ದಾವಣಗೆರೆ,ಮೇ.22-ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯೊಬ್ಬರನ್ನು ಮಾರಾಟ ಮಾಡಿದ್ದ ನಾಲ್ವರನ್ನು ಹೊನ್ನಾಳಿ ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿ ಪಟ್ಟಣದ ನಿವಾಸಿಗಳಾದ ಮಲ್ಲಿಕಾರ್ಜುನ್, ಲೋಕೇಶ್ ನಾಯ್ಕ್, ಲಿಲ್ಲಿ, ರೂಪಾ ಬಂಧಿತ ಆರೋಪಿಳಾಗಿದ್ದಾರೆ.
ಮಹಿಳೆಯ ಸಹೋದರ ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡ ಹೊನ್ನಾಳಿ ಪೊಲೀಸರು ಮಹಿಳೆಯನ್ನು ರಕ್ಷಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಪತಿ ನಿಧನದಿಂದ ಜೀವನ ನಡೆಸಲು ಸಂಕಷ್ಟದಲ್ಲಿದ್ದ ಮಹಿಳೆಯನ್ನು ಸಂಕರ್ಕಿಸಿದ ಆರೋಪಿಗಳು ಕಲ್ಯಾಣ ಮಂಟಪದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಮೊದಲು ಶಿವಮೊಗ್ಗಕ್ಕೆ ಕರೆದೊಯ್ದಿದ್ದರು.
ನಂತರ ಕೆಲಸ ಮುಗಿಸಿಕೊಂಡು ಮನೆಗೆ ಮಹಿಳೆ ಹಿಂತಿರುಗಿದ್ದರು ಮತ್ತೆ ಮೇ.13 ರಂದು ಮಹಾರಾಷ್ಟ್ರದ ಸೊಲ್ಲಾಪುರದ ಮನೆಯೊಂದರಲ್ಲಿ ಕೆಲಸವಿದೆ, ಅಲ್ಲಿ ನೀನು ಚೆನ್ನಾಗಿ ಇರುತ್ತೀಯಾ ಎಂದು ನಂಬಿಸಿ ಕರೆದುಕೊಂಡು ಹೋಗಿದ್ದರು. ನಂತರ ಅಲ್ಲಿ ಒಂದು ಲಕ್ಷಕ್ಕೆ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದರು.
ಸ್ವಲ್ಪ ದಿನದ ನಂತರ ಸ್ಥಳೀತರೊಬ್ಬರ ಮೊಬೈಲ್ ಮೂಲಕ ತಂಗಿಗೆ ಕರೆ ಮಾಡಿ ಘಟನೆಯನ್ನು ವಿವರಿಸಿದ್ದರು. ಈ ನಡುವೆ 1 ಲಕ್ಷ ಕೊಟ್ಟರೆ ನಿನ್ನ ಆಕೆಯನ್ನು ಬಿಡುವುದಾಗಿ ಹೇಳಿದ್ದರು ತಡ ಮಾಡದೆ ಮಹಿಳೆಯ ಸಹೋದರ ಹೊನ್ನಾಳಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರುತಕ್ಕಣ ಕಾರ್ಯಪ್ರವೃತ್ತರಾದ ಪೊಲೀಸರು ನೆರೆ ರಾಜ್ಯಕ್ಕೆ ತೆರಳು ಮಹಿಳೆಯನ್ನು ರಕ್ಷಿಸಿದ್ದರು .
ಇದು ತಿಳಿಯುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದರು. ಕಾರ್ಯಾಚರಣೆ ಕೈಗೊಂಡು ಕಳೆದ ರಾತ್ರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.ಪ್ರಕರಣದಲ್ಲಿ ಇನ್ನು ಹಲವರಿದ್ದು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.