Friday, April 4, 2025
Homeಜಿಲ್ಲಾ ಸುದ್ದಿಗಳು | District Newsಕಿರಿಕ್ ಪಾರ್ಟಿ : ಕಲ್ಲಿನಿಂದ ಜಜ್ಜಿ ಸ್ನೇಹಿತನ ಕೊಲೆ

ಕಿರಿಕ್ ಪಾರ್ಟಿ : ಕಲ್ಲಿನಿಂದ ಜಜ್ಜಿ ಸ್ನೇಹಿತನ ಕೊಲೆ

ಕನಕಪುರ,ಡಿ.25- ಪಾರ್ಟಿ ವೇಳೆ ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳ ನಡೆದು, ಗೆಳೆಯನನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಕಲ್ಲುಕೆರೆ ದೊಡ್ಡಿ ಗ್ರಾಮದಲ್ಲಿ ನಡೆದಿದೆ. ದೀಪಕ್ (23) ಕೊಲೆಯಾದ ದುರ್ದೈವಿ. ಕೃತ್ಯ ನಡೆದ ಕೆಲವೇ ಘಂಟೆಗಳಲ್ಲಿ ಕೊಲೆ ಆರೋಪಿ ಪ್ರಸಾದ್ (23)ನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಸಾದ್ ತಂದೆ ನೂತನ ಮನೆ ಕಟ್ಟಿಸಿದ್ದು ಇನ್ನೂ ಗೃಹ ಪ್ರವೇಶವಾಗಿರಲಿಲ್ಲ. ಈ ಮನೆಯಲ್ಲಿ ಸ್ನೇಹಿತರೆಲ್ಲ ಸೇರಿ ರಾತ್ರಿ ಪಾರ್ಟಿ ಮಾಡಿದ್ದಾರೆ.ಪಾರ್ಟಿ ವೇಳೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದು, ಹಳೇ ದ್ವೇಷದ ಹಿನ್ನೆಲೆಯಲ್ಲಿ ದೀಪಕ್ ತಲೆ ಮೇಲೆ ಕಲ್ಲನ್ನು ಎತ್ತಿಹಾಕಿ ಕೊಲೆ ಮಾಡಲಾಗಿದೆ.

ರಾಮಮಂದಿರ ಪ್ರತಿಷ್ಠಾಪನೆಗೆ ರಾಕಿಂಗ್ ಸ್ಟಾರ್ ಯಶ್‍ಗೆ ಆಹ್ವಾನ

ಕೊಲೆ ಮಾಡಿ ಅಲ್ಲೇ ಇದ್ದ ವಿಚಾರ ತಿಳಿದ ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಬಿ.ಮನೋಹರ್ ಅವರು ಸ್ಥಳಕ್ಕೆ ಧಾವಿಸಿಯನ್ನು ಆರೋಪಿಯನ್ನು ಬಂಧಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಕೆ.ಸಿ.ಗಿರಿ ಸರ್ಕಲ್ ಇನ್ಸ್ಪೆಕ್ಟರ್ ಕೆ.ಎಲ್.ಕೃಷ್ಣ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಆರೋಪಿ ವಿರುದ್ಧ ದೂರು ದಾಖಲು ಮಾಡಲಾಗಿದೆ.

RELATED ARTICLES

Latest News