Sunday, December 1, 2024
Homeಜಿಲ್ಲಾ ಸುದ್ದಿಗಳು | District Newsಪ್ರೀತಿಸಿದವಳ ಜೊತೆ ನೇಣಿಗೆ ಶರಣಾದ ಪೊಲೀಸ್‌‍ ಕಾನ್‌ಸ್ಟೇಬಲ್‌

ಪ್ರೀತಿಸಿದವಳ ಜೊತೆ ನೇಣಿಗೆ ಶರಣಾದ ಪೊಲೀಸ್‌‍ ಕಾನ್‌ಸ್ಟೇಬಲ್‌

ಹುಬ್ಬಳ್ಳಿ,ಮೇ.22-ಪ್ರೀತಿಸುತ್ತಿದ್ದ ಮಹಿಳೆಯೊಂದಿಗೆ ಪೊಲೀಸ್‌‍ ಕಾನ್ಸ್ ಟೇಬಲ್‌‍ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಗಾಮನಗಟ್ಟಿಯಲ್ಲಿ ನಡೆದಿದೆ. ಆತಹತ್ಯೆಗೆ ಮಾಡಿಕೊಂಡವರನ್ನು ಮಹೇಶ ಹೆಸರೂರು(32) ಮತ್ತು ವಿಜಯಲಕ್ಷ್ಮೀ (30)ಎಂದು ಗುರುತಿಸಲಾಗಿದೆ.

ಧಾರವಾಡ ಸಂಚಾರಿ ಪೊಲೀಸ್‌‍ ಠಾಣೆಯ ಕಾನ್‌ಸ್ಟೇಬಲ್‌ ಆಗಿ ಸೇವೆ ಸಲ್ಲಿಸುತ್ತಿದ್ದ ಮಹೇಶ ಹೆಸರೂರು ಈಗಾಗಲೇ ಮದುವೆಯಾಗಿದ್ದರೂ ವಿಜಯಲಕ್ಷ್ಮೀ ಜೊತೆ ಸಂಬಂಧ ಹೊಂದಿದ್ದರು .

ಕಳೆದ 15 ದಿನದ ಹಿಂದೆ ಗಾಮನಗಟ್ಟಿಯಲ್ಲಿ ಬಾಡಿಗೆ ಮನೆ ಮಾಡಿ ಅಲ್ಲಿ ವಿಜಯಲಕ್ಷ್ಮೀ ಅವರು ವಾಸವಿದ್ದರು ತಿಳಿದುಬಂದಿದೆ. ಮನೆಯಿಂದ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದು ಸ್ಥಳಕ್ಕೆ ನವನಗರ ಠಾಣೆ ಪೊಲೀಸರು ಆಗಮಿಸಿ ಬಾಗಿಲು ಒಡೆದು ನೋಡಿದಾಗ ಇಬ್ಬರು ನೇಣಿಗೆ ಶರಣಾಗಿರುವುದು ಕಂಡು ಬಂದಿದೆ.

ಪ್ರಾಥಮಿಕ ತನಿಖೆ ನಡೆಸಿದಾಗ ಮಹೇಶ ಹೆಸರೂರು ಪೊಲೀಸ್‌‍ಕಾನ್‌್ಸಟೇಬಲ್‌‍ ಎಂದು ಗೊತ್ತಾಗಿದೆ. ಎರಡು ಮೂರು ದಿನಗಳ ಹಿಂದೆ ಮನೆಯೊಂದರಲ್ಲಿ ಆತಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಮಹೇಶ ಮನೆಗೆ ಬರದಿದ್ದಾಗ ಅವರು ಎಲ್ಲೂ ಹೋಗಿರಬಹುದು ಎಂದು ತಿಳಿದಿದ್ದರು ಆದರೆ ಈಗ ಈ ಘಟನೆ ಆತಂಕ ಮೂಡಿಸಿದೆ. ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

RELATED ARTICLES

Latest News