ಚಿಕ್ಕಮಗಳೂರು,ಡಿ.23- ನಗರದ ಅರಳುಗುಪ್ಪೆ ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಜಿಲ್ಲಾ ಸರ್ಜನ್ ಕಚೇರಿ ಎದುರು ನಿಂತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳೀಯರು ಬೆಂಕಿಯನ್ನು ನಂದಿಸಿ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.
ಅಡ್ವೆಂಚರ್ ಕ್ಲಬ್ಬಿನ ರೂಬೆನ್ ಮೊಸಸ್ ಆಸ್ಪತ್ರೆಯ ಆಕ್ಸಿಜನ್ ಸಿಲಿಂಡರ್ ಮೂಲಕ ಬೆಂಕಿ ನಂದಿಸಲು ಪ್ರಯತ್ನಿಸಿದರು. ಎರಡು ಸಿಲಿಂಡರ್ ಖಾಲಿಯಾದರೂ ಬೆಂಕಿ ಆರಲಿಲ್ಲ. ತಕ್ಷಣ ಆಸ್ಪತ್ರೆಯಲ್ಲಿದ್ದ ಬಕೆಟ್‌ಗಳಲ್ಲಿದ್ದ ನೀರನ್ನು ಹಾಕಿದ ಕಾರಣ ಬೆಂಕಿ ನಂದಿಹೋಯಿತು.
ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ಸಂಭವಿಸಲಿಲ್ಲ. ಅಗ್ನಿಶಾಮಕ ದಳಕ್ಕೆ ಜಿಲ್ಲಾ ಆಸ್ಪತ್ರೆಯಿಂದ ಮಾಹಿತಿ ನೀಡಿದ ಕಾರಣ ಅಗ್ನಿಶಾಮಕ ತಂಡದವರು ಆಗಮಿಸಿದರು. ಅಷ್ಟರಲ್ಲಿ ಬೆಂಕಿ ನಂದಿ ಹೋಗಿದ್ದು ಆದರೂ ಅಗ್ನಿಶಾಮಕ ದಳದವರು ಕಾರಿನ ಮೇಲೆ ನೀರನ್ನು ಹಾಯಿಸಿದರು.
