Saturday, October 12, 2024
Homeರಾಜ್ಯಬೆಂಗಳೂರು : ಆತಂಕ ಸೃಷ್ಟಿಸಿದ್ದ ಸ್ಕ್ರಾಪ್ ಎಟಿಎಂ ಬಾಕ್ಸ್

ಬೆಂಗಳೂರು : ಆತಂಕ ಸೃಷ್ಟಿಸಿದ್ದ ಸ್ಕ್ರಾಪ್ ಎಟಿಎಂ ಬಾಕ್ಸ್

ಬೆಂಗಳೂರು, ಫೆ.14- ಮಿನರ್ವ ಸರ್ಕಲ್ ಬಳಿಯ ಕೋಟಕ್ ಮಹೀಂದ್ರ ಬ್ಯಾಂಕ್ ಎಟಿಎಂ ನ ಸಮೀಪದಲ್ಲಿ ಎರಡು ಸ್ಕ್ರಾಪ್ ಎಟಿಎಂ ಬಾಕ್ಸ್‍ಗಳನ್ನು ಕಂಡು ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಕಲಾಸಿಪಾಳ್ಯ ಪೋಲೀಸ್ ಠಾಣಾ ವ್ಯಾಪ್ತಿಯ ಮಿನರ್ವ ಸರ್ಕಲ್ ಬಳಿ ಕೋಟಕ್ ಮಹೀಂದ್ರ ಬ್ಯಾಂಕ್ ಎಟಿಎಂ ಇದೆ. ಇದರ 10 ಅಡಿ ದೂರದಲ್ಲಿ ಚಿಂದಿ ಆಯುವ ವ್ಯಕ್ತಿಯೊಬ್ಬ ಎರಡು ಸ್ಕ್ರಾಪ್ ಎಟಿಎಂ ಬಾಕ್ಸ್‍ಗಳನ್ನು ಇಟ್ಟು ಹೋಗಿದ್ದಾನೆ.

ಕೆಲ ಸಮಯದ ಬಳಿಕ ಎಟಿಎಂ ಸೆಕ್ಯೂರಿಟಿ ಗಾರ್ಡ್ ಗಮನಿಸಿ ಸರ್ಕಲ್ ಬಳಿ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸರಿಗೆ ತಿಳಿಸಿದ್ದಾರೆ. ಸಂಚಾರಿ ಪೊಲೀಸರು ಕಲಾಸಿಪಾಳ್ಯ ಠಾಣೆ ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಅವು ಎಟಿಎಂಗೆ ಹಣ ತುಂಬುವ ಸ್ಕ್ರಾಪ್ ಬಾಕ್ಸ್‍ಗಳು ಎಂಬುವುದು ಗೊತ್ತಾಗಿದೆ.

ಅಬುಧಾಬಿಯಲ್ಲಿ ನಿರ್ಮಾಣವಾದ ಮೊದಲ ಹಿಂದೂ ದೇವಾಲಯದ ವಿಶೇಷತೆಗಳೇನು ಗೊತ್ತೇ..?

ಯಾವ ಕಾರಣಕ್ಕೆ ಈ ಬಾಕ್ಸ್‍ಗಳನ್ನು ಈ ಜಾಗದಲ್ಲಿ ಚಿಂದಿ ಆಯುವ ವ್ಯಕ್ತಿ ತಂದಿಟ್ಟು ಹೋಗಿದ್ದಾನೆಂಬುವುದು ನಿಗೂಢವಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಖಾಸಗಿ ಬಸ್ ಡಿಕ್ಕಿ ಅಕೌಂಟೆಂಟ್ ಸಾವು
ಬೆಂಗಳೂರು,ಫೆ.14-ಸ್ನೇಹಿತರಿಬ್ಬರು ಬೈಕ್‍ನಲ್ಲಿ ಹೋಗುತ್ತಿದ್ದಾಗ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಅಕೌಂಟೆಂಟ್ ಮೃತಪಟ್ಟಿರುವ ಘಟನೆ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಮೂಲತಃ ಕೇರಳದ ಆಶಿಸ್ ಜೀಜಾ (22)ಮೃತಪಟ್ಟವರು. ಈತ ಕನ್‍ಸ್ಟ್ರಕ್ಷನ್ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು.

ನಾರಾಯಣಪುರದಲ್ಲಿ ವಾಸವಾಗಿದ್ದ ಆಶಿಸ್ ಜೀಜಾ ಅವರು ರಾತ್ರಿ 8.15ರ ಸುಮಾರಿನಲ್ಲಿ ಸ್ನೇಹಿತನ ಜೊತೆ ಪಲ್ಸರ್ ಬೈಕ್‍ನಲ್ಲಿ ಬೆಂಗಳೂರು-ಬಳ್ಳಾರಿ ರಸ್ತೆ, ವಿದ್ಯಾನಗರ ಕ್ರಾಸ್ ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಅತಿ ವೇಗವಾಗಿ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ.

100 ಎಕರೆಯಲ್ಲಿ ಕ್ರೀಡಾ ವಿಶ್ವವಿದ್ಯಾಲಯ : ಕ್ರೀಡಾ ಸಚಿವ ಬಿ.ನಾಗೇಂದ್ರ

ಡಿಕ್ಕಿ ರಭಸಕ್ಕೆ ಇಬ್ಬರೂ ಕೆಳಗೆ ಬಿದ್ದಿದ್ದು, ಗಂಭೀರ ಗಾಯಗೊಂಡಿದ್ದ ಹಿಂಬದಿ ಸವಾರ ಆಶಿಸ್‍ನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಪಲಿಸದೇ ಮೃತಪಟ್ಟಿದ್ದಾರೆ. ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುದ್ದಿ ತಿಳಿದು ಚಿಕ್ಕಜಾಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News