ಗುವಾಹಟಿ, ಮಾ.11- ಬಾಂಗ್ಲಾದೇಶದಿಂದ ನಾಲ್ವರು ನುಸುಳುಕೋರರನ್ನು ಬಂಧಿಸಿ ನೆರೆಯ ದೇಶಕ್ಕೆ ಗಡಿಪಾರು ಮಾಡಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ಅವರನ್ನು ಅಬ್ದುಲ್ ಕಬೀರ್, ಬೋದಿಯುರ್ ರೆಹಮಾನ್, ಎಂಡಿ ತಯೂಬ್ ಮತ್ತು ಅಬ್ದುಲ್ ಕಲಾಂ ಎಂದು ಗುರುತಿಸಲಾಗಿದೆ.
ಮಧ್ಯರಾತ್ರಿಯ ಎಕ್‌್ಸನ ಪೋಸ್ಟ್‌ನಲ್ಲಿ, ನಾಲ್ವರು ಅಕ್ರಮ ನುಸುಳುಕೋರರನ್ನು ಬಂಧಿಸಿ ಗಡೀಪಾರು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಒಳನುಸುಳುವಿಕೆಯನ್ನು ಎದುರಿಸಲು ತಮ ಪ್ರಯತ್ನಗಳನ್ನು ಮುಂದುವರೆಸುತ್ತಾ, 4 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿ ಗಡಿಯುದ್ದಕ್ಕೂ ಹಿಂದಕ್ಕೆ ತಳ್ಳಲಾಗಿದೆ.
ಆದಾಗ್ಯೂ, ಅವರನ್ನು ಎಲ್ಲಿ ಬಂಧಿಸಲಾಯಿತು ಅಥವಾ ಯಾವ ಗಡಿ ಜಿಲ್ಲೆಯ ಮೂಲಕ ಅವರನ್ನು ಗಡಿಪಾರು ಮಾಡಲಾಯಿತು ಎಂಬುದನ್ನು ಶರ್ಮಾ ಉಲ್ಲೇಖಿಸಲಿಲ್ಲ. ಕಳೆದ ಏಳು ತಿಂಗಳಲ್ಲಿ ಬಾಂಗ್ಲಾದೇಶದಿಂದ 305 ನುಸುಳುಕೋರರನ್ನು ಬಂಧಿಸಿ ಅವರ ದೇಶಕ್ಕೆ ವಾಪಸ್ ಕಳುಹಿಸಲಾಗಿದೆ ಮತ್ತು ರಾಜ್ಯ ಸರ್ಕಾರವು ಒಳನುಸುಳುವಿಕೆ ಮುಕ್ತ ಅಸ್ಸಾಂ ಗೆ ಬದ್ಧವಾಗಿದೆ ಎಂದು ಸಿಎಂ ಈ ಹಿಂದೆ ಹೇಳಿದ್ದರು.
ಈಶಾನ್ಯದಲ್ಲಿ 1,885-ಕಿಮೀ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬಿಎಸ್‌ಎಫ್ ತನ್ನ ಜಾಗರೂಕತೆಯನ್ನು ತೀವ್ರಗೊಳಿಸಿದೆ. ಯಾವುದೇ ವ್ಯಕ್ತಿ ಅಕ್ರಮವಾಗಿ ರಾಜ್ಯಕ್ಕೆ ಪ್ರವೇಶಿಸದಂತೆ ಅಸ್ಸಾಂ ಪೊಲೀಸರು ಗಡಿಯುದ್ದಕ್ಕೂ ಹೆಚ್ಚಿನ ಎಚ್ಚರಿಕೆ ವಹಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.