Sunday, December 1, 2024
Homeಮನರಂಜನೆಬಾಯ್‍ಫ್ರೆಂಡ್ ಜೊತೆ ಸಪ್ತಪದಿ ತುಳಿಯಲಿದ್ದಾರೆ ಸ್ಟಾರ್ ನಟಿ ಆರ್‌ಪಿಎಸ್

ಬಾಯ್‍ಫ್ರೆಂಡ್ ಜೊತೆ ಸಪ್ತಪದಿ ತುಳಿಯಲಿದ್ದಾರೆ ಸ್ಟಾರ್ ನಟಿ ಆರ್‌ಪಿಎಸ್

ಬೆಂಗಳೂರು, ಜ.11- ಚಿತ್ರರಂಗದಲ್ಲಿ ಈಗ ಮದುವೆಯ ಸಂಭ್ರಮ ಮನೆ ಮಾಡಿದ್ದು, ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ತಮ್ಮ ದೀರ್ಘಕಾಲದ ಬಾಯ್‍ಫ್ರೆಂಡ್ ಜೊತೆಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ನವರಸ ನಾಯಕ ಜಗ್ಗೇಶ್ ಪುತ್ರ ಗುರುರಾಜ್ ನಟನೆಯ ಗಿಲ್ಲಿ ಚಿತ್ರದ ಮೂಲಕ ಬೆಳ್ಳಿಪರದೆಗೆ ಪದಾರ್ಪಣೆ ಮಾಡಿದ ಸಪೋರ ಮೈಮಾಟದ ನಟಿ ರಾಕುಲ್ ಪ್ರೀತ್ ಸಿಂಗ್ ನಂತರ ತೆಲುಗು, ತಮಿಳು ಹಾಗೂ ಬಾಲಿವುಡ್ ಚಿತ್ರಗಳಲ್ಲೂ ಬ್ಯುಜಿ ನಟಿಯಾದರು.

ರಾಕುಲ್ ಪ್ರೀತ್ ಸಿಂಗ್ ಅವರು ಬಹ ದಿನಗಳಿಂದ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಜಾಕಿ ಭಗ್ನಾನಿ ಜೊತೆಗೆ ಡೇಟಿಂಗ್ ನಟಿಸುತ್ತಿದ್ದು, ಇವರಿಬ್ಬರ ಫೆಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಿಂಚು ಹರಿಸಿದ್ದವು.

ಈಗ ಫೆಬ್ರವರಿ 22 ರಂದು ಗೋವಾದಲ್ಲಿ ರಾಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ಅವರು ವಿವಾಹವಾಗಲು ಮುಂದಾಗಿದ್ದು , ಚಿತ್ರರಂಗದ ಆಪ್ತರಿಗೆ ಹಾಗೂ ಕುಟುಂಬದವರಿಗೆ ಮಾತ್ರ ಆಹ್ವಾನ ನೀಡುತ್ತಾರಂತೆ. ಆದರೆ…. ಮದುವೆಗೆ ಬರುವ ಅತಿಥಿಗಳು ತಮ್ಮ ಪ್ರೈವೆಸಿ ಧಕ್ಕೆ ತರಬಾರದು ಎಂಬ ಉದ್ದೇಶದಿಂದ ಯಾರೂ ಮೊಬೈಲ್ ಬಳಸಬಾರದು ಎಂದು ಹೇಳುವ ಮೂಲಕ ಆರ್‌ಪಿಎಸ್ ಶಾಕ್ ನೀಡಿದ್ದಾರೆ.

ನಾಳೆ ಪ್ರಧಾನಿಯಿಂದ ಅಟಲ್ ಸೇತುವೆ ಲೋಕಾರ್ಪಣೆ

ಸದ್ಯ ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಆಆರ್‌ಪಿಎಸ್ ಹಾಗೂ ಜಾಕಿಭಗ್ನಾನಿ ಅವರು ಥಾಯ್ಲೆಂಡ್‍ನಲ್ಲಿ ಜಾಲಿ ಮೂಡ್‍ನಲ್ಲಿದ್ದಾರೆ. ಚಿತ್ರರಂಗದಲ್ಲಿ ಸದಾ ಬ್ಯುಸಿಯಾಗಿರುವ ರಾಕುಲ್ ಪ್ರೀತ್ ಸಿಂಗ್ ಸದ್ಯ ಕಮಲಹಾಸನ್ ನಟನೆಯ ಇಂಡಿಯನ್ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಬಿ ಸಿಂಹ ಹಾಗೂ ಪ್ರಿಯಾ ಭವಾನಿ ಅವರು ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿದ್ದಾರೆ.

RELATED ARTICLES

Latest News