Thursday, September 19, 2024
Homeರಾಷ್ಟ್ರೀಯ | Nationalಟೀ ಅಂಗಡಿ ಮೇಲೆ ಟ್ಯಾಂಕರ್‌ ಉರುಳಿ ಬಿದ್ದು ನಾಲ್ವರ ಸಾವು

ಟೀ ಅಂಗಡಿ ಮೇಲೆ ಟ್ಯಾಂಕರ್‌ ಉರುಳಿ ಬಿದ್ದು ನಾಲ್ವರ ಸಾವು

ಬರ್ಹಾಂಪುರ, ಆ.22 (ಪಿಟಿಐ) ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಬಸ್‌‍ ಮತ್ತು ಟ್ಯಾಂಕರ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ನಂತರ ರಸ್ತೆ ಬದಿಯ ಟೀ ಅಂಗಡಿ ಮೇಲೆ ಟ್ಯಾಂಕರ್‌ ಪಲ್ಟಿಯಾದ ಪರಿಣಾಮ ನಾಲ್ವರು ಮತಪಟ್ಟು 13 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 59 ರಲ್ಲಿ ಹಿಂಜಿಲಿ ಬಳಿಯ ಸಮರಜೋಳದಲ್ಲಿ ಅಪಘಾತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.

ಬಸ್‌‍ ಭವಾನಿಪಟ್ಟಣದಿಂದ ಬರ್ಹಾಂಪುರಕ್ಕೆ ತೆರಳುತ್ತಿದ್ದಾಗ ಟ್ಯಾಂಕರ್‌ ಅಸ್ಕಾ ಕಡೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ. ಬಸ್‌‍ನಲ್ಲಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಉಳಿದ ಮೂವರು ಮತಪಟ್ಟವರು ಟೀ ಸ್ಟಾಲ್‌ನಲ್ಲಿ ಕುಳಿತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡವರನ್ನು ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ.

ನಾವು ಇಲ್ಲಿಯವರೆಗೆ ನಾಲ್ಕು ಸಾವುಗಳನ್ನು ಖಚಿತಪಡಿಸಿದ್ದೇವೆ ಎಂದು ಪೊಲೀಸ್‌‍ ವರಿಷ್ಠಾಧಿಕಾರಿ ಜಗಮೋಹನ್‌ ಮೀನಾ ಹೇಳಿದ್ದಾರೆ. ಮತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದರು.ಪೊಲೀಸ್‌‍ ತಂಡ ಮತ್ತು ಅಗ್ನಿಶಾಮಕ ದಳದವರು ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಿದ ನಂತರ ಸಂಚಾರ ಪುನರಾರಂಭಗೊಂಡಿತು.

RELATED ARTICLES

Latest News