Sunday, January 19, 2025
Homeರಾಷ್ಟ್ರೀಯ | Nationalದೋಣಿ ಮುಳುಗಿ ಇಬ್ಬರು ಮಕ್ಕಳು ಸೇರಿ ಆರು ಮಂದಿ ಸಾವು

ದೋಣಿ ಮುಳುಗಿ ಇಬ್ಬರು ಮಕ್ಕಳು ಸೇರಿ ಆರು ಮಂದಿ ಸಾವು

ಪುಣೆ, ಮೇ 22- ಮಹಾರಾಷ್ಟ್ರದ ಪುಣೆ ಜಿಲ್ಲೆಯ ಉಜನಿ ಅಣೆಕಟ್ಟಿನ ಹಿನ್ನೀರಿನಲ್ಲಿ ದೋಣಿ ಮುಳುಗಿ ಇಬ್ಬರು ಮಕ್ಕಳು ಸೇರಿದಂತೆ ಆರು ಜನರು ಮುಳುಗಿ ಸಾವನ್ನಪ್ಪಿದ್ದಾರೆ. ಮಂಗಳವಾರ ಸಂಜೆ ಭಾರೀ ಗಾಳಿ ಮತ್ತು ಮಳೆಯಿಂದಾಗಿ ಈ ಘಟನೆ ನಡೆದಿದೆ ಎಂದು ಇಂದಾಪುರ ತಹಸೀಲ್ದಾರ್‌ ಶ್ರೀಕಾಂತ್‌ ಪಾಟೀಲ್‌ ತಿಳಿಸಿದ್ದಾರೆ.

ಮೃತರಲ್ಲಿ ಮೂವರು ಪುರುಷರು, ಮಹಿಳೆ ಹಾಗೂ ಇಬ್ಬರು ಮಕ್ಕಳು ಸೇರಿದ್ದಾರೆ ಈ ದೋಣಿ ಕಲಾಶಿ ಮತ್ತು ಭುಗಾವ್‌ ಗ್ರಾಮಗಳ ನಡುವೆ ಜನರನ್ನು ಸಾಗಿಸುವ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.

ಬಲವಾದ ಬೀಸಿದ ಗಾಳಿ ಮತ್ತು ಜೋರು ಮಳೆಯ ಕಾರಣ ದೋಣಿ ಪಲ್ಟಿಯಾಗಿದೆ ಅದರಲ್ಲಿ ಏಳು ಜನರಿದ್ದರು ಅದರ ಪೈಕಿ ಸಹಾಯಕ ಪೊಲೀಸ್‌‍ ಇನ್‌್ಸಪೆಕ್ಟರ್‌ ಶ್ರೇಣಿಯ ಅಧಿಕಾರಿಯೊಬ್ಬರು ಈಜಿಕೊಂಡು ಸುರಕ್ಷಿತವಾಗಿ ದಡಸೇರಿದ್ದಾರೆ ಎಂದು ತಿಳಿಸಿದ್ದಾರೆ. ಎನ್‌ಡಿಆರ್‌ಎಫ್‌ ಮತ್ತು ಸ್ಥಳೀಯ ಆಡಳಿತದ ಸಹಾಯದಿಂದ ನೀರಿನಲ್ಲಿ ಮುಳುಗಿರುವವರ ಬಗ್ಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದರು.

RELATED ARTICLES

Latest News