Saturday, September 14, 2024
Homeರಾಜ್ಯಪ್ರಜ್ವಲ್ ಪೆನ್‌ಡ್ರೈವ್‌ ಪ್ರಕರಣದಲ್ಲಿ ಪ್ರೀತಂಗೌಡಗೆ ನೋಟಿಸ್ ಸಾಧ್ಯತೆ..?

ಪ್ರಜ್ವಲ್ ಪೆನ್‌ಡ್ರೈವ್‌ ಪ್ರಕರಣದಲ್ಲಿ ಪ್ರೀತಂಗೌಡಗೆ ನೋಟಿಸ್ ಸಾಧ್ಯತೆ..?

ಬೆಂಗಳೂರು, ಜೂ.25– ಮಾಜಿ ಶಾಸಕ, ಬಿಜೆಪಿ ಮುಖಂಡ ಪ್ರೀತಂಗೌಡ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಯಾವುದೇ ಕ್ಷಣದಲ್ಲಾದರೂ ಎಸ್‌‍ಐಟಿ ನೋಟಿಸ್‌‍ ನೀಡಲಿದೆ. ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯದ ವಿಡಿಯೋ ಮಾಡಿ ವೈರಲ್‌ ಮಾಡಿರುವ ಬಗ್ಗೆ ಸಿಐಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ, ಬಿಜೆಪಿ ಮುಖಂಡ ಪ್ರೀತಂಗೌಡ, ಆಪ್ತರಾದ ಕಿರಣ್‌, ಶರತ್‌ ವಿರುದ್ಧ ಸಿಐಡಿ ಸೈಬರ್‌ ಕ್ರೈಮ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.ಪೆನ್‌ಡ್ರೈವ್‌ ಖರೀದಿ ಮಾಡಿಸಿ ಹಂಚಿಸಿದ್ದ ಆರೋಪ ಪ್ರೀತಂಗೌಡ ಅವರ ಮೇಲಿದೆ. ಹಾಗಾಗಿ ಎಸ್‌‍ಐಟಿ ನೋಟಿಸ್‌‍ ನೀಡುವ ಸಾಧ್ಯತೆ ಇದೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಾಸನ ಜಿಲ್ಲೆಯಾದ್ಯಂತ ಪ್ರಜ್ವಲ್‌ ರೇವಣ್ಣಗೆ ಸೇರಿದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಹರಿದಾಡಿದ್ದವು.ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಹೆಚ್ಚಿನ ತನಿಖೆಗಾಗಿ ಎಸ್‌‍ಐಟಿ ತನಿಖೆ ಮಾಡಿದೆ.

RELATED ARTICLES

Latest News