Thursday, June 20, 2024
Homeರಾಷ್ಟ್ರೀಯಮಧ್ಯಪ್ರದೇಶ : ಕಾರು ಪಲ್ಟಿಯಾಗಿ 4 ಮಂದಿ ಸಾವು

ಮಧ್ಯಪ್ರದೇಶ : ಕಾರು ಪಲ್ಟಿಯಾಗಿ 4 ಮಂದಿ ಸಾವು

ಸತ್ನಾ, (ಮಧ್ಯಪ್ರದೇಶ) ಜು.3 –ಕಾರೊಂದು ಪಲ್ಟಿಯಾದ ಪರಿಣಾಮ ನಾಲ್ವರು ಸಾವನ್ನಪ್ಪಿ, ಇಬ್ಬರು ಗಂಬೀರವಾಗಿ ಗಾಯಗೊಂಡಿರುವ ಘಟನೆ ಸತ್ನಾ ಜಿಲ್ಲೆಯ ರಾಂಪುರ ಬಘೇಲನ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ನಡೆದಿದೆ.

ಸತ್ನಾ-ರೇವಾ ರಸ್ತೆಯ ಮಂಕಾರಿ ಗ್ರಾಮದ ಬಳಿ ತಡರಾತ್ರಿ ಈ ಅಪಘಾತ ಸಂಭವಿಸಿದೆ.ಮೃತರನ್ನು ಶಿಬು ತಿವಾರಿ, ಶಿವ ಪಾಂಡೆ, ನಿತಿನ್‌ ಮತ್ತು ಶಾನು ಖಾನ್‌ ಎಂದು ಗುರುತಿಸಲಾಗಿದೆ.

ಆರು ಜನರು ಪ್ರಯಾಣಿಸುತ್ತಿದ್ದ ಕಾರು ಚಾಲಕನನಿಯಂತ್ರಣ ಮಂಕಾರಿ ತಿರುವಿನಲ್ಲಿ ಪಲ್ಟಿಯಾಗಿದೆ ಎಂದು ನಗರ ಪೊಲೀಸ್‌‍ ವರಿಷ್ಠಾಧಿಕಾರಿ ಮಹೇಂದ್ರ ಸಿಂಗ್‌ ತಿಳಿಸಿದ್ದಾರೆ. ಗಾಯಗೊಂಡ ಇಬ್ಬರು ವ್ಯಕ್ತಿಗಳನ್ನು ಸತ್ನಾ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನಂತರ ರೇವಾದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಘಟನೆ ಕುರಿತಂತೆ ಬಘೇಲನ್‌ ಠಾಣೆ ಪೊಲೀಸರು ಪ್ರಕರನ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News