ವಾಹನಗಳಿಗೆ ಪ್ಯಾನಿಕ್ ಬಟನ್ ಅಳವಡಿಕೆ ಯೋಜನೆಗೆ 21 ಕೋಟಿ ರೂ. ಮಂಜೂರು

ಬೆಂಗಳೂರು, ನ.15- ಮಹಿಳೆಯರು ಮತ್ತು ಮಕ್ಕಳ ಸುರಕ್ಷತಾ ದೃಷ್ಟಿಯುಳ್ಳ ಸಾರ್ವಜನಿಕ ಸೇವಾ ವಾಹನಗಳಿಗೆವಾಹನದ ಸ್ಥಳ ಟ್ರ್ಯಾಕಿಂಗ್ ಸಾಧನ (ವಿಎಲ್‍ಟಿಡಿ)ಮತ್ತು ತುರ್ತು ಪ್ಯಾನಿಕ್ ಬಟನ್ (ಇಪಿಬಿ) ಅಳವಡಿಕೆ ಯೋಜನೆಗೆ ರಾಜ್ಯ ಸರ್ಕಾರವು 21, 22,30, 649 ರೂ.ಗಳನ್ನು ಸರ್ಕಾರ ಮಂಜೂರು ಮಾಡಿದೆ. ಈ ಯೋಜನೆಯ ಎರಡು ವರ್ಷಗಳ ನಿರ್ವಹಣಾ ವೆಚ್ಚ ಒಳಗೊಂಡಂತೆ ಮೇಲಿನ ಮೊತ್ತಕ್ಕೆ ಸಾರಿಗೆ ಇಲಾಖೆಯು ಆಡಳಿತಾತ್ಮಕ ಒಪ್ಪಿಗೆ ನೀಡಿ ಆದೇಶ ಹೊರಡಿಸಿದೆ. ಇದರಲ್ಲಿ ಕೇಂದ್ರ ಸರ್ಕಾರ ಶೇ.60 ಹಾಗೂ ರಾಜ್ಯ ಸರ್ಕಾರ ಶೇ.40ರಷ್ಟು ವೆಚ್ಚ ಭರಿಸಲಿವೆ. […]

ಮಂಕಿಪಾಕ್ಸ್ ಬಂದಿದ್ದ ಕೇರಳದ ವ್ಯಕ್ತಿ ಸಾವು, ಮತ್ತಷ್ಟು ಹೆಚ್ಚಿದ ಆತಂಕ

ತ್ರಿಶೂರ್ ಆ.1-ಕೇರಳದಲ್ಲಿ ಮಂಕಿಪಾಕ್ಸ್‍ಗೆ ವಿದೇಶದಿಂದ ಬಂದ ಯುವಕ ಮೃತಪಟ್ಟ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆತಂಕ ಶುರುವಾಗಿದೆ. ತ್ರಿಶೂರ್ ಪುನ್ನಿಯೂರ್ ಮೂಲದ 22 ವರ್ಷದ ಯುವಕ, ಯುಎಇಯಿಂದ ಮರಳಿದ ಕೆಲವೇ ದಿನಗಳಲ್ಲಿ ತ್ರಿಶೂರ್ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಯುಎಇಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ಆತನಿಗೆ ಮಂಕಿಪಾಕ್ಸ್ ವೈರಸ್ ಇರುವಿಕೆಯನ್ನು ದೃಢಪಡಿಸಿತ್ತು. ಆದರೆ ಈಗ ಆತ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ವಿಚಿತ್ರವೆಂದರೆ ಯುವಕನಲ್ಲಿ ಮಂಕಿಪಾಕ್ಸ್ ಸೋಂಕಿನ ಯಾವುದೇ ಲಕ್ಷಣಗಳಿರಲಿಲ್ಲ. ಆಯಾಸದ ಲಕ್ಷಣಗಳೊಂದಿಗೆ ಅವರನ್ನು […]