದು ಅವರು ಹೇಳಿದರು.
ಪ್ರಧಾನಿ ಸಮ್ಮುಖದಲ್ಲಿ ಕೆಲವು ಹಿರಿಯ ರಾಜಕೀಯ ನಾಯಕರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಊಹಾಪೋಹಗಳ ಬಗ್ಗೆ ಕೇಳಿದ ಪ್ರಶ್ನೆಗೆ, ಯಾರೇ ಬಂದರೂ ನಾವು ಪೂರ್ಣ ಹೃದಯದಿಂದ ಸ್ವಾಗತಿಸುತ್ತೇವೆ ಎಂದು ರೈನ್ ಹೇಳಿದರು.