ರಜೌರಿ/ಜಮ್ಮು, ಜ 11 (ಪಿಟಿಐ) ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಟಿಫಿನ್ ಬಾಕ್ಸ್‍ಗಳಲ್ಲಿ ಅಳವಡಿಸಲಾಗಿದ್ದ ನಾಲ್ಕು ಸುಧಾರಿತ ಸ್ಪೋಟಕ ಸಾಧನಗಳು (ಐಇಡಿ) ಮತ್ತು ಎಕೆ ಸರಣಿಯ ಸುಮಾರು ಎರಡು 12 ಬುಲೆಟ್‍ಗಳನ್ನು ಸಿಆರ್‌ಪಿಎಫ್ ಯೋಧರು ವಶಪಡಿಸಿಕೊಂಡಿದ್ದಾರೆ.
ಜಮ್ಮು ಪ್ರದೇಶದಲ್ಲಿ ನಿಯೋಜಿಸಲಾದ ಗುಪ್ತಚರ ವಿಭಾಗದಿಂದ ಬಂದ ಮಾಹಿತಿ ಆಧಾರದ ಮೇಲೆ ಸಿಆರ್‌ಪಿಎಫ್ ಅರೆಸೈನಿಕ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆಯ 237 ನೇ ಬೆಟಾಲಿಯನ್‍ನ ಸಿ ಕಂಪನಿಯ ಪಡೆಗಳು ಸ್ಥಳೀಯ ಪೊಲೀಸರೊಂದಿಗೆ ಹಯಾತ್‍ಪುರ-ಮಂಜಕೋಟ್ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ಕೈಗೊಂಡವು ಟಿಫಿನ್ ಬಾಕ್ಸ್‍ಗಳಲ್ಲಿ ಬಚ್ಚಿಟ್ಟಿದ್ದ ನಾಲ್ಕು ಐಇಡಿಗಳು, ಎಕೆ ಅಸಾಲ್ಟ್ ರೈಫಲ್ ಗಳ 23 ಲೈವ್ ಬುಲೆಟ್‍ಗಳು, ವೈರ್‍ಲೆಸ್ ಸೆಟ್ ಮತ್ತು ಟೇಪ್ ರೆಕಾರ್ಡರ್ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ಟೆಕ್ಕಿಗಳಿಂದ ಹಣದಾಸೆಗಾಗಿ ಮ್ಯಾಟ್ರೋಮೋನಿ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ
ಕಳೆದ ಎರಡು ವರ್ಷಗಳಿಂದ ಪೂಂಚ್-ರಜೌರಿ ಪ್ರದೇಶದಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ಚಟುವಟಿಕೆಗಳನ್ನು ನಡೆಸುತ್ತಿರುವ ಕಾರಣ ಶೋಧ ಕಾರ್ಯಾಚರಣೆಯನ್ನು ವಿಸ್ತರಿಸಲಾಗಿದೆ ಮತ್ತು ಪಕ್ಕದ ಪ್ರದೇಶಗಳನ್ನು ಶೋದಿಸಲಾಗುತ್ತಿದೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೇನೆಯ ಕಾರ್ಯಾಚರಣೆ ಘಟಕಗಳು ಮತ್ತು ರಾಷ್ಟ್ರೀಯ ರೈಫಲ್ಸ್ ಸಹ ಉಗ್ರರ ಚಟುವಟಿಕೆ ಮಟ್ಟಹಾಕಲು ಇಲ್ಲಿ ನಿಯೋಜಿಸಲಾಗಿದೆ.