Tuesday, December 5, 2023
Homeರಾಷ್ಟ್ರೀಯಟ್ರಕ್‍ಗೆ ಕಾರು ಅಪ್ಪಳಿಸಿ ಒಂದೇ ಕುಟುಂಬದ ನಾಲ್ವರ ಸಾವು

ಟ್ರಕ್‍ಗೆ ಕಾರು ಅಪ್ಪಳಿಸಿ ಒಂದೇ ಕುಟುಂಬದ ನಾಲ್ವರ ಸಾವು

ಕೋಟಾ, ನ.12 (ಪಿಟಿಐ) ರಾಜಸ್ಥಾನದ ಬುಂದಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಟ್ರಕ್‍ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಧ್ಯಪ್ರದೇಶದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತರು ಪುಷ್ಕರ್‍ಗೆ ತೆರಳುತ್ತಿದ್ದಾಗ ಹಿಂದೋಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ. ಮೃತರನ್ನು ಮಧ್ಯಪ್ರದೇಶದ ಅರ್ಗ-ಮಾಲ್ವಾ ಜಿಲ್ಲೆಯ ಗಂಗುಖೇಡಿ ಗ್ರಾಮದ ನಿವಾಸಿಗಳಾದ ದೇವಿ ಸಿಂಗ್ (50), ಅವರ ಪತ್ನಿ ಮಾಂಖೋರ್ ಕನ್ವರ್ (45), ಅವರ ಸಹೋದರ ರಾಜಾರಾಂ (40) ಮತ್ತು ಸೋದರಳಿಯ ಜಿತೇಂದ್ರ (20) ಎಂದು ಗುರುತಿಸಲಾಗಿದೆ.

ರಾಜ್ಯದ ಬೊಕ್ಕಸಕ್ಕೆ ನಷ್ಟವುಂಟುಮಾಡಿದ ಆರೋಪ : ಮಾಜಿ ಸಚಿವ ಸೇರಿ 8 ಮಂದಿ ವಿರುದ್ಧ ಕೇಸ್

12.30 ರ ಸುಮಾರಿಗೆ ನಾಲ್ವರನ್ನು ಹೊತ್ತೊಯ್ಯುತ್ತಿದ್ದ ಎಸ್‍ಯುವಿ ಹಿಂದೋಲಿ ಪಟ್ಟಣದ ಬಳಿ ಹಿಂದಿನಿಂದ ಹೆವಿ ಡ್ಯೂಟಿ ಟ್ರಕ್‍ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಹಿಂದೋಳಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‍ಪೆಕ್ಟರ್ ಮನೋಜ್ ಸಿಕರ್ವಾಲ್ ತಿಳಿಸಿದ್ದಾರೆ.

ಎಸ್‍ಯುವಿ ಬಹುಶಃ ವೇಗವಾಗಿ ಚಲಿಸುತ್ತಿತ್ತು ಮತ್ತು ಮುಂದೆ ಇದ್ದ ಟ್ರಕ್ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದರಿಂದ ವಾಹನವು ಅದರೊಳಗೆ ನುಗ್ಗಿತು ಎಂದು ಅವರು ಹೇಳಿದರು.

RELATED ARTICLES

Latest News